ಬ್ಲೂ ಫಿಲ್ಮ್ ಕೇಸ್ : ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು ಮಂಜೂರು..!
ಬ್ಲ್ಯೂ ಫಿಲ್ಮ್ ನಿರ್ಮಾಣ ಮಾಡ್ತಿದ್ದ ಕೇಸ್ ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು ಮಂಜೂರಾಗಿದೆ. ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ 50 ಸಾವಿರ ರೂಪಾಯಿ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿದೆ.
“ರಾಜಕೀಯಕ್ಕೆ ಹಲವು ಆಫರ್ ಬಂದಿವೆ ಆದ್ರೆ ನನಗೆ ಆಸಕ್ತಿ ಇಲ್ಲ” : ಸೋನು ಸೂದ್
ಉದ್ಯಮಿ ರಾಜ್ ಕುಂದ್ರಾ ಜೊತೆ ಸ್ನೇಹಿತ ರಾಯನ್ ತೋರ್ಪೆಗೂ ಜಾಮೀನು ಸಿಕ್ಕಿದೆ. ಜುಲೈ 16 ರಂದು ರಾಜ್ ಕುಂದ್ರಾ ಮತ್ತು ಇತರರನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಅರೆಸ್ಟ್ ಮಾಡಿದ್ದರು. ಈ ಕೇಸ್ ಸಂಬಂಧ ಕಳೆದ ವಾರವಷ್ಟೇ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದರು.
ಸೆಪ್ಟೆಂಬರ್ 16 ರಂದು ಮುಂಬೈ ಪೊಲೀಸರು 1467 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ 43 ಮಂದಿ ಸಾಕ್ಷಿಧಾರರ ಹೇಳಿಕೆಗಳು ದಾಖಲಾಗಿವೆ. ಐದು ವ್ಯಕ್ತಿಗಳು 164 ಸಿಆರ್‌ಪಿಸಿ ಪ್ರಕಾರ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾರೆ. ಇದು ಎರಡನೇ ದೋಷಾರೋಪ ಪಟ್ಟಿಯಾಗಿದೆ.








