ನಾನು ಸಂಜಯ್ ಪಾಟೀಲ್ ಅಣ್ಣಾ ಬಗ್ಗೆ ರಿಯಾಕ್ಟ್ ಮಾಡಲ್ಲ : ಹೆಬ್ಬಾಳ್ಕರ್
ಬೆಳಗಾವಿ : ನಾನು ಸಂಜಯ್ ಪಾಟೀಲ್ ಅಣ್ಣಾ ಬಗ್ಗೆ ನಾನು ರಿಯಾಕ್ಟ್ ಮಾಡಲ್ಲ. ಈಗಾಗಲೇ ಕ್ಷೇತ್ರದಲ್ಲಿ ಪ್ರತಿಯೊಂದು ಊರಿನಲ್ಲಿ ಜನರು ರಿಯಾಕ್ಟ್ ಮಾಡ್ತಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ತಮ್ಮ ವಿರುದ್ಧ ಸಂಜಯ್ ಪಾಟೀಲ್ ನಾಲಿಗೆ ಹರಿಬಿಟ್ಟ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ನಾನು ಸಂಜಯ್ ಪಾಟೀಲ್ ಅಣ್ಣಾಗೆ ರಿಯಾಕ್ಟ್ ಮಾಡಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿಗೆ ಕೇಳಬಯಸುತ್ತೇನೆ. ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಹೇಳಿದ್ದಾರೋ, ವೈಯಕ್ತಿಕವಾಗಿ ಹೇಳಿದ್ದಾರೋ ಅನ್ನೋದನ್ನ ಸ್ಪಷ್ಟಪಡಿಸಬೇಕು. ಹೆಣ್ಣಿನ ಬಗ್ಗೆ ಮಾತನಾಡಿದವರ ಪರಿಸ್ಥಿತಿ ಏನಾಗಿದೆ ಇತಿಹಾಸ ಪುಟ ತಿರುವಿ ನೋಡಿ ಎಂದು ಕಿಡಿಕಾರಿದರು.
ಇನ್ನು ಸಂಜಯ್ ಪಾಟೀಲ್ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ನಾನು ಸಂಜಯ್ ಪಾಟೀಲ್ ಅಣ್ಣನವರಿಗೆ ಇಷ್ಟೇ ಹೇಳ್ತೀನಿ. ಅಣ್ಣ ನಿನಗೆ ಮಗಳು ಇದ್ದಾಳೆ, ತಾಯಿ ಇದ್ದಾರೆ, ಅಕ್ಕ ತಂಗಿಯರಿದ್ದಾರೆ. ನೀನು ಏನು ಮಾತನಾಡಿದೆಯಲ್ಲ ನನಗೆ ಮಾತನಾಡಿಲ್ಲ, ನೀನು ಯಾರಿಗೆ ಮಾತನಾಡಿದೀಯಾ ಅಂತಾ ವಿಮರ್ಶೆ ಮಾಡಕೋ. ನಾನು ಅವರನ್ನು ಏನೂ ಕೇಳಕ್ಕೆ ಬಯಸಲ್ಲ, ಕ್ಲ್ಯಾರಿಫಿಕೇಶನ್ ಕೇಳಲು ಬಯಸಲ್ಲ ಎಂದರು.
ಇನ್ನು ನಾನು ಅವರ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿರನ್ನು ಕೇಳ್ತೇನೆ. ಇದು ನಿಮ್ಮ ಪಕ್ಷದ ಶಿಸ್ತು ಸಂಸ್ಕøತಿನಾ ಎಂದು ಪ್ರಶ್ನಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಇದು ಸಂಜಯ್ ಪಾಟೀಲ್‍ರ ವೈಯಕ್ತಿಕ ಹೇಳಿಕೆಯಾ, ಪಕ್ಷದ ಹೇಳಿಕೆಯಾ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.









