ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ : ಬೊಮ್ಮಾಯಿ Bommai saaksha tv
ಬೆಂಗಳೂರು : ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಳ್ಳೋದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ.
ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಹೆಚ್.ಡಿ ಕುಮಾರಸ್ವಾಮಿ ಜೊತೆ ನಿನ್ನೆ ವಿವರವಾಗಿ ಚರ್ಚೆ ಮಾಡಿಲ್ಲ.
ಆದರೆ ಒಟ್ಟಾಗಿ ಹೋಗೋಣ ಎಂದಿದ್ದೇನೆ. ಅವರು ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿ ಹೇಳ್ತೀನಿ ಅಂತ ಹೇಳಿದ್ದಾರೆ.
ಪಾಲಿಕೆಯಲ್ಲಿ ಒಂದಾಗಿ ಕೆಲಸ ಮಾಡಲು ಅವರು ಒಲವು ತೋರಿಸಿದ್ದಾರೆ. ಬಹುತೇಕ ಬಿಜೆಪಿ-ಜೆಡಿಎಸ್ ಕಲಬುರಗಿ ಪಾಲಿಕೆಯಲ್ಲಿ ಸೇರಿ ಮೆಜಾರಿಟಿ ಮಾಡ್ತೇವೆ ಎಂದು ಮೈತ್ರಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಇಂದು ದೆಹಲಿಗೆ ಹೋಗ್ತಿದ್ದೀನಿ ಎಂದು ತಿಳಿಸಿದ ಬೊಮ್ಮಾಯಿ, ಅಲ್ಲಿ ನಾಲ್ಕಾರು ಜನ ಕೇಂದ್ರ ಸಚಿವರ ಭೇಟಿ ಮಾಡಿ ಮಾತುಕತೆ ನಡೆಸುವುದಾಗಿ ತಿಳಿಸಿದರು.








