ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಶುಕ್ರವಾರ ಮತ್ತೆ ಎರಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇವರಿಬ್ಬರೂ ಮಂಗಳೂರಿನ ಕೊರೊನಾ ಹಾಟ್ ಸ್ಪಾಟ್ ಆಗಿರುವ ಫಸ್ಟ್ ನ್ಯೂರೋ ಆಸ್ಪತ್ರೆಯ ನಂಟು ಹೊಂದಿರುವುದು ಖಚಿತವಾಗಿದೆ.

ಬಂಟ್ವಾಳ ದ 69 ವರ್ಷದ ವೃದ್ಧ ಮತ್ತು ಬೋಳೂರು ಗ್ರಾಮದ 62 ವರ್ಷದ ವೃದ್ಧರಲ್ಲಿ ಇಂದು ಸೋಂಕು ದೃಢಪಟ್ಟಿದೆ. ಏಪ್ರಿಲ್ 19 ರಂದು ಕೊರೊನಾಕ್ಕೆ ಬಲಿಯಾದ ಮಹಿಳೆಯ ಸಂಬಂಧಿ ಹಾಗೂ ನೆರೆಮನೆಯವರಾಗಿರುವ ಬಂಟ್ವಾಳ ದ 69 ವರ್ಷದ ವೃದ್ಧರಿಗೆ ರೋಗಿ ಸಂಖ್ಯೆ P-309 ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿರುವುದು ಖಚಿತವಾಗಿದೆ.
62 ವರ್ಷದ ವೃದ್ದ ಬೋಳಾರ ನಿವಾಸಿಯು ಗುರುವಾರದಂದು ಕೊರೊನಾ ಸೋಂಕು ದೃಢಪಟ್ಟ ವೃದ್ಧೆಯ ಪತಿ ಎಂದು ತಿಳಿದುಬಂದಿದೆ. ಇವರಿಬ್ಬರನ್ನು ನಗರದ ವೆನ್ಲಾಕ್ ಕೊರೊನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.








