ADVERTISEMENT
Tuesday, February 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಜಗತ್ತು ಕಂಡ ಅತಿ ಭಯಂಕರರು ಈ ಸರ್ವಾಧಿಕಾರಿಗಳು..!

Namratha Rao by Namratha Rao
September 2, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಜಗತ್ತು ಕಂಡ ಅತಿ ಭಯಂಕರರು ಈ ಸರ್ವಾಧಿಕಾರಿಗಳು..!

ಪ್ರಸ್ತುತ ಜಗತ್ತಿನಲ್ಲಿ ಸರ್ವಾಧಿಕಾರಿ , ಕ್ರೂರಿ ಅಂದ್ರೆ ಕಣ್ಮುಂದೆ ಬರೋದು  3 ಅಡಿ ಕಿಮ್ ಜಾಂಗ್ ಉನ್.. ಈತ ಉತ್ತರ ಕೊರಿಯಾದ ಸಾಮ್ರಾಟ.. ಅತ್ಯಂತ ಕ್ರೂರ ಸರ್ವಾಧಿಕಾರಿಗಳ ಪಟ್ಟಿಯಲ್ಲಿ  ನಿಲ್ಲುವ ಕಿಮ್ ಹುಚ್ಚಾಟಕ್ಕೆ ನಾರ್ತ್ ಕೊರಿಯಾ ಜನರು ಕೈಗೊಂಬೆಗಳಾಗಿಬಿಟ್ಟಿದ್ದಾರೆ. ಆತ ಮಾಡಿದ್ದೇ ರೂಲ್ಸು, ಆಡಿದ್ದೇ ಆಟ.. ಹೇಳೋರಿಲ್ಲ.. ಕೇಳೋರಿಲ್ಲ. ಆತ ಏನೇ ಮಾಡಿದ್ರೂ ಅದೇ ನ್ಯಾಯ , ನೀತಿ ಧರ್ಮ,  ಅದೇ  ರೈಟ್.. ಬೇರೆಯವರು ಏನೇ ಮಾಡಿದ್ರು ಅದು ತಪ್ಪು.

Related posts

India AI Impact Summit: Prime Minister Narendra Modi visits Jio Pavilion

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ: ಜಿಯೋ ಪೆವಿಲಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

February 16, 2026
What is eyesight? Are you suffering from it a lot, and if so, how can you get rid of it?

ಕಣ್ಣುದೃಷ್ಟಿ ಎಂದರೇನು? ಇದರಿಂದ ತುಂಬಾ ಸಮಸ್ಯೇಯಿಂದ ಬಳಲುತ್ತಿದ್ದಿರಾ ಹಾಗಿದ್ದರೆ ಅದರ ನಿವಾರಣೆ ಹೇಗೆ…?

February 16, 2026

ಈತ ನಿಜಕ್ಕೂ ಹುಚ್ಚು ದೊರೆಯೇ ಸರಿ. ಪ್ರಪಂಚದಲ್ಲಿ ಇರೋದಂದೇ ದೇಶ ಅದೇ ನಾರ್ತ್ ಕೊರಿಯಾ ಅನ್ನೋದು ಆತನ ಮೈಂಡ್ ನಲ್ಲಿ ಫಿಕ್ಸ್ ಆಗಿದೆ ಅಂತ ಕಾಣುತ್ತೆ. ಆದ್ರೆ ಈತನ ಹುಚ್ಚಾಟಕ್ಕೆ ಬಲಿಯಾಗಿರೋರು ಪಾಪ ಆ ದೇಶದ ಜನರು. ಆ ದೇಶದಜನರ ಬದುಕು ಅವರ ಇಷ್ಟ ಕಷ್ಟಗಳು ಎಲ್ಲವೂ ಇವನಂದುಕೊಂಡಂತೆ ಇರಬೇಕು. ಇಲ್ಲದೇ ಇದ್ದರೆ ಅವರ ಉಸಿರು ನಿಲಲ್ಲೋದಕ್ಕೆ ಹೆಚ್ಚು ಸಮಯ ಬೇಕಾಗಲ್ಲ.

ಇನ್ನೂ ಕಿಮ್ ಜಾಂಗ್ ಉನ್ ಹೊರತಾಗಿ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದುಹೋಗಿರುವ ಕ್ರೂರಿ ಸರ್ವಾಧಿಕಾರಿಗಳ ಲಿಸ್ಟ್ ನಲ್ಲಿ ವಿರಾಜಮಾನರಾಗಿರೋ ಕೆಲವು ಡಿಕ್ಟೇಟರ್ಸ್ ಗಳು , ಅವರ ಅನಾಚಾರಗಳು,  ಕ್ರೂರತೆಗೆ ಉದಾಹರಣೆ ಎನ್ನುವಂತಹ ಅವರ ಕೆಲಸಗಳು, ಜನರ ಮೇಲಿನ ಶೋಷಣೆ ಎಲ್ಲವನ್ನ ನೋಡೋಣ.

ಅಡಾಲ್ಫ್ ಹಿಟ್ಲರ್ :

ಸರ್ವಾಧಿಕಾರಿ ಅಥವ ಡಿಕ್ಟೇಟರ್ ಅಂದ್ರೆ ಮೊದಲಿಗೆ ನೆನಪಾಗೋದೇ ಹಿಟ್ಲರ್. ಈಗಾಲೂ  ಜನರು ಯಾರನ್ನಾದರು ಕ್ರೂರಿ ಪದಕ್ಕೆ ಹೋಲಿಸಬೇಕಾದ್ರೆ, ಯಾವುದಾದರೂ ಕಠಿಣ ನಿಯಮಗಳನ್ನ ಉಚ್ಚರಿಸಬೇಕಾದ್ರೂ ಹಿಟ್ಲರ್ ರೀತಿ ವರ್ತಿಸಬೇಡ, ಹಿಟ್ಲರ್ ನಿಯಮಗಳು ಅಂತೆಲ್ಲಾ ಬೈದಾಡಿಕೊಂಡು ತಿರುಗಾಡೋದು ಉಂಟು.

1933-1945 ರವರೆಗೂ ಜರ್ಮನಿಯನ್ನ ಆಳಿದ ಸರ್ವಾಧಿಕಾರಿ ಹಿಟ್ಲರ್.. ಇವನ ಆಡಳಿತಾವಧಿಯಲ್ಲಿ  ಕರೆ ಕೊಟ್ಟಿದ್ದ ವರ್ಡ್ ವಾರ್ 2 ನಲ್ಲಿ ಸುಮಾರು 4 ಕೋಟಿ ಜನರು ಅತ್ಯಂತ ದಯನೀಯವಾಗಿ ಮೃತಪಟ್ಟಿದ್ದರು.  ವಿಶ್ವದ ಮಹಾ ಯುದ್ಧಗಳಿಗೆ ಕಾರಣನಾಗಿ ಲಕ್ಷಾಂತರ ಯಹೂದಿಗಳನ್ನ ನಿರ್ದಾಕ್ಷಿಣ್ಯವಾಗಿ ಕೊಂದ ಮಹಾನ್ ಪಾಪಿಯಾಗಿ ಗುರುತಿಸಿಕೊಂಡವ , ಪ್ರಪ೦ಚವನ್ನು ವಿನಾಶದ೦ಚಿಗೆ ತಲುಪಿಸಿದ ಮಹಾಕ್ರೂರಿ ಅಡಾಲ್ಫ್ ಹಿಟ್ಲರ್. ಯಹೂದಿಗಳ ಪೌರತ್ವ ರದ್ದುಗೊಳಿಸಿ, ಅವರ ವಾಕ್ ಸ್ವಾತಂತ್ರವನ್ನೂ ಕಿತ್ತುಕೊಂಡು, ಲಕ್ಷಾಂತರ ಯಹೂದಿಗಳ ಮಾರಣ ಹೋಮ ಮಾಡಿದ್ದ ಕ್ರೂರಿ ಹಿಟ್ಲರ್‌ ನಾಝಿ ಜನಾ೦ಗದ ಓರ್ವ ನಿರ೦ಕುಶ ಪ್ರಭುವಾಗಿದ್ದ. 20ನೇ ಶತಮಾನದ ಅತ್ಯಂತ  ಶಕ್ತಿಶಾಲಿ ಹಾಗೂ ಕ್ರೂರಿ ನಾಯಕರಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದವ.

ಒಟ್ಟಾರೆ ಇತಿಹಾಸ ಕಂಡ ಕ್ರೂರ ವ್ಯಕ್ತಿ ಅಂದ್ರೆ ಅದು ಈ ಹಿಟ್ಲರ್. ಮೂಲಗಳು, ಆತನ ಜೀವನಾಧಿರಿತಾವದ ಕೆಲವು ಪುಸ್ತಕಗಳ ಪ್ರಕಾರ 1945ರ ಏಪ್ರಿಲ್ 30ರ೦ದು ಹಿಟ್ಲರ್  ತನ್ನನ್ನು ತಾನೇ ಶೂಟ್ ಮಾಡಿಕೊ೦ಡು ಸತ್ತ ಎ೦ದು ನಂಬಲಾಗಿದೆ. ಆದರೆ ಈ ವರೆಗೂ ಹಿಟ್ಲರ್ ಸಾವು ಹೇಗಾಯ್ತು ಯಾಕಾಯ್ತು ಅನ್ನೋದು ನಿಗೂಢವಾಗಿಯೇ ಉಳಿದಿದೆ.

ಬೆನಿಟೋ ಮುಸಲೋನಿ:

ಕ್ರೂರತೆಯ ಒಂದೇ ನಾಣ್ಯದ 2 ಮುಖಗಳು ಹಿಟ್ಲರ್ ಮುಸಲೋನಿ. ಹಿಟ್ಲರ್ ಬಿಟ್ರೆ ಮುಂದಿನ ಸ್ಥಾನದಲ್ಲಿ ನಿಲ್ಲೋನೇ ಈ ಬೆನಿಟೋ ಮಮುಸಲೋನಿ. ಈತ 1925  – 1945 ರವರೆಗೂ ಇಟಲಿಯ ಸರ್ವಾಧಿಕಾರಿಯಾಗಿದ್ದವನು. ವರ್ಗ ತಾರತಮ್ಯದ ವಿರುದ್ಧ ಹೋರಾಟ ಶುರು ಮಾಡಿದ್ದ ಮುಸಲೋನಿ 1919ರಲ್ಲಿ ಫ್ಯಾಸಿಸ್ಟ್ ಪಕ್ಷ ರಚನೆ ಮಾಡಿದ್ದ. ದೇಶಕ್ಕೆ ದೇಶದ ಜನರಿಗೆ ಸಹಾಯ ಮಾಡಲು ಪಕ್ಷ ಕಟ್ಟಿದ ಮುಸಲೋನಿ ಅಧಿಕಾರಕ್ಕೇರುತ್ತಿದ್ದಂತೆ ತನ್ನ ತತ್ವಗಳನ್ನೆಲ್ಲಾ ಗಾಳಿಗೆ ತೂರಿದ್ದ. ತದ ನಂತರ ರಾಜಕೀಯ ಶತ್ರುಗಳು, ರಾಜಕೀಯ ಎದುರಾಳಿಗಳನ್ನ  ಸಂಘಟನೆಗಳು, ಪತ್ರಿಕಾ ಸ್ವಾತಂತ್ರ್ಯವನ್ನೂ ಹತ್ತಿಕ್ಕಿದ್ದ ಮುಸಲೋನಿ. ಈತ ಸಹ 2ನೇ ಮಹಾಯುದ್ಧಕ್ಕೆ ಕಾರಣೀಭೂತ.  ಈತ 1943 ರಲ್ಲಿ ಬದುಕಿನ ಪಯಣ ಮುಗಿಸಿದ್ದ.

ಜೋಸೆಫ್ ಸ್ಟಾಲಿನ್ :

ರಷ್ಯಾವನ್ನ ಬರೋಬ್ಬರಿ 25 ವರ್ಷಗಳ ಕಾಲ ಆಳಿದ  ಸರ್ವಾಧಿಕಾರಿ  ಜೋಸೆಫ್ ಸ್ಟಾಲಿನ್. 1929 – 1953ರ ವರೆಗೂ ರಷ್ಯಾದಲ್ಲಿ ಆಡಳಿತ ನಡೆಸಿದ ಸ್ಟಾಲಿನ್. 2ನೇ ಮಹಾಯುದ್ಧದಲ್ಲಿ ಹಿಟ್ಲರ್ ನ ನಾಜಿ ಪಡೆಯನ್ನೇ ಸೋಲಿಸಿ ಹಿಟ್ಲರ್ ಸಾಮ್ರಾಜ್ಯವನ್ನೇ ಛಿದ್ರಗೊಳಿಸಿದ್ದ ಸ್ಟಾಲಿನ್. ಈತ ಆ ಶತಮಾನದಲ್ಲಿ ಅತ್ಯಂತ ಬಲಶಾಲಿ ಮಿಲಿಟರಿ ಪಡೆ ಕಟ್ಟಿದ್ದ ನಾಯಕ. ಈತ ರಷ್ಯಾದ ವಿವಾದಾತ್ಮಕ ದೊರೆಯಾಗಿಯೇ ಗುರುತಿಸಿಕೊಂಡಿದ್ದ.  ಈತನೂ ಸರ್ವಾಧಿಕಾರತ್ವವೂ ಸಹ  ಅತ್ಯಂತ ಭಯಾನಕವಾಗಿಯೇ ಇತಿಹಾಸದ ಪುಟದಲ್ಲಿ ಉಳಿದುಕೊಂಡಿದೆ. ಈತನ ಅಧಿಕಾರವಾಧಿಯಲ್ಲಿ  ಸಾವಿರಾರು ಸೋವಿಯತ್ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು.

ಸದ್ದಾಮ್ ಹುಸೇನ್ :

1979ರಿಂದ ಹಿಡಿದು 2003ರವರೆಗೂ ಇರಾಕ್ ನ ಆಳಿದ  ಹುಸೇನ್ ಸಹ ಕ್ರೂರ ಸರ್ವಾಧಿಇಕಾರಿಗಳ ಪೈಕಿ ಒಬ್ಬ. ಇನ್ನೂ 20ನೇ ಶತಮಾನದ ಮಹಾ ಸರ್ವಾಧಿಕಾರಿಯೂ ಈತನೇ ಆಗಿದ್ದ. ಇನ್ನೂ  ಈತನ ಅಧಿಕಾರವಧಿಯಲ್ಲಿ 2 ಲಕ್ಷದ 50 ಸಾವಿರಕ್ಕೂ ಹೆಚ್ಚು ಇರಾಕಿಯರು ಪ್ರಾಣ ಕಳೆದುಕೊಮಡಿದ್ದರು. ಮಾನವೀಯತೆಯನ್ನೇ ಮರೆತು ಅತ್ಯಂತ ನಿರ್ದಾಕ್ಷಿಣೀತವಾಗಿ ಜನರ ಜೀವ ತೆಗೆದಿದ್ದ  ಹುಸೇನ್ ಗೆ 2006ರಲ್ಲಿ ಮರಣ ದಂಡನೆ ವಿಧಿಸಲಾಗಿತ್ತು.  

ಕಿಮ್ ಜಾಂಗ್ ಉನ್ :

ಪ್ರಸ್ತುತ 3ನೇ ಪಿಳಿಗೆಯ ಅತ್ಯಂತ ಕ್ರೂರಿ ವ್ಯಕ್ತಿ ಎಂದೇ ಗುರುತಿಸಿಕೊಂಡಿರುವ ಈತ ನಾರ್ತ್ ಕೊರಿಯಾದ ಪ್ರಸ್ತುತ ಸರ್ವಾಧಿಕಾರಿ. 2011ರಲ್ಲಿ ಈತನ ತಂದೆ ಕಿಮ್ ಸಾಂಗ್ ನ ಸಾವಿನ ನಂತರ ಅಧಿಕಾರ ಸ್ವೀಕರಿಸಿದ. ಇನ್ನೂ ಈತ ಎಂಥಹ ಹುಚ್ಚ ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಿರೋ ವಿಚಾರವೇ. ಈತನ ನಿರ್ದಾಕ್ಷೀಯ ಕಾನೂನುಗಳು, ನಿರ್ಧಾರಗಳು, ಶಿಕ್ಷೆಗಳು ಬೆಚ್ಚಿ ಬೀಳಿಸಿವಂತಹದ್ದು. ಇನ್ನೂ ಈತನ ಅಧಿಕಾರಾವಧಿಯಲ್ಲಿ ಜನರ ಏಳಿಗೆ, ಆರ್ಥಿಕತೆ, ಜನ ಜೀವನ ಸುಧಾರಣೆಗಿಂತಲೂ ಹೆಚ್ಚು ಒತ್ತು ನೀಡಿರೋದು ನ್ಯೂಕ್ಲಿಯರ್ ಬಾಂಬ್ ತಯಾರಿಕೆಗೆ. ಇಡೀ ದೇಶದಲ್ಲಿ ಶೇ 40ರಷ್ಟು ಜನರನ್ನ ಈ ನ್ಯೂಕ್ಲಿಯರ್ ಬಾಂಬ್ ತಯಾರಿಕೆಗೆ ಬಳಸಿಕೊಳ್ತಿದ್ದಾನೆ.

Tags: #saakshatvdictatorsHitlerKim Jong Un
ShareTweetSendShare
Join us on:

Related Posts

India AI Impact Summit: Prime Minister Narendra Modi visits Jio Pavilion

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ: ಜಿಯೋ ಪೆವಿಲಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

by admin
February 16, 2026
0

• ಆಕಾಶ್ ಅಂಬಾನಿ ಅವರು ಜಿಯೋದ ಎಐ ಪರಿಸರ ವ್ಯವಸ್ಥೆಯ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು • ಜಿಯೋ ಇಂಟೆಲಿಜೆನ್ಸ್ ನಿಂದ ಜಿಯೋ ಆರೋಗ್ಯ ಎಐ ವರೆಗಿನ ಅನೇಕ...

What is eyesight? Are you suffering from it a lot, and if so, how can you get rid of it?

ಕಣ್ಣುದೃಷ್ಟಿ ಎಂದರೇನು? ಇದರಿಂದ ತುಂಬಾ ಸಮಸ್ಯೇಯಿಂದ ಬಳಲುತ್ತಿದ್ದಿರಾ ಹಾಗಿದ್ದರೆ ಅದರ ನಿವಾರಣೆ ಹೇಗೆ…?

by admin
February 16, 2026
0

ಶ್ರೀ ಕಟೀಲು ದುರ್ಗಪರಮೇಶ್ವರೀ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ...

If you cut your nail and place it here, it will bring you money and also ward off the evil eye.

ಉಗುರನ್ನು ಕತ್ತರಿಸಿ ಇಲ್ಲಿ ಹಾಕಿದರೆ ಹಣದ ಮಳೆಯ ಜೊತೆಗೆ ಕೆಟ್ಟ ದೃಷ್ಟಿಯು ಕೂಡ ದೂರವಾಗುತ್ತದೆ..

by admin
February 16, 2026
0

ಇದರಲ್ಲಿ ನಿಮ್ಮ ಬೆರಳಿನ ಉಗುರನ್ನು ಕತ್ತರಿಸಿ ಹಾಕಿ ಪವಾಡ ನೋಡಿ ಇದರ ಬಗ್ಗೆ ಕನಸಿನಲ್ಲೂ ಕಲ್ಪನೆ ಮಾಡಲು ಸಾಧ್ಯವಿಲ್ಲ ಯಾವುದೇ ಕೈಯಲ್ಲಿರುವ ಬೆರಳುಗಳು ಒಂದೇ ರೀತಿ ಇಲ್ಲ,...

ishan kishan

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..!

by admin
February 16, 2026
0

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..! ಇದೆಂಥಾ ಕಾಕತಾಳೀಯ.. ಹೇಳಿ ಕೇಳಿ.. ಶ್ರೀಲಂಕಾ ಹರ ಹರ ಮಹದೇವನ...

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

by Shwetha
February 16, 2026
0

ಬೆಂಗಳೂರು: ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಸಾರಿಗೆ ಬಸ್ ಪ್ರಯಾಣಿಕರಿಗೆ ಮತ್ತು ಪಾರ್ಸೆಲ್ ಸೇವೆ ಬಳಸುವವರಿಗೆ ದಿಢೀರ್ ಹೊರೆ ಎನ್ನುವಂತೆ, ಕರ್ನಾಟಕ ರಾಜ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram