ವಿವಿಧ ಬಗೆಯ ಜ್ಯೂಸ್ / ಮಿಲ್ಕ್ ಶೇಕ್ ಗಳ ರೆಸಿಪಿಗಳು
1. ಬಾಳೆ ಹಣ್ಣಿನ ಮಿಲ್ಕ್ ಶೇಕ್ ಮಾಡುವ 3 ವಿಧಾನಗಳು – ಸಿಂಪಲ್ ಅಂಡ್ ಟೇಸ್ಟಿ..! ರಿಫ್ರೆಶ್ಶಿಂಗ್..!
ಕೆಲವೊಮ್ಮೆ ತುಂಬ ಸುಸ್ತಾಗಿ ಮನೆಗೆ ಬಂದು ಕೂತಿರುತ್ತೇವೆ. ಒಂದ್ ಕಡೆ ಹೊಟ್ಟೆ ಹಸಿವು ಇರುತ್ತೆ. ಮತ್ತೊಂದ್ ಕಡೆ ಏನಾದ್ರೂ ಟೇಸ್ಟಿ ಮತ್ತೆ ರಿಫ್ರೆಶಿಂಗ್ ಡ್ರಿಂಕ್ಸ್ ಕುಡಿಬೇಕು ಅಂತ ಅನ್ಸುತ್ತೆ. ಆಗ ನೀವು ನಿಮ್ಮ ಮನೆಯಲ್ಲಿ ಸಿಗುವ ಕೆಲವೇ ಕೆಲವೇ ಪದಾರ್ಥಗಳಿಂದ ಸುಲಭವಾಗಿ ಈ ಬಾಳೆಹಣ್ಣಿನ ಮಿಲ್ಕ್ ಸೇಕ್ ಗಳನ್ನ ಮಾಡಿ ಕುಡಿಯಬಹುದು. ಬಾಳೆಹಣ್ಣು ಟೇಸ್ಟ್, ರಿಫ್ರೆಶ್ ಮೆಂಟ್ ಜೊತೆಗೆ ಹಸಿವನ್ನೂ ಇನ್ಸ್ ಟೆಂಟ್ ಆಗಿ ತಡೆಯುತ್ತೆ.
ಮೊದಲನೇ ವಿಧಾನಕ್ಕೆ ಬೇಕಾದ ಪದಾರ್ಥಗಳು
ಪಚ್ಚು ಬಾಳೆ ಹಣ್ಣು -2
ಗಟ್ಟಿ ಹಾಲು -2 ಕಪ್
ಸಕ್ಕರೆ – 2 ಟೇಬಲ್ ಸ್ಪೂನ್ ( ನಿಮ್ಮ ರುಚಿಗೆ ತಕ್ಕಷ್ಟು)
ಮಾಡುವ ವಿದಾನ – ಮೊದಲಿಗೆ ಒಂದು ಜ್ಯೂಸ್ ಮೇಕರ್ ಗೆ 2 ಪಚ್ಚು ಬಾಳೆಹಣ್ಣುಗಳನ್ನ ರಫ್ ಆಗಿ ಕಟ್ ಮಾಡಿ ಹಾಕಿ. ಅದಕ್ಕೆ ಹಾಲು ಹಾಕಿ. ಬಳಿಕ ಸಕ್ಕರೆ ಹಾಕಿ ನಂತರ ಜಾರಿನ ಮುಚ್ಚಳ ಮುಚ್ಚಿ ಮೊದಲಿಗೆ 1 ರೌಂಡ್ ಹಾಗೇ ರಫ್ ಆಗಿ ಗ್ರೈಂಡ್ ಮಾಡಿ. ನಂತರ ಮತ್ತೆ ಒಂದು 10 ಸೆಕೆಂಡ್ಸ್ ರುಬ್ಬಿ. ಬಾಳೆ ಹಣ್ಣು ಬೇಗ ನುಣ್ಣಗಾಗುವುದ್ರಿಂದ ಅದು ಬೇಗ ಲೋಳೆಯಂತಾಗುವ ಚಾನ್ಸ್ ಸ್ ತುಂಬಾನೆ ಇರುತ್ತೆ ಹೀಗಾಗಿ ನೋಡಿಕೊಂಡು ರುಬ್ಬಬೇಕು. ಇದಾದ ಬಳಿಕ ಹಾಲು ತೆಗೆದುಕೊಂಡಿದ್ದ ಕಪ್ ನಲ್ಲಿ 2 ಕಪ್ ನೀರು ಹಾಕಿ ಮತ್ತೊಮ್ಮೆ 10 ಸೆಕೆಂಡ್ ಗ್ರೈಂಡ್ ಮಾಡಿ ಟೆಕ್ಚರ್ ಸ್ಮೂತಿ ರೀತಿಯಲ್ಲಿ ಇರುತ್ತೆ. ಈಗ ಒಂದು ಗ್ಲಾಸ್ ಗೆ ಹಾಕಿ ನಿಮಗೆ ಬೇಕಿದ್ರೆ, ಅದರ ಜೊತೆಗೆ ಐಸ್ ಕ್ಯೂಬ್ಸ್ ಹಾಕಿ ಕುಡಿಯಬಹುದು.
2ನೇಯ ವಿಧಾನ
ಪಚ್ಚು ಬಾಳೆ ಹಣ್ಣು -2
ಗಟ್ಟಿ ಹಾಲು -2 ಕಪ್
ಸಕ್ಕರೆ – 2 ಟೇಬಲ್ ಸ್ಪೂನ್
ಏಲಕ್ಕಿ – 2-3 ಏಲಕ್ಕಿ
ಕಾಮ ಕಸ್ತೂರಿ ಬೀಜ / ತಂಪಿನ ಬೀಜ
ಪೆಪ್ಪರ್ ಪೌಡರ್.
ಒಂದು ಜ್ಯೂಸ್ ಮೇಕರ್ ಗೆ 2 ಪಚ್ಚು ಬಾಳೆಹಣ್ಣುಗಳನ್ನ ರಫ್ ಆಗಿ ಕಟ್ ಮಾಡಿ ಹಾಕಿ. ಅದಕ್ಕೆ ಹಾಲು ಹಾಕಿ. ಬಳಿಕ ಸಕ್ಕರೆ ಹಾಕಿ ನಂತರ ಜಾರಿನ ಮುಚ್ಚಳ ಮುಚ್ಚಿ ಮೊದಲಿಗೆ ಒಂದು ಸುತ್ತು ರುಬ್ಬಿ. ನಂತರ ಏಲಕ್ಕೆ ಚಚ್ಚಿ ಪುಡಿ ಹಾಕಿ, ನಂತರ ಹಾಲು ಹಾಕಿದ ಕಪ್ ನಲ್ಲಿ 2.30 ಇಂದ 3 ಕಪ್ ನೀರನ್ನ ಹಾಕಿ ಗ್ರೈಂಡ್ ಮಾಡಿ 10 -15 ಸೆಕೆಂಡ್ ಗಳ ವರೆಗೆ. ಬಳಿಕ ನೆನೆಯಿಟ್ಟ ಕಾಮಕಸ್ತೂರಿ ಬೀಜವನ್ನ 1 ಚಿಕ್ಕ ಚಮಚ ಒಂದು ಗ್ಲಾಸ್ ಗೆ ಹಾಗಿ ಅದಕ್ಕೆ ಜ್ಯೂಸ್ ನ ಮಿಶ್ರಣ ಹಾಕಿ. ಐಸ್ ಕ್ಯೂಬ್ಸ್ ಇಷ್ಟ ಇದ್ರೆ ಹಾಕಿಕೊಳ್ಳಬಹುದು. ನಂತರ ಇದಕ್ಕೆ ಪೆಪ್ಪರ್ ಪೌಡರ್ ಹಾಕಿ ಸವೆಯಿರಿ. ಇದೇನಪ್ಪ ವಿಚಿತ್ರ ಪೆಪ್ಪರ್ ಪೌಡರ್ ಆ ಅಂತ ಯೋಚನೆ ಮಾಡ್ಬೇಡಿ ಒಂದ್ ಸಲ ಟ್ರೈ ಮಾಡಿ ನೀವೇ ಡೆಫಿನೇಟ್ಲಿ ಇಷ್ಟ ಪಡ್ತೀರ.
3ನೇಯ ವಿಧಾನ
ಪಚ್ಚು ಬಾಳೆ ಹಣ್ಣು -2
ಗಟ್ಟಿ ಹಾಲು -2 ಕಪ್
ಸಕ್ಕರೆ – 2 ಟೇಬಲ್ ಸ್ಪೂನ್
ವೆನ್ನಿಲ್ಲಾ ಎಸೆನ್ಸ್
ಮೊದಲೆರೆಡು ವಿದಾನಗಳಂತೆಯೇ ಬಾಳೆಹಣು, ಸಕ್ಕರೆ, ಹಾಲು ಹಾಕಿ ಒಂದು ರೌಂಡ್ ಗ್ರೈಂಡ್ ಮಾಡಿ. ಬಳಿಕ ಇದಕ್ಕೆ 2 ಕಪ್ ಗಳಷ್ಟು ನೀರನ್ನ ಹಾಕಿ 2 ಡ್ರಾಪ್ ವೆನಿಲ್ಲಾ ಎಸೆನ್ಸ್ ಹಾಕಿ. ಈ ಹೌಂತದಲ್ಲಿ ಐಸ್ ಕ್ಯೂಬ್ಸ್ ನ ಬೇಕಿದ್ರೆ ಇದರ ಜೊತೆಗೆ ಹಾಕಿ ಗ್ರೈಂಡ್ ಮಾಡಬಹುದು. ಇದು ಆಪ್ಶನಲ್. ಗ್ರೈಂಡ್ ಮಾಡಿದ ನಂತರ ಬಾಳೆಹಣ್ಣಿನ ಜ್ಯೂಸ್ ಅನ್ನ ಗ್ಲಾಸ್ ಗೆ ಹಾಕಿ ಸವಿಯಿರಿ ಎಂಜಾಯ್ ಮಾಡಿ.
ತಪ್ಪದೇ ಈ 3 ವಿದಾನದಲ್ಲಿ ಬಾಳೆಹಣ್ಣಿನ ಜ್ಯೂಸ್ ಮನೆಯಲ್ಲೇ ಟ್ರೈ ಮಾಡಿ. ನಿಮಗೆ 100 % ಇಷ್ಟ ಆಗುತ್ತೆ.
5 ವಿವಿಧ ಬಗೆಯ ರೊಟ್ಟಿಗಳ ರೆಸಿಪಿಗಳು ನಿಮಗಾಗಿ..!
2. ಬಿರುಬಿಸಿಲಿಗೆ ಚಾಕಲೇಟ್ ಮಿಲ್ಕ್ ಶೇಕ್
ಬೇಕಾಗುವ ಸಾಮಗ್ರಿಗಳು
ತಣ್ಣಗಿನ ಹಾಲು – 1/4 ಲೀಟರ್
ಕೋಕಾ ಪೌಡರ್ – 2 ಚಮಚ
ಸಕ್ಕರೆ – 2-3 ಚಮಚ
ವೆನಿಲ್ಲಾ ಐಸ್ ಕ್ರೀಂ – 1 ಸ್ಕೂಪ್
ಚಾಕಲೇಟ್ ಸಿರಪ್ – 2 ಚಮಚ
ವಿಪ್ಡ್ ಕ್ರೀಮ್/ಐಸ್ ಕ್ರೀಮ್/ಚಾಕಲೇಟ್ ತುರಿ – 1 ಚಮಚ(ಬೇಕಿದ್ದರೆ)
ಐಸ್ ಕ್ಯೂಬ್ – 8

ಮಾಡುವ ವಿಧಾನ
ಮೊದಲು ಹಾಲು, ಕೋಕಾ ಪೌಡರ್, ಸಕ್ಕರೆ, ವೆನಿಲ್ಲಾ ಐಸ್ ಕ್ರೀಂ, 6 ಐಸ್ ಕ್ಯೂಬ್ಸ್ ಗಳನ್ನು ಬ್ಲೆಂಡರ್ ಗೆ ಹಾಕಿ ಬ್ಲೆಂಡ್ ಮಾಡಿ. ನಂತರ ಚಾಕಲೇಟ್ ಸಿರಪ್ ನಿಂದ ಗ್ಲಾಸನ್ನು ಅಲಂಕರಿಸಿ ಅದಕ್ಕೆ ಬ್ಲೆಂಡ್ ಮಾಡಿದ ಚಾಕಲೇಟ್ ಮಿಲ್ಕ್ ಶೇಕ್ ಅನ್ನು ಸೇರಿಸಿ. ನಂತರ ವಿಪ್ಡ್ ಕ್ರೀಮ್ ಮತ್ತು ಐಸ್ ಕ್ಯೂಬ್ ಅನ್ನು ಮೇಲಿಂದ ಹಾಕಿ ಸರ್ವ್ ಮಾಡಿ.
ಕಲ್ಲಂಗಡಿ ಜ್ಯೂಸ್

ತಯಾರಿಸುವ ವಿಧಾನ
ಮೊದಲಿಗೆ, ಕಲ್ಲಂಗಡಿ ಹಣ್ಣನ್ನು ತೊಳೆದು ತುಂಡುಗಳಾಗಿ ಕತ್ತರಿಸಿ.
ಕತ್ತರಿಸಿದ ನಂತರ, ಕಲ್ಲಂಗಡಿ ಹಣ್ಣಿನ ಹಸಿರು ಸಿಪ್ಪೆಯನ್ನು ತೆಗೆದು ಬೇರ್ಪಡಿಸಿ.
ಈಗ ಉಳಿದ ಕೆಂಪು ಬಣ್ಣವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಎಲ್ಲಾ ಕಲ್ಲಂಗಡಿ ಹಣ್ಣುಗಳ ಸಣ್ಣ ತುಂಡುಗಳನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ಈಗ ಅದನ್ನು ಸೋಸಿ. ನಂತರ ರಸದ ರುಚಿಯನ್ನು ಹೆಚ್ಚಿಸಲು, ಅದಕ್ಕೆ ಒಂದು ನಿಂಬೆಯ ರಸವನ್ನು ಹಿಸುಕಿ. ಬಳಿಕ ಐಸ್ ಕ್ಯೂಬ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಿದ್ದರೆ ಪುದೀನ ಎಲೆಗಳನ್ನು ಸೇರಿಸ ಬಹುದು. ಸಿಹಿ ಬೇಕಿದ್ದರೆ ಸಕ್ಕರೆ ಸೇರಿಸಿ.
ಈಗ ಕಲ್ಲಂಗಡಿ ಹಣ್ಣಿನ ಕೋಲ್ಡ್ ಜ್ಯೂಸ್ ಸಿದ್ಧವಾಗಿದೆ.








