ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ಬೇಕಾಗುವ ಗುರುತಿನ ಪುರಾವೆಗಳು
UIDAI ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಆಧಾರ್ ಕಾರ್ಡ್‌ನಲ್ಲಿ ಅಪ್‌ಡೇಟ್ ಮಾಡಲು ನೀವು ಬಯಸುವವರಿಗೆ ಈ ಸುದ್ದಿ ಮಹತ್ವದ್ದಾಗಿದೆ.
ಬ್ಯಾಂಕ್ ಖಾತೆಯಿಂದ ಹಿಡಿದು ಪಾಸ್‌ಪೋರ್ಟ್ ಮಾಡುವವರೆಗೆ ಆಧಾರ್ ಬೇಕಾಗುತ್ತದೆ. ತಪ್ಪು ಜನ್ಮ ದಿನಾಂಕ ಅಥವಾ ತಪ್ಪು ವಿಳಾಸವಿದ್ದರೆ ಇದರಿಂದ ನಿಮಗೆ ತೊಂದರೆಯಾಗಬಹುದು. ಆದ್ದರಿಂದ ಆಧಾರ್‌ನಲ್ಲಿ ಏನಾದರೂ ತಪ್ಪುಗಳಿದ್ದರೆ, ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ

UIDAI ನಿಂದ ದಾಖಲೆಗಳ ಪಟ್ಟಿಯನ್ನು ನೀಡಲಾಗಿದ್ದು, ಇದರಲ್ಲಿ ಆಧಾರ್ ಅನ್ನು ನವೀಕರಿಸಲು ಯಾವ ದಾಖಲೆಗಳು ಮಾನ್ಯವಾಗಿರುತ್ತವೆ ಎಂದು ತಿಳಿಸಲಾಗಿದೆ.
ಯುಐಡಿಎಐ ಟ್ವೀಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ನೀವು ಆಧಾರ್ ಅನ್ನು ಅಪ್‌ಡೇಟ್ ಮಾಡಲು ಬಯಸಿದರೆ ನಿಮ್ಮ ಡಾಕ್ಯುಮೆಂಟ್ ನಿಮ್ಮ ಹೆಸರಿನಲ್ಲಿದೆ ಮತ್ತು ಅದು ಮಾನ್ಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.
UIDAI ಪ್ರಕಾರ, ಆಧಾರ್‌ನಲ್ಲಿ ಗುರುತಿನ ಪುರಾವೆಗಾಗಿ 32 ದಾಖಲೆಗಳನ್ನು ಸ್ವೀಕರಿಸಲಾಗುತ್ತದೆ. ಸಂಬಂಧದ ಪುರಾವೆಗಾಗಿ 14 ದಾಖಲೆಗಳನ್ನು, ಜನ್ಮ ದಿನಾಂಕಗಾಗಿ 15 ಮತ್ತು ವಿಳಾಸದ ಪುರಾವೆಗಾಗಿ 45 ದಾಖಲೆಗಳನ್ನು ಸ್ವೀಕರಿಸಲಾಗುತ್ತದೆ.
ಸಂಬಂಧದ ಪುರಾವೆ
1. MNREGA ಜಾಬ್ ಕಾರ್ಡ್
2. ಪಿಂಚಣಿ ಕಾರ್ಡ್
3. ಪಾಸ್ಪೋರ್ಟ್
4. ಆರ್ಮಿ ಕ್ಯಾಂಟೀನ್ ಕಾರ್ಡ್
ಜನ್ಮ ದಿನಾಂಕ ದಾಖಲೆಗಳು
1. ಜನನ ಪ್ರಮಾಣಪತ್ರ
2. ಪಾಸ್ಪೋರ್ಟ್
3. ಪ್ಯಾನ್ ಕಾರ್ಡ್
4. ಗುರುತು ಚೀಟಿ
5. SSLC ಅಂಕ ಪಟ್ಟಿ/ಪ್ರಮಾಣಪತ್ರ
ಗುರುತಿನ ಪುರಾವೆ
1. ಪಾಸ್ಪೋರ್ಟ್
2. ಪ್ಯಾನ್ ಕಾರ್ಡ್
3. ಪಡಿತರ ಚೀಟಿ
4. ವೋಟರ್ ಐಡಿ
5. ಚಾಲನಾ ಪರವಾನಗಿ
ವಿಳಾಸದ ಪುರಾವೆ
1. ಪಾಸ್ಪೋರ್ಟ್
2. ಬ್ಯಾಂಕ್ ಸ್ಟೇಟ್ ಮೆಂಟ್
3. ಪಾಸ್ ಬುಕ್
4. ಪಡಿತರ ಚೀಟಿ
5. ಪೋಸ್ಟ್ ಆಫೀಸ್ ಖಾತೆ ಸ್ಟೇಟ್ ಮೆಂಟ್
6. ವೋಟರ್ ಐಡಿ
7. ಚಾಲನಾ ಪರವಾನಗಿ
8. ವಿದ್ಯುತ್ ಬಿಲ್
9. ನೀರಿನ ಬಿಲ್

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಬಾದಾಮಿ – ಗೇರು ಬೀಜ ಚಿಕ್ಕಿ https://t.co/3Tva4Ca5mI
— Saaksha TV (@SaakshaTv) August 30, 2021
ಬೆಳ್ಳುಳ್ಳಿ ಚಹಾ ಸೇವನೆಯಿಂದ ದೇಹಕ್ಕೆ ಸಿಗುವ ಲಾಭಗಳು ಮತ್ತು ಅದನ್ನು ತಯಾರಿಸುವ ವಿಧಾನ https://t.co/y05OTOWx8b
— Saaksha TV (@SaakshaTv) August 30, 2021
ಬಿಸ್ಕೂಟ್ ರೊಟ್ಟಿ https://t.co/ru9jMZv54s
— Saaksha TV (@SaakshaTv) August 31, 2021
ಜೇನುತುಪ್ಪವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುವುದರ ಆರೋಗ್ಯ ಪ್ರಯೋಜನಗಳು https://t.co/PkUlXW4kjV
— Saaksha TV (@SaakshaTv) August 31, 2021
#UIDAI #aadharcard #update








