ಸೆಪ್ಟೆಂಬರ್ 25 ರಂದು ರೈತರು ಕರೆ ನೀಡಿರುವ ಭಾರತ್ ಬಂದ್ ಗೆ ಎಡಪಕ್ಷಗಳ ಬೆಂಬಲ..!
ಸೆಪ್ಟೆಂಬರ್ 25 ರಂದು ರೈತರು ಕರೆ ನೀಡಿರುವ ಭಾರತ್ ಬಂದ್ ಗೆ ದೇಶಾದ್ಯಂತ ಎಡಪಕ್ಷಗಳು ಬೆಂಬಲ ಸೂಚಿಸಿವೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಅನ್ನದಾತರು ನಡೆಸುತ್ತಿರುವ ಹೋರಾ 110ನೇ ತಿಂಗಳಿಗೆ ಕಾಲಿಟ್ಟಿದೆ. ಆದ್ರೂ ಸರ್ಕಾರ ಮಾತ್ರ ರೈತರ ಆಗ್ರಹಗಳಿಗೆ ಮಾನ್ಯತೆ ನೀಡದೇ ಇರುವುದು ರೈತರನ್ನ ಮತ್ತಷ್ಟು ಕೆರಳಿಸಿದೆ. ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ, ಸೆಪ್ಟೆಂಬರ್ 25 ರಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ “ಭಾರತ್ ಬಂದ್” ಗೆ ಎಡಪಕ್ಷಗಳು ಬೆಂಬಲ ಘೋಷಿಸಿವೆ.
ಗುರುವಾರ ಬಿಡುಗಡೆ ಮಾಡಿದ ಜಂಟಿ ಪತ್ರಿಕಾ ಹೇಳಿಕೆಯಲ್ಲಿ, ಎಡ ಪಕ್ಷಗಳಾದ – ಸಿಪಿಐ (ಎಂ), ಸಿಪಿಐ, ಫಾರ್ವರ್ಡ್ ಬ್ಲಾಕ್ ಮತ್ತು ಆರ್ಎಸ್ಪಿ (ಕ್ರಾಂತಿಕಾರಿ ಸಮಾಜವಾದಿ ಪಕ್ಷ) ಈ ಬಗ್ಗೆ ಮಾಹಿತಿ ನೀಡಿವೆ. ಅಲ್ಲದೇ ಜನರು ಮುಷ್ಕರಕ್ಕೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೇಲೆ ಕಾನೂನು ಖಾತರಿ ನೀಡಬೇಕೆಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ 10 ನೇ ತಿಂಗಳಿಗೆ ಕಾಲಿಟ್ಟಿದೆ.
ಮೋದಿ ಸರ್ಕಾರವು ನಿರ್ಲಕ್ಷ್ಯದಿಂದ ಮುಂದುವರಿಯುತ್ತಿದೆ ಮತ್ತು ಮಾತುಕತೆಯ ಮೂಲಕ ಹೋರಾಟದಲ್ಲಿರುವ ರೈತರ ಜೊತೆಗೆ ಸಮಸ್ಯೆ ಪರಿಹಾರಕ್ಕೆ ನಿರಾಕರಿಸುತ್ತಿವೆ.. ಎಡಪಕ್ಷಗಳು ಮೋದಿ ಸರ್ಕಾರದ ಈ ಹಠಮಾರಿತನವನ್ನು ಖಂಡಿಸುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಲ್ದೇ ಈ ಕೃಷಿ ಕಾನೂನುಗಳನ್ನು ತಕ್ಷಣವೇ ರದ್ದುಗೊಳಿಸಬೇಕು, ಎಂಎಸ್‌ಪಿಯನ್ನು ಜಾರಿಗೊಳಿಸಬೇಕು. ಎಡಪಕ್ಷಗಳು ಭಾರತ್ ಬಂದ್ ಯಶಸ್ಸಿಗೆ ಸಕ್ರಿಯವಾಗಿ ಕೆಲಸ ಮಾಡಲು ತಮ್ಮ ಎಲ್ಲಾ ಘಟಕಗಳಿಗೆ ಕರೆ ನೀಡುತ್ತವೆ. ಈ ಭಾರತ್ ಬಂದ್ ಅನ್ನು ಬೆಂಬಲಿಸುವಂತೆ ಎಡ ಪಕ್ಷಗಳು ಜನರಿಗೆ ಮನವಿ ಮಾಡಲಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬೆಲೆ ಏರಿಕೆ | ಕೇಂದ್ರ ಸಚಿವರ ಜೊತೆ ಮಾತಾಡ್ತೀನಿ ಎಂದ ಬೊಮ್ಮಾಯಿ