ADVERTISEMENT
Thursday, July 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

ಸಂಜೆ ಸ್ನಾಕ್ಸ್ ಗೆ 5 ಆರೋಗ್ಯಕರ ಹಾಗೂ ರುಚಿಕರ ತಿನಿಸುಗಳ ರೆಸಿಪಿಗಳು..!

Namratha Rao by Namratha Rao
September 8, 2021
in Cooking, Newsbeat, ಅಡುಗೆ
Saakshatv cooking recipe how to prepare shavige alu bonda
Share on FacebookShare on TwitterShare on WhatsappShare on Telegram

1. ತರಕಾರಿ ಕಟ್ಲೇಟ್

Saakshatv cooking recipe prepare vegetables cutlets

Related posts

ಇನ್ನು ಮುಂದೆ ಪಿಎಫ್ ಹಣ ಪಡೆಯುವುದು ನೀರು ಕುಡಿದಷ್ಟೇ ಸುಲಭ -34 ಕೋಟಿ ಉದ್ಯೋಗಿಗಳ ಖಾತೆಗೆ ಬೀಳಲಿದೆ ಬಡ್ಡಿ ಹಣ : ಕೋಟ್ಯಂತರ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್

ಇನ್ನು ಮುಂದೆ ಪಿಎಫ್ ಹಣ ಪಡೆಯುವುದು ನೀರು ಕುಡಿದಷ್ಟೇ ಸುಲಭ -34 ಕೋಟಿ ಉದ್ಯೋಗಿಗಳ ಖಾತೆಗೆ ಬೀಳಲಿದೆ ಬಡ್ಡಿ ಹಣ : ಕೋಟ್ಯಂತರ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್

July 9, 2026
ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

E20ನಿಂದ ಹಾನಿಯಾದ ಒಂದೇ ಒಂದು ಕಾರು ತೋರಿಸಿ: ನಿತಿನ್ ಗಡ್ಕರಿ

July 9, 2026

ಬೇಕಾಗುವ ಸಾಮಗ್ರಿಗಳು

ಕತ್ತರಿಸಿದ ಕ್ಯಾರೆಟ್ – 1/2 ಕಪ್
ಕತ್ತರಿಸಿದ ಬೀನ್ಸ್ – 1/2 ಕಪ್
ಬಟಾಣಿ – 1/4 ಕಪ್
ಕತ್ತರಿಸಿದ ಆಲೂಗಡ್ಡೆ – 1 ಕಪ್
ಬ್ರೆಡ್ ಕ್ರಂಬ್ – 1 ಕಪ್
ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು- ಸ್ವಲ್ಪ
ಹಸಿಮೆಣಸು -2
ಈರುಳ್ಳಿ – 1/4 ಕಪ್
ಕೊತ್ತಂಬರಿ ಹುಡಿ – 1/2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಮೈದಾ – 3 ಚಮಚ
ಗರಂ ಮಸಾಲೆ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮೆಣಸಿನ ಪುಡಿ – 1/2 ಚಮಚ
ಸಾಸಿವೆ – 1 ಚಮಚ
ಎಣ್ಣೆ – 2 ಚಮಚ
ನೀರು – ಸ್ವಲ್ಪ

ಮಾಡುವ ವಿಧಾನ

ಮೊದಲಿಗೆ ಕ್ಯಾರೆಟ್, ಬೀನ್ಸ್, ಬಟಾಣಿ, ಆಲೂಗಡ್ಡೆಗಳನ್ನು ಬೇಯಿಸಿಟ್ಟುಕೊಳ್ಳಿ. ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ ಹಾಕಿ. ಅದು ಸಿಡಿದ ಬಳಿಕ ಅದಕ್ಕೆ ಕತ್ತರಿಸಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿದ ಹಸಿಮೆಣಸು ಸೇರಿಸಿ ಈರುಳ್ಳಿ ಕೆಂಪು ಬಣ್ಣಕ್ಕೆ ತಿರುಗುವವರೆಗೆ ತಿರುವಿಕೊಳ್ಳಿ. ನಂತರ ಇದಕ್ಕೆ ಬ್ರೆಡ್ ಕ್ರಂಬ್ಸ್ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರ ಮಾಡಿ.
ನಂತರ ಇದಕ್ಕೆ ಬೇಯಿಸಿಟ್ಟುಕೊಂಡ ತರಕಾರಿ, ಮೆಣಸಿನ ಪುಡಿ, ಕೊತ್ತಂಬರಿಪುಡಿ, ಗರಂ ಮಸಾಲಾ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಇದು ಹಿಟ್ಟಿನ ಹದಕ್ಕೆ ಬರುವವರೆಗೆ ಬೇಯಿಸಿಕೊಂಡು ಕಟ್ಲೆಟ್ ಮಾಡಿಕೊಳ್ಳಿ. ಬಳಿಕ ಮೈದಾ ಹಿಟ್ಟಿಗೆ ಸ್ವಲ್ಪ ನೀರನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಹಿಟ್ಟನ್ನು ಮಾಡಿಕೊಳ್ಳಿ. ಈಗ ತವಾ ಬಿಸಿ ಮಾಡಿ. ನಂತರ ಕಟ್ಲೆಟ್ ಅನ್ನು ಮೈದಾ ಹಿಟ್ಟಿನಲ್ಲಿ ಮುಳುಗಿಸಿ ಬ್ರೆಡ್ ಕ್ರಂಬ್ಸ್ ಇರುವ ತಟ್ಟೆಯಲ್ಲಿ ಅದ್ದಿ ತವಾದಲ್ಲಿ ಕಾಯಿಸಿ. ಎರಡೂ ಬದಿಗೆ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ ತೆಗೆಯಿರಿ.

 

Saakshatv cooking recipe how to prepare biscuit rotti recipe

2. ಬಿಸ್ಕೂಟ್ ರೊಟ್ಟಿ

ಬೇಕಾಗುವ ಸಾಮಾಗ್ರಿಗಳು:

ಮೈದಾ – 1 ಕಪ್
ತೆಂಗಿನಕಾಯಿತುರಿ – 3/4 ಕಪ್
ರವಾ – ಅರ್ಧ ಕಪ್
ಕಡಲೇಹಿಟ್ಟು – 3 ಟೀ ಚಮಚ
ಮೆಣಸಿನ ಪುಡಿ – 1/2 ಚಮಚ
ಅರಶಿನ – ಚಿಟಿಕೆಯಷ್ಟು
ಕರಿಯಲು ಎಣ್ಣೆ
ಉದ್ದಿನ ಬೇಳೆ – 1/2 ಚಮಚ
ಸಾಸಿವೆ – 1/2 ಚಮಚ
ಕರಿಬೇವಿನ ಸೊಪ್ಪು – ಸ್ವಲ್ಪ
ಇಂಗು – ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
Saakshatv cooking recipe how to prepare biscuit rotti recipe
ಮೊದಲು ಮೈದಾಗೆ ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಪುಡಿ ಸೇರಿಸಿ. ನಂತರ 2 ಚಮಚ ಬಿಸಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಹಿಟ್ಟು ತಯಾರಿಸಿಕೊಂಡು ಚೆನ್ನಾಗಿ ನಾದಿ. ಬಳಿಕ 10 ನಿಮಿಷ ಇದನ್ನು ಹಾಗೆಯೇ ಮುಚ್ಚಿಡಿ.
ಈಗ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ ಸೇರಿಸಿ ಸಿಡಿದ ಬಳಿಕ, ಉದ್ದಿನಬೇಳೆ, ಕರಿಬೇವು ಸೊಪ್ಪು, ಚಿಟಿಕೆಯಷ್ಟು ಇಂಗು ಹಾಕಿ. ನಂತರ ಇದಕ್ಕೆ ಕಡಲೇಹಿಟ್ಟು, ರವಾ ಹಾಕಿ ಹುರಿಯಿರಿ. ಬಳಿಕ ತೆಂಗಿನಕಾಯಿತುರಿ ಸೇರಿಸಿ. ನಂತರ ಮೆಣಸಿನ ಪುಡಿ, ಅರಶಿನ ಪುಡಿ ಹಾಕಿ ಚೆನ್ನಾಗಿ ಬೆರೆಸಿ.
ನಂತರ ಇದನ್ನು ತಣ್ಣಗಾದ ಬಳಿಕ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಟ್ಟುಕೊಳ್ಳಿ.

ಈಗ ತಯಾರಿಸಿಟ್ಟುಕೊಂಡ ಮೈದಾ ಹಿಟ್ಟಿನ ಮಿಶ್ರಣದಿಂದ ಸಣ್ಣ ಸಣ್ಣ ‌ಉಂಡೆಗಳನ್ನು‌ ತಯಾರಿಸಿ ಲಟ್ಟಿಸಿಕೊಳ್ಳಿ. ನಂತರ ಮಾಡಿಟ್ಟುಕೊಂಡ ಉಂಡೆಯನ್ನು ಮಧ್ಯದಲ್ಲಿ ‌ಇಟ್ಟು ಮುಚ್ಚಿ. ನಂತರ ಪೂರಿ ತರಹ ಲಟ್ಟಿಸಿ ಎಣ್ಣೆಯಲ್ಲಿ ‌ಕರಿಯಿರಿ.‌ ಈಗ ರುಚಿಯಾದ ಬಿಸ್ಕೂಟ್ ರೊಟ್ಟಿ ಸವಿಯಲು‌ ಸಿದ್ಧವಾಗಿದೆ.

Saakshatv cooking recipe how to prepare shavige alu bonda

3. ಶ್ಯಾವಿಗೆ ಆಲೂ ಬೋಂಡಾ

ಬೇಕಾಗುವ ಸಾಮಾಗ್ರಿಗಳು

ಶ್ಯಾವಿಗೆ – 1 ಕಪ್
ಆಲೂಗಡ್ಡೆ – 2
ಬೀನ್ಸ್ – 4
ಈರುಳ್ಳಿ 1
ಜೀರಿಗೆ – 1 ಚಮಚ
ಚಿಲ್ಲಿ ಫ್ಲೆಕ್ಸ್ – 1 ಚಮಚ
ಕಡಲೆ ಹಿಟ್ಟು 1/2 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ.
ಆಂಚೂರ್ ಪೌಡರ್ 1/4 ಚಮಚ.
ನಿಂಬೆ ರಸ 1/2 ಚಮಚ.
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe how to prepare shavige alu bonda
ಮಾಡುವ ವಿಧಾನ

ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಿ. ನಂತರ ಇದಕ್ಕೆ ಚಿಕ್ಕದಾಗಿ ಕತ್ತರಿಸಿದ ಬೀನ್ಸ್, ಈರುಳ್ಳಿ, ಶಾವಿಗೆ, ಜೀರಿಗೆ ಪುಡಿ, ಚಿಲ್ಲಿ ಫ್ಲೆಕ್ಸ್, ಆಂಚೂರ್ ಪೌಡರ್ , ನಿಂಬೆ ರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಡಲೆ ಹಿಟ್ಟು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ.
ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಉಂಡೆಗಳನ್ನು ಕೆಂಪಗೆ ಕರಿದು ತೆಗೆಯಿರಿ. ರುಚಿಯಾದ ಶ್ಯಾವಿಗೆ ಆಲೂ ಬೋಂಡಾ ಸವಿಯಲು ಸಿದ್ಧ.

Saakshatv cooking recipe prepare chat using bread

4. ಬ್ರೆಡ್‌ ಉಳಿದಿದ್ದರೆ ತಯಾರಿಸಿ ರುಚಿಯಾದ ಚಾಟ್

ಬೇಕಾಗುವ ‌ಸಾಮಾಗ್ರಿಗಳು

ಬ್ರೇಡ್‌ ತುಂಡುಗಳು – 4
ಆಲೂಗಡ್ಡೆ – 1
ಟೊಮೆಟೊ – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಈರುಳ್ಳಿ – 1
ಜೀರಿಗೆ ಪುಡಿ – 1/2 ಚಮಚ
ಕೆಂಪು ಮೆಣಸಿನಹುಡಿ – 1/2 ಚಮಚ
ಚಾಟ್ ಮಸಾಲಾ 1/4 ಚಮಚ
ಮೊಸರು – 1 ಚಮಚ
ಹಸಿರು ಚಟ್ನಿ -1/2 ಚಮಚ
ಹುಣಸೆ ಚಟ್ನಿ – 1/2 ಚಮಚ

ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ. ನಂತರ ಬ್ರೆಡ್ ಅನ್ನು ಅದರಲ್ಲಿ ಬಿಸಿ ಮಾಡಿ. ಬ್ರೆಡ್ ಗೋಲ್ಡನ್ ಬಣ್ಣಕ್ಕೆ ‌ತಿರುಗುವವರೆಗೆ ಮತ್ತು ಗರಿಗರಿಯಾಗುವವರೆಗೆ ಕಾಯಿಸಿ.
ಈಗ ಬ್ರೆಡ್ ಗಳನ್ನು ಪ್ರತ್ಯೇಕ ತಟ್ಟೆಯಲ್ಲಿ ಇರಿಸಿಕೊಳ್ಳಿ.

ಆಲೂಗಡ್ಡೆಯನ್ನು ಬೇಯಿಸಿ ಅದರ ಸಿಪ್ಪೆ ತೆಗೆದು ಮ್ಯಾಶ್ ಮಾಡಿ. ನಂತರ ಅದಕ್ಕೆ ಕತ್ತರಿಸಿದ ಟೊಮೆಟೊ, ಕೊತ್ತಂಬರಿ ಮತ್ತು ಈರುಳ್ಳಿ ಸೇರಿಸಿ. ಇದಕ್ಕೆ ‌ ಹುರಿದ ಜೀರಿಗೆ, ಉಪ್ಪು, ಕೆಂಪು ಮೆಣಸಿನಹುಡಿ, ಚಾಟ್ ಮಸಾಲಾ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ. ಮಸಾಲೆಗಳು ಚೆನ್ನಾಗಿ ಬೆರೆಯುವಂತೆ ಎಲ್ಲವನ್ನೂ ಬೆರೆಸಿ.
ಈ ಆಲೂಗಡ್ಡೆ ಮಿಶ್ರಣವನ್ನು ಬ್ರೆಡ್ ಮೇಲೆ ಇರಿಸಿ. ಅದರ ಮೇಲೆ ಮೊಸರು, ಹಸಿರು ಚಟ್ನಿ, ಹುಣಸೆ ಚಟ್ನಿ ಸವರಿ
ಈಗ ಸ್ವಲ್ಪ ಕಪ್ಪು ಉಪ್ಪು, ಖಾರ ಅಥವಾ ಭುಜಿಯಾ ಮತ್ತು ಪಾಪಡಿ ಇದ್ದರೆ, ಅವುಗಳನ್ನು ಪುಡಿಮಾಡಿ ಹಾಕಿ.
ಕೊನೆಯಲ್ಲಿ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕೆಲವು ದಾಳಿಂಬೆಗಳನ್ನು ಸೇರಿಸಿ ಅಲಂಕರಿಸಿ.
ನಿಮ್ಮ ರುಚಿಗೆ ತಕ್ಕಂತೆ ಹಸಿ ಮೆಣಸಿನಕಾಯಿ ‌ಚಟ್ನಿ ಸೇರಿಸಬಹುದು.

Saakshatv cookingrecipe how to prepare uddina vade

5. ಉದ್ದಿನ ವಡೆ

ಬೇಕಾಗುವ ಸಾಮಾಗ್ರಿಗಳು
ಉದ್ದು – 1 ಕಪ್
ರವೆ – 1 ಕಪ್
ಶುಂಠಿ ತುರಿ- ಸ್ವಲ್ಪ
ಹಸಿ ಮೆಣಸು – 2
ಕೊತ್ತಂಬರಿಸೊಪ್ಪು – ಸ್ವಲ್ಪ
ಸಕ್ಕರೆ – 1 ಚಮಚ
ಅಡಿಗೆ ಸೋಡಾ ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಉದ್ದಿನಬೆಳೆಯನ್ನು 2 ರಿಂದ 3 ಗಂಟೆ ನೀರಿನಲ್ಲಿ ನೆನೆಹಾಕಿ‌ ನಂತರ ಹದವಾಗಿ ರುಬ್ಬಿ. ಬಳಿಕ ಶುಂಠಿ ತುರಿ, ಸಣ್ಣಗೆ ಹೆಚ್ಚಿದ ಹಸಿಮೆಣಸು ಮತ್ತು ಕೊತ್ತಂಬರಿಸೊಪ್ಪು, ಸಕ್ಕರೆ, ಅಡಿಗೆ ಸೋಡಾ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ‌ಈ ಮಿಶ್ರಣವನ್ನು 2 ಗಂಟೆಗಳ ಕಾಲ ಹಾಗೆಯೇ ಬಿಡಿ. ಬಳಿಕ ಅದಕ್ಕೆ ರವೆಯನ್ನು ಸೇರಿಸಿ.‌‌
ಬಾಣಲೆಯಲ್ಲಿ ಎಣ್ಣೆಯನ್ನು ‌ಬಿಸಿ‌ ಮಾಡಿ. ಉದ್ದಿನ ಹಿಟ್ಟಿನ ಮಿಶ್ರಣವನ್ನು ವಡೆಯಕಾರದಲ್ಲಿ ಮಧ್ಯದಲ್ಲಿ ಸಣ್ಣ ತೂತು ಮಾಡಿ ಬಿಸಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ತಿರುಗುವವರೆಗೆ ಎರಡೂ ಬದಿಯನ್ನು ಕರಿದು ತೆಗೆಯಿರಿ.‌ ಈಗ ರುಚಿಯಾದ ಉದ್ದಿನ ವಡೆಯನ್ನು ಕಾಯಿ ಚಟ್ನಿ ಜೊತೆ ಸವಿಯಿರಿ.

 

Tags: #saakshatvccookingfood recipies
ShareTweetSendShare
Join us on:

Related Posts

ಇನ್ನು ಮುಂದೆ ಪಿಎಫ್ ಹಣ ಪಡೆಯುವುದು ನೀರು ಕುಡಿದಷ್ಟೇ ಸುಲಭ -34 ಕೋಟಿ ಉದ್ಯೋಗಿಗಳ ಖಾತೆಗೆ ಬೀಳಲಿದೆ ಬಡ್ಡಿ ಹಣ : ಕೋಟ್ಯಂತರ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್

ಇನ್ನು ಮುಂದೆ ಪಿಎಫ್ ಹಣ ಪಡೆಯುವುದು ನೀರು ಕುಡಿದಷ್ಟೇ ಸುಲಭ -34 ಕೋಟಿ ಉದ್ಯೋಗಿಗಳ ಖಾತೆಗೆ ಬೀಳಲಿದೆ ಬಡ್ಡಿ ಹಣ : ಕೋಟ್ಯಂತರ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್

by Shwetha
July 9, 2026
0

ಬೆಂಗಳೂರು: ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುದಿನಗಳ ನಿರೀಕ್ಷೆಯ ನಂತರ ಜುಲೈ 15 ರಂದು ಸುಮಾರು 34...

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

E20ನಿಂದ ಹಾನಿಯಾದ ಒಂದೇ ಒಂದು ಕಾರು ತೋರಿಸಿ: ನಿತಿನ್ ಗಡ್ಕರಿ

by Shwetha
July 9, 2026
0

ನಿತಿನ್ ಗಡ್ಕರಿ ಅವರು, E20 ಪೆಟ್ರೋಲ್‌ನಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಎಂಬ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, E20 ಪೆಟ್ರೋಲ್‌ನಿಂದ ಯಾವುದೇ ಕಾರಿಗೆ ಸಮಸ್ಯೆಯಾಗಿದೆ ಎಂಬುದಕ್ಕೆ ಪುರಾವೆಗಳಿಲ್ಲ....

ನನಗೂ ಬೇಕಾದ ಖಾತೆ ಸಿಗಲಿಲ್ಲ ಆದ್ರೆ ನನಗೆ ದುಃಖನೂ ಇಲ್ಲ ಸಂತೋಷನೂ ಇಲ್ಲ : ಸತೀಶ್ ಜಾರಕಿಹೊಳಿ

ಸಂಪುಟ ವಿಸ್ತರಣೆ ಆದ್ರೂ ಸರ್ಕಾರ ಅಲುಗಾಡಲ್ಲ, ಡಿಕೆ ಶಿವಕುಮಾರ್ ಅವರೇ ಗಟ್ಟಿಯಾಗಿ ಇರ್ತಾರೆ: ವಿಜಯೇಂದ್ರಗೆ ಸತೀಶ್ ಜಾರಕಿಹೊಳಿ ಟಾಂಗ್

by Shwetha
July 9, 2026
0

ಬೆಳಗಾವಿ: ಸಂಪುಟ ವಿಸ್ತರಣೆ ಮಾಡಿದರೆ ಸರ್ಕಾರದ ಬುಡ ಅಲ್ಲಾಡುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ....

ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಭೀತಿ; ವಾಹನ ಸವಾರರಿಗೆ ಎಚ್ಚರಿಕೆ

ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಭೀತಿ; ವಾಹನ ಸವಾರರಿಗೆ ಎಚ್ಚರಿಕೆ

by Shwetha
July 9, 2026
0

ಶಿರಾಡಿ ಘಾಟ್‌ ಸೇರಿದಂತೆ ಹಾಸನ ಜಿಲ್ಲೆಯ ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ-75 (NH-75)ಯಲ್ಲಿ ಮತ್ತೆ ಭೂಕುಸಿತದ ಆತಂಕ ಎದುರಾಗಿದೆ. ಈ...

ಮತ ಹಾಕುವಾಗ ನಮ್ಮವರು, ಈಗ ಬಾಂಗ್ಲಾದವರಾ?- ಕುಮಾರಸ್ವಾಮಿಯದ್ದು ದ್ವಂದ್ವ ನಿಲುವು: ಮುಸ್ಲಿಂ ಸಮುದಾಯದ ಕುರಿತ ಹೇಳಿಕೆಗೆ ಶಾಸಕ ಬಾಲಕೃಷ್ಣ ತೀವ್ರ ವಾಗ್ದಾಳಿ

ಮತ ಹಾಕುವಾಗ ನಮ್ಮವರು, ಈಗ ಬಾಂಗ್ಲಾದವರಾ?- ಕುಮಾರಸ್ವಾಮಿಯದ್ದು ದ್ವಂದ್ವ ನಿಲುವು: ಮುಸ್ಲಿಂ ಸಮುದಾಯದ ಕುರಿತ ಹೇಳಿಕೆಗೆ ಶಾಸಕ ಬಾಲಕೃಷ್ಣ ತೀವ್ರ ವಾಗ್ದಾಳಿ

by Shwetha
July 9, 2026
0

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯ ಲಾಭಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡುತ್ತಿದ್ದಾರೆ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram