ಕಪ್ ನಮ್ದೆ ಅಂತಿರೋ ಆರ್ ಸಿಬಿಗೆ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಟಫ್ ಫೈಟ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿ ವರ್ಷದಂತೆ ಈ ಬಾರಿ ಕಪ್ ನಮ್ದೆ ಅಂತಾ ಕಣಕ್ಕಿಳಿದಿದೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಇದ್ದಾರೆ, ಮಿಸ್ಟರ್ 360 ಡಿಗ್ರಿ ಪ್ಲೇಯರ್ ಎಬಿಡಿ ವಿಲಿಯರ್ಸ್ ಇದ್ದಾರೆ.
ಬೌಂಡರಿ ಸಿಕ್ಸರ್ ಗಳ ಸ್ಪೆಷಲಿಸ್ಟ್ ಗ್ಲೆನ್ ಮ್ಯಾಕ್ಸ್ವೆಲ್ ಇದ್ದಾರೆ. ಹೀಗಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲಬಹುದು ಅಂತ ಅಭಿಮಾನಿಗಳು ನಂಬಿದ್ದಾರೆ. ಪ್ರತೀ ಸೀಸನ್ ನಂತೆ ಈ ಬಾರಿಯೂ ಆರ್ಸಿಬಿ ಕಪ್ ಗೆಲ್ಲುವ ಕನಸು ಕಾಣುತ್ತಿದೆ.
ಯುಎಇನಲ್ಲಿ ಆರ್ ಸಿಬಿ ಕಪ್ ಗೆಲ್ಲಲು ದಾರಿ ಅಷ್ಟು ಸುಲಭವಿಲ್ಲ. ಸದ್ಯ ಅಂಕ ಪಟ್ಟಿಯಲ್ಲಿ ಆರ್ ಸಿಬಿ 3ನೇ ಸ್ಥಾನದಲ್ಲಿದೆ. 7 ಪಂದ್ಯಗಳನ್ನು ಆಡಿ ಮುಗಿಸಿರುವ ಆರ್ ಸಿಬಿ ಇನ್ನೂ 7 ಪಂದ್ಯಗಳನ್ನು ಆಡಬೇಕಿದೆ.
ಸದ್ಯ 10 ಅಂಕಗಳು ಆರ್ ಸಿಬಿ ಕೈಯಲ್ಲಿದೆ. ಆದರೆ ರನ್ ರೇಟ್ ಚಿಂತೆ ಹೆಚ್ಚಿಸಿದೆ. ಮುಂದಿನ ಪಂದ್ಯಗಳಲ್ಲಿ ಆರ್ ಸಿಬಿ ಕನಿಷ್ಟ ಎರಡು ಪಂದ್ಯಗಳನ್ನಾದರೂ ಗೆದ್ದರೆ ಪ್ಲೇ ಆಫ್ ಗೆ ಎಂಟ್ರಿ ಪಡೆಯಬಹುದು.
ಆದರೆ ಪಾಯಿಂಟ್ ಟೇಬಲ್ ನಲ್ಲಿ ಅಗ್ರ ಎರಡು ಸ್ಥಾನ ಪಡೆದರೆ ಕ್ವಾಲಿಫೈಯರ್ ಮ್ಯಾಚ್ ಆಡುವ ಅವಕಾಶ ಸಿಗಲಿದೆ. ಕ್ವಾಲಿಫೈಯರ್ ನಲ್ಲಿ ಸೋತರೂ ಎಲಿಮಿನೇಟರ್ ಪಂದ್ಯದಲ್ಲಿ ಆಡುವ ಮೂಲಕ ಫೈನಲ್ ಗೇರುವ ಅವಕಾಶವಿದೆ.
RCB Schedule
– 20 ಸೆಪ್ಟೆಂಬರ್ (ಸೋಮವಾರ): ಬೆಂಗಳೂರು vs ಕೋಲ್ಕತಾ ನೈಟ್ ರೈಡರ್ಸ್, 7:30 PM, ಅಬುಧಾಬಿ
– 24 ಸೆಪ್ಟೆಂಬರ್ (ಶುಕ್ರವಾರ): ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, 7:30 PM, ಶಾರ್ಜಾ
– 26 ಸೆಪ್ಟೆಂಬರ್ (ಭಾನುವಾರ): ಬೆಂಗಳೂರು vs ಮುಂಬೈ ಇಂಡಿಯನ್ಸ್, 7:30 PM, ದುಬೈ
– 29 ಸೆಪ್ಟೆಂಬರ್ (ಬುಧವಾರ): ಬೆಂಗಳೂರು vs ರಾಜಸ್ಥಾನ ರಾಯಲ್ಸ್, 7:30 PM ದುಬೈ
– 03 ಅಕ್ಟೋಬರ್ (ಭಾನುವಾರ): ಬೆಂಗಳೂರು vs ಪಂಜಾಬ್ ಕಿಂಗ್ಸ್, 3:30 PM ಶಾರ್ಜಾ
– 06 ಅಕ್ಟೋಬರ್ (ಬುಧವಾರ): ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಸಂಜೆ 7:30, ಅಬುಧಾಬಿ
– 08 ಅಕ್ಟೋಬರ್ (ಶುಕ್ರವಾರ): ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್, ಸಂಜೆ 7:30, ದುಬೈ
ಕಳೆದ ಏಪ್ರಿಲ್- ಮೇ ತಿಂಗಳಲ್ಲಿ ಭಾರತದಲ್ಲಿ ಐಪಿಎಲ್ ನಡೆದಿತ್ತು. ಅದ್ಭುತ ಆರಂಭ ಪಡೆದಿದ್ದ ಆರ್ ಸಿಬಿ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದಿತ್ತು.
ಆದರೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲು ಆರ್ ಸಿಬಿಗೆ ಏಟು ಕೊಟ್ಟಿದೆ.
ಆರ್ ಸಿಬಿ ಫಸ್ಟ್ ಇನ್ನಿಂಗ್ಸ್ ಫರ್ಫಾಮೆನ್ಸ್
– ಮುಂಬೈ ಇಂಡಿಯನ್ಸ್ ವಿರುದ್ಧ 2 ವಿಕೆಟ್ ಜಯ
– ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ 6 ರನ್ ಜಯ
– ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 38 ರನ್ ಜಯ
– ರಾಜಸ್ಥಾನ ರಾಯಲ್ಸ್ ವಿರುದ್ಧ 10 ವಿಕೆಟ್ ಜಯ
– ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 69 ರನ್ ಸೋಲು
– ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ರನ್ ಜಯ
– ಪಂಜಾಬ್ ಕಿಂಗ್ಸ್ ವಿರುದ್ಧ 34 ರನ್ ಸೋಲು








