ಜಗತ್ತು ಕಂಡ ಅತಿ ಭಯಂಕರರು ಈ ಸರ್ವಾಧಿಕಾರಿಗಳು..!
ಪ್ರಸ್ತುತ ಜಗತ್ತಿನಲ್ಲಿ ಸರ್ವಾಧಿಕಾರಿ , ಕ್ರೂರಿ ಅಂದ್ರೆ ಕಣ್ಮುಂದೆ ಬರೋದು 3 ಅಡಿ ಕಿಮ್ ಜಾಂಗ್ ಉನ್.. ಈತ ಉತ್ತರ ಕೊರಿಯಾದ ಸಾಮ್ರಾಟ.. ಅತ್ಯಂತ ಕ್ರೂರ ಸರ್ವಾಧಿಕಾರಿಗಳ ಪಟ್ಟಿಯಲ್ಲಿ ನಿಲ್ಲುವ ಕಿಮ್ ಹುಚ್ಚಾಟಕ್ಕೆ ನಾರ್ತ್ ಕೊರಿಯಾ ಜನರು ಕೈಗೊಂಬೆಗಳಾಗಿಬಿಟ್ಟಿದ್ದಾರೆ. ಆತ ಮಾಡಿದ್ದೇ ರೂಲ್ಸು, ಆಡಿದ್ದೇ ಆಟ.. ಹೇಳೋರಿಲ್ಲ.. ಕೇಳೋರಿಲ್ಲ. ಆತ ಏನೇ ಮಾಡಿದ್ರೂ ಅದೇ ನ್ಯಾಯ , ನೀತಿ ಧರ್ಮ, ಅದೇ ರೈಟ್.. ಬೇರೆಯವರು ಏನೇ ಮಾಡಿದ್ರು ಅದು ತಪ್ಪು.
ಈತ ನಿಜಕ್ಕೂ ಹುಚ್ಚು ದೊರೆಯೇ ಸರಿ. ಪ್ರಪಂಚದಲ್ಲಿ ಇರೋದಂದೇ ದೇಶ ಅದೇ ನಾರ್ತ್ ಕೊರಿಯಾ ಅನ್ನೋದು ಆತನ ಮೈಂಡ್ ನಲ್ಲಿ ಫಿಕ್ಸ್ ಆಗಿದೆ ಅಂತ ಕಾಣುತ್ತೆ. ಆದ್ರೆ ಈತನ ಹುಚ್ಚಾಟಕ್ಕೆ ಬಲಿಯಾಗಿರೋರು ಪಾಪ ಆ ದೇಶದ ಜನರು. ಆ ದೇಶದಜನರ ಬದುಕು ಅವರ ಇಷ್ಟ ಕಷ್ಟಗಳು ಎಲ್ಲವೂ ಇವನಂದುಕೊಂಡಂತೆ ಇರಬೇಕು. ಇಲ್ಲದೇ ಇದ್ದರೆ ಅವರ ಉಸಿರು ನಿಲಲ್ಲೋದಕ್ಕೆ ಹೆಚ್ಚು ಸಮಯ ಬೇಕಾಗಲ್ಲ.
ಇನ್ನೂ ಕಿಮ್ ಜಾಂಗ್ ಉನ್ ಹೊರತಾಗಿ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದುಹೋಗಿರುವ ಕ್ರೂರಿ ಸರ್ವಾಧಿಕಾರಿಗಳ ಲಿಸ್ಟ್ ನಲ್ಲಿ ವಿರಾಜಮಾನರಾಗಿರೋ ಕೆಲವು ಡಿಕ್ಟೇಟರ್ಸ್ ಗಳು , ಅವರ ಅನಾಚಾರಗಳು, ಕ್ರೂರತೆಗೆ ಉದಾಹರಣೆ ಎನ್ನುವಂತಹ ಅವರ ಕೆಲಸಗಳು, ಜನರ ಮೇಲಿನ ಶೋಷಣೆ ಎಲ್ಲವನ್ನ ನೋಡೋಣ.
ಅಡಾಲ್ಫ್ ಹಿಟ್ಲರ್ :
ಸರ್ವಾಧಿಕಾರಿ ಅಥವ ಡಿಕ್ಟೇಟರ್ ಅಂದ್ರೆ ಮೊದಲಿಗೆ ನೆನಪಾಗೋದೇ ಹಿಟ್ಲರ್. ಈಗಾಲೂ ಜನರು ಯಾರನ್ನಾದರು ಕ್ರೂರಿ ಪದಕ್ಕೆ ಹೋಲಿಸಬೇಕಾದ್ರೆ, ಯಾವುದಾದರೂ ಕಠಿಣ ನಿಯಮಗಳನ್ನ ಉಚ್ಚರಿಸಬೇಕಾದ್ರೂ ಹಿಟ್ಲರ್ ರೀತಿ ವರ್ತಿಸಬೇಡ, ಹಿಟ್ಲರ್ ನಿಯಮಗಳು ಅಂತೆಲ್ಲಾ ಬೈದಾಡಿಕೊಂಡು ತಿರುಗಾಡೋದು ಉಂಟು.
1933-1945 ರವರೆಗೂ ಜರ್ಮನಿಯನ್ನ ಆಳಿದ ಸರ್ವಾಧಿಕಾರಿ ಹಿಟ್ಲರ್.. ಇವನ ಆಡಳಿತಾವಧಿಯಲ್ಲಿ ಕರೆ ಕೊಟ್ಟಿದ್ದ ವರ್ಡ್ ವಾರ್ 2 ನಲ್ಲಿ ಸುಮಾರು 4 ಕೋಟಿ ಜನರು ಅತ್ಯಂತ ದಯನೀಯವಾಗಿ ಮೃತಪಟ್ಟಿದ್ದರು. ವಿಶ್ವದ ಮಹಾ ಯುದ್ಧಗಳಿಗೆ ಕಾರಣನಾಗಿ ಲಕ್ಷಾಂತರ ಯಹೂದಿಗಳನ್ನ ನಿರ್ದಾಕ್ಷಿಣ್ಯವಾಗಿ ಕೊಂದ ಮಹಾನ್ ಪಾಪಿಯಾಗಿ ಗುರುತಿಸಿಕೊಂಡವ , ಪ್ರಪ೦ಚವನ್ನು ವಿನಾಶದ೦ಚಿಗೆ ತಲುಪಿಸಿದ ಮಹಾಕ್ರೂರಿ ಅಡಾಲ್ಫ್ ಹಿಟ್ಲರ್. ಯಹೂದಿಗಳ ಪೌರತ್ವ ರದ್ದುಗೊಳಿಸಿ, ಅವರ ವಾಕ್ ಸ್ವಾತಂತ್ರವನ್ನೂ ಕಿತ್ತುಕೊಂಡು, ಲಕ್ಷಾಂತರ ಯಹೂದಿಗಳ ಮಾರಣ ಹೋಮ ಮಾಡಿದ್ದ ಕ್ರೂರಿ ಹಿಟ್ಲರ್ ನಾಝಿ ಜನಾ೦ಗದ ಓರ್ವ ನಿರ೦ಕುಶ ಪ್ರಭುವಾಗಿದ್ದ. 20ನೇ ಶತಮಾನದ ಅತ್ಯಂತ ಶಕ್ತಿಶಾಲಿ ಹಾಗೂ ಕ್ರೂರಿ ನಾಯಕರಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದವ.
ಒಟ್ಟಾರೆ ಇತಿಹಾಸ ಕಂಡ ಕ್ರೂರ ವ್ಯಕ್ತಿ ಅಂದ್ರೆ ಅದು ಈ ಹಿಟ್ಲರ್. ಮೂಲಗಳು, ಆತನ ಜೀವನಾಧಿರಿತಾವದ ಕೆಲವು ಪುಸ್ತಕಗಳ ಪ್ರಕಾರ 1945ರ ಏಪ್ರಿಲ್ 30ರ೦ದು ಹಿಟ್ಲರ್ ತನ್ನನ್ನು ತಾನೇ ಶೂಟ್ ಮಾಡಿಕೊ೦ಡು ಸತ್ತ ಎ೦ದು ನಂಬಲಾಗಿದೆ. ಆದರೆ ಈ ವರೆಗೂ ಹಿಟ್ಲರ್ ಸಾವು ಹೇಗಾಯ್ತು ಯಾಕಾಯ್ತು ಅನ್ನೋದು ನಿಗೂಢವಾಗಿಯೇ ಉಳಿದಿದೆ.
ಬೆನಿಟೋ ಮುಸಲೋನಿ:
ಕ್ರೂರತೆಯ ಒಂದೇ ನಾಣ್ಯದ 2 ಮುಖಗಳು ಹಿಟ್ಲರ್ ಮುಸಲೋನಿ. ಹಿಟ್ಲರ್ ಬಿಟ್ರೆ ಮುಂದಿನ ಸ್ಥಾನದಲ್ಲಿ ನಿಲ್ಲೋನೇ ಈ ಬೆನಿಟೋ ಮಮುಸಲೋನಿ. ಈತ 1925 – 1945 ರವರೆಗೂ ಇಟಲಿಯ ಸರ್ವಾಧಿಕಾರಿಯಾಗಿದ್ದವನು. ವರ್ಗ ತಾರತಮ್ಯದ ವಿರುದ್ಧ ಹೋರಾಟ ಶುರು ಮಾಡಿದ್ದ ಮುಸಲೋನಿ 1919ರಲ್ಲಿ ಫ್ಯಾಸಿಸ್ಟ್ ಪಕ್ಷ ರಚನೆ ಮಾಡಿದ್ದ. ದೇಶಕ್ಕೆ ದೇಶದ ಜನರಿಗೆ ಸಹಾಯ ಮಾಡಲು ಪಕ್ಷ ಕಟ್ಟಿದ ಮುಸಲೋನಿ ಅಧಿಕಾರಕ್ಕೇರುತ್ತಿದ್ದಂತೆ ತನ್ನ ತತ್ವಗಳನ್ನೆಲ್ಲಾ ಗಾಳಿಗೆ ತೂರಿದ್ದ. ತದ ನಂತರ ರಾಜಕೀಯ ಶತ್ರುಗಳು, ರಾಜಕೀಯ ಎದುರಾಳಿಗಳನ್ನ ಸಂಘಟನೆಗಳು, ಪತ್ರಿಕಾ ಸ್ವಾತಂತ್ರ್ಯವನ್ನೂ ಹತ್ತಿಕ್ಕಿದ್ದ ಮುಸಲೋನಿ. ಈತ ಸಹ 2ನೇ ಮಹಾಯುದ್ಧಕ್ಕೆ ಕಾರಣೀಭೂತ. ಈತ 1943 ರಲ್ಲಿ ಬದುಕಿನ ಪಯಣ ಮುಗಿಸಿದ್ದ.
ಜೋಸೆಫ್ ಸ್ಟಾಲಿನ್ :
ರಷ್ಯಾವನ್ನ ಬರೋಬ್ಬರಿ 25 ವರ್ಷಗಳ ಕಾಲ ಆಳಿದ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್. 1929 – 1953ರ ವರೆಗೂ ರಷ್ಯಾದಲ್ಲಿ ಆಡಳಿತ ನಡೆಸಿದ ಸ್ಟಾಲಿನ್. 2ನೇ ಮಹಾಯುದ್ಧದಲ್ಲಿ ಹಿಟ್ಲರ್ ನ ನಾಜಿ ಪಡೆಯನ್ನೇ ಸೋಲಿಸಿ ಹಿಟ್ಲರ್ ಸಾಮ್ರಾಜ್ಯವನ್ನೇ ಛಿದ್ರಗೊಳಿಸಿದ್ದ ಸ್ಟಾಲಿನ್. ಈತ ಆ ಶತಮಾನದಲ್ಲಿ ಅತ್ಯಂತ ಬಲಶಾಲಿ ಮಿಲಿಟರಿ ಪಡೆ ಕಟ್ಟಿದ್ದ ನಾಯಕ. ಈತ ರಷ್ಯಾದ ವಿವಾದಾತ್ಮಕ ದೊರೆಯಾಗಿಯೇ ಗುರುತಿಸಿಕೊಂಡಿದ್ದ. ಈತನೂ ಸರ್ವಾಧಿಕಾರತ್ವವೂ ಸಹ ಅತ್ಯಂತ ಭಯಾನಕವಾಗಿಯೇ ಇತಿಹಾಸದ ಪುಟದಲ್ಲಿ ಉಳಿದುಕೊಂಡಿದೆ. ಈತನ ಅಧಿಕಾರವಾಧಿಯಲ್ಲಿ ಸಾವಿರಾರು ಸೋವಿಯತ್ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು.
ಸದ್ದಾಮ್ ಹುಸೇನ್ :
1979ರಿಂದ ಹಿಡಿದು 2003ರವರೆಗೂ ಇರಾಕ್ ನ ಆಳಿದ ಹುಸೇನ್ ಸಹ ಕ್ರೂರ ಸರ್ವಾಧಿಇಕಾರಿಗಳ ಪೈಕಿ ಒಬ್ಬ. ಇನ್ನೂ 20ನೇ ಶತಮಾನದ ಮಹಾ ಸರ್ವಾಧಿಕಾರಿಯೂ ಈತನೇ ಆಗಿದ್ದ. ಇನ್ನೂ ಈತನ ಅಧಿಕಾರವಧಿಯಲ್ಲಿ 2 ಲಕ್ಷದ 50 ಸಾವಿರಕ್ಕೂ ಹೆಚ್ಚು ಇರಾಕಿಯರು ಪ್ರಾಣ ಕಳೆದುಕೊಮಡಿದ್ದರು. ಮಾನವೀಯತೆಯನ್ನೇ ಮರೆತು ಅತ್ಯಂತ ನಿರ್ದಾಕ್ಷಿಣೀತವಾಗಿ ಜನರ ಜೀವ ತೆಗೆದಿದ್ದ ಹುಸೇನ್ ಗೆ 2006ರಲ್ಲಿ ಮರಣ ದಂಡನೆ ವಿಧಿಸಲಾಗಿತ್ತು.
ಕಿಮ್ ಜಾಂಗ್ ಉನ್ :
ಪ್ರಸ್ತುತ 3ನೇ ಪಿಳಿಗೆಯ ಅತ್ಯಂತ ಕ್ರೂರಿ ವ್ಯಕ್ತಿ ಎಂದೇ ಗುರುತಿಸಿಕೊಂಡಿರುವ ಈತ ನಾರ್ತ್ ಕೊರಿಯಾದ ಪ್ರಸ್ತುತ ಸರ್ವಾಧಿಕಾರಿ. 2011ರಲ್ಲಿ ಈತನ ತಂದೆ ಕಿಮ್ ಸಾಂಗ್ ನ ಸಾವಿನ ನಂತರ ಅಧಿಕಾರ ಸ್ವೀಕರಿಸಿದ. ಇನ್ನೂ ಈತ ಎಂಥಹ ಹುಚ್ಚ ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಿರೋ ವಿಚಾರವೇ. ಈತನ ನಿರ್ದಾಕ್ಷೀಯ ಕಾನೂನುಗಳು, ನಿರ್ಧಾರಗಳು, ಶಿಕ್ಷೆಗಳು ಬೆಚ್ಚಿ ಬೀಳಿಸಿವಂತಹದ್ದು. ಇನ್ನೂ ಈತನ ಅಧಿಕಾರಾವಧಿಯಲ್ಲಿ ಜನರ ಏಳಿಗೆ, ಆರ್ಥಿಕತೆ, ಜನ ಜೀವನ ಸುಧಾರಣೆಗಿಂತಲೂ ಹೆಚ್ಚು ಒತ್ತು ನೀಡಿರೋದು ನ್ಯೂಕ್ಲಿಯರ್ ಬಾಂಬ್ ತಯಾರಿಕೆಗೆ. ಇಡೀ ದೇಶದಲ್ಲಿ ಶೇ 40ರಷ್ಟು ಜನರನ್ನ ಈ ನ್ಯೂಕ್ಲಿಯರ್ ಬಾಂಬ್ ತಯಾರಿಕೆಗೆ ಬಳಸಿಕೊಳ್ತಿದ್ದಾನೆ.