ಕೊಬ್ಬರಿ ಬಿಸ್ಕೆಟ್
ಬೇಕಾಗುವ ಪದಾರ್ಥಗಳು
ಬೆಣ್ಣೆ – 1/2 ಕಪ್
ಸಕ್ಕರೆ ಹುಡಿ – 3/4 ಕಪ್
ಕೊಬ್ಬರಿ ಪುಡಿ – 1ಕಪ್
ಮೈದಾ – 1 ಕಪ್
ಬೇಕಿಂಗ್ ಪೌಡರ್ – 1/2 ಚಮಚ
ಹಾಲು – 2 – 3 ಚಮಚ
ಮಾಡುವ ವಿಧಾನ

ಮೊದಲಿಗೆ ಪಾತ್ರೆಗೆ ಬೆಣ್ಣೆ ಹಾಕಿ ಚೆನ್ನಾಗಿ ಬೀಟ್ ಮಾಡಿ. ನಂತರ ಸಕ್ಕರೆ ಪುಡಿ ಸೇರಿಸಿ ಮತ್ತೆ ಬೀಟ್ ಮಾಡಿ ಚೆನ್ನಾಗಿ ಬೆರೆಸಿ. ಬಳಿಕ ಕೊಬ್ಬರಿ ಪುಡಿ, ಮೈದಾ, ಬೇಕಿಂಗ್ ಪೌಡರ್ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಇದಕ್ಕೆ 2 ರಿಂದ 3 ಚಮಚ ಹಾಲು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ತುಪ್ಪ ಸವರಿದ ತಟ್ಟೆಯಲ್ಲಿ ಇಟ್ಟು ಮೆಲ್ಲಗೆ ಸ್ವಲ್ಪ ಒತ್ತಿ. ಪಾನ್ ಬಿಸಿ ಮಾಡಿ ಅದರ ಮೇಲೆ ಬಿಸ್ಕೆಟ್ ಸ್ಟ್ಯಾಂಡ್ ಇಟ್ಟು ಮಾಡಿಟ್ಟುಕೊಂಡ ಬಿಸ್ಕೆಟ್ ಹಿಟ್ಟನ್ನು ದೊಡ್ಡ ಉರಿಯಲ್ಲಿ 10 ನಿಮಿಷ ಕಾಯಿಸಿ. ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 15 ನಿಮಿಷ ಹೊಂಬಣ್ಣ ಬರುವವರೆಗೂ ಬೇಯಿಸಿ. ಈಗ ರುಚಿಯಾದ ಕೊಬ್ಬರಿ ಬಿಸ್ಕೆಟ್ ಸವಿಯಲು ಸಿದ್ಧವಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1444483053577965570?s=19
https://twitter.com/SaakshaTv/status/1444460267228864514?s=19
https://twitter.com/SaakshaTv/status/1444135690875326465?s=19
https://twitter.com/SaakshaTv/status/1444122158276521986?s=19
#Saakshatv #cookingtips #coconutbiscuits








