ಡ್ರಗ್ ಪ್ರಕರಣದಲ್ಲಿ ಶಾರುಖ್ ಪುತ್ರನ ಬಂಧನ – ಆರ್ಯನ್ ಚಾಟ್ ನಿಂದ ಶಾಕಿಂಗ್ ವಿಚಾರ ಬಹಿರಂಗ..!
ಮುಂಬೈ : ಡ್ರಗ್ಸ್ ಪ್ರರಕಣದಲ್ಲಿ ಎಸ್ ಸಿಬಿ ಬಲೆಗೆ ಸಿಲುಕಿಕೊಂಡಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಬಂಧನದ ಬೆನ್ನಲ್ಲೇ ನೆಟ್ಟಿಗರು ಶಾರುಖ್ ಹಾಗೂ ಪುತ್ರನ ಬಗ್ಗೆ ಟ್ರೋಲ್ ಗಳನ್ನ ಮಾಡೋದಕ್ಕೆ ಶುರುಮಾಡಿದ್ದಾರೆ. ಈ ನಡುವೆ ಆರ್ಯನ್ ಖಾನ್ ಮೊಬೈಲ್ ಚಾಟ್ನಿಂದ ಹಲವು ಶಾಕಿಂಗ್ ವಿಚಾರಗಳು ಗೊತ್ತಾಗಿದೆ ಎಂದು NCB ಅಧಿಕಾರಿಗಳು ಹೇಳಿದ್ದಾರೆ. ಆರ್ಯನ್ ಖಾನ್ ಹಾಗೂ ಅರ್ಬಾಜ್ ಸೇಠ್ ಮರ್ಚೆಂಟ್ರ ವಿಚಾರಣೆ ವೇಳೆ ಅವರ ವಾಟ್ಸ್ಆಪ್ ಚಾಟ್ ಹಾಗೂ ಬ್ರೌಸರ್ ಹಿಸ್ಟರಿಯಿಂದ ಕೆಲವು ಆಘಾತಕಾರಿ ಅಂಶಗಳು ಎನ್ಸಿಬಿಯ ಗಮನಕ್ಕೆ ಬಂದಿವೆ ಎನ್ನಲಾಗಿದೆ.
ಅಂದ್ಹಾಗೆ ಅಕ್ಟೋಬರ್ 03ರಂದೇ ಆರ್ಯನ್ ಖಾನ್ ಹಾಗೂ ಇತರ ಇಬ್ಬರು ಬಂಧಿತರನ್ನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಿದಾಗಲೇ ಎನ್‌ಸಿಬಿಯು ತನಿಖೆ ವೇಳೆ ಕೆಲವು ಆಘಾತಕಾರಿ ಅಂಶಗಳು ಬಯಲಾಗಿವೆ ಎಂದು NCB ಅಧಿಕಾರಿಗಳು ಹೇಳಿದ್ದರು. ಡಾರ್ಕ್ ವೆಬ್ಗೆ ಸಂಬಂಧ ಹೊಂದಿದ್ದಾಗಿ ಹಾಗೂ ಬಿಟ್ಕಾಯಿನ್ ಕುರಿತಾಗಿಯೂ ಕೆಲವು ಅಂಶಗಳು ಪತ್ತೆಯಾಗಿವೆ ಎಂದು ಎನ್ಸಿಬಿ ಹೇಳಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಈ ಬಗ್ಗೆ ಮಾತನಾಡಿದ್ದು, ಈ ಪ್ರಕರಣದಲ್ಲಿ ಇನ್ನಷ್ಟು ತನಿಖೆ ಮಾಡಬೇಕಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ಬಂಧನಗಳನ್ನು ಮಾಡಿದ್ದೇವೆ. ಇಬ್ಬರು ಮುಖ್ಯ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದೇವೆ. ತನಿಖೆ ವೇಳೆ ಆರೋಪಿಗಳಿಗೆ ಡಾರ್ಕ್ ವೆಬ್ ಹಾಗೂ ಬಿಟ್ಕಾಯಿನ್ ಸಂಬಂಧ ಇರುವುದಾಗಿ ಗೊತ್ತಾಗಿದೆ. ಪ್ರಕರಣ ಸಾಕಷ್ಟು ಗಂಭೀರತೆ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಡಾರ್ಕ್ ವೆಬ್ ಮತ್ತು ಬಿಟ್ಕಾಯಿನ್ ಮಾದಕ ವಸ್ತು ಖರೀದಿ, ಮಾರಾಟಕ್ಕೆ ಡಾರ್ಕ್ ವೆಬ್ ಬಳಸಲಾಗುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಿಂದ ಡ್ರಗ್ಸ್ ಖರೀದಿಸುವಾಗ ಬಿಟ್ಕಾಯಿನ್ ಮೂಲಕ ಹಣ ನೀಡುವ ವ್ಯವಸ್ಥೆ ಕೆಲ ವರ್ಷಗಳಿಂದ ಚಾಲ್ತಿಗೆ ಬಂದಿದೆ. ಹಾಗಾಗಿ ಈ ಎರಡು ವಿಷಯಗಳ ಬಗ್ಗೆ ಎನ್ಸಿಬಿ ಹೆಚ್ಚಿನ ತನಿಖೆ ನಡೆಸುತ್ತಿದೆ. ಆರ್ಯನ್ ಖಾನ್, ಅರ್ಬಾಜ್ ಖಾನ್ ಹಾಗೂ ಮುನ್ಮುನ್ ಧಮೇಚಾ ಅವರುಗಳನ್ನು ಅಕ್ಟೋಬರ್ 07ರವರೆಗೆ ಎನ್ಸಿಬಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ.
ಸದ್ಯ ಆರ್ಯನ್ ಎನ್ ಸಿಬಿ ಅಧಿಕಾರಿಗಳ ವಶದಲ್ಲಿದ್ದು, ಅವರ ಮೊಬೈಲ್ ಅನ್ನು ಅಧಿಕಾರಿಗಳು ಸ್ಕ್ಯಾನ್ ಮಾಡುತ್ತಿದ್ದಾರೆ ಮತ್ತು ಫೋನ್ ಚಾಟ್ ಲಿಸ್ಟ್ ಕುರಿತಂತೆ ಪರಿಶೀಲನೆ ನಡೆಸುತ್ತಿದ್ದಾರೆ.

ಐಶಾರಾಮಿ ಕ್ರೂಸ್ ಶಿಪ್‌ನಲ್ಲಿ ನಡೆದಿತ್ತು ಪಾರ್ಟಿ ಮುಂಬೈ ತೀರಕ್ಕೆ ಸಮೀಪದಲ್ಲಿ ಸಮುದ್ರ ಮಧ್ಯೆ ಐಶಾರಾಮಿ ಕ್ರೂಸ್ ಶಿಪ್ ಮೇಲೆ ಎನ್‌ಸಿಬಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದರು. ಈ ಸಮಯ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು, ಅವರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಹ ಇದ್ದರು. ನಂತರ ಆರ್ಯನ್ ಖಾನ್, ಅರ್ಬಾಜ್ ಖಾನ್ ಹಾಗೂ ಮಾಡೆಲ್ ಮುನ್‌ಮುನ್ ಧಮೇಚಾ ಅವರುಗಳನ್ನು ಎನ್‌ಸಿಬಿ ಬಂಧಿಸಿತು.








