ADVERTISEMENT
Saturday, August 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

5 ವಿವಿಧ ಬಗೆಯ ರೊಟ್ಟಿಗಳ ರೆಸಿಪಿಗಳು ನಿಮಗಾಗಿ..!

Namratha Rao by Namratha Rao
October 6, 2021
in Cooking, Newsbeat, ಅಡುಗೆ
Saakshatv cooking recipes Moringa rotti
Share on FacebookShare on TwitterShare on WhatsappShare on Telegram

5 ವಿವಿಧ ಬಗೆಯ ರೊಟ್ಟಿಗಳ ರೆಸಿಪಿಗಳು ನಿಮಗಾಗಿ..!

1. ಬೀಟ್ ರೂಟ್ ಅಕ್ಕಿ ರೊಟ್ಟಿ

ಬೇಕಾಗುವ ‌ಸಾಮಾಗ್ರಿಗಳು

Related posts

shivarajkumar-bail-movie-teaser-released-pavan-wadeyar-kvn-productions

ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್: ಪವನ್ ಒಡೆಯರ್-ಕೆವಿಎನ್ ಕಾಂಬಿನೇಷನ್‌ನಲ್ಲಿ ಸದ್ದು ಮಾಡುತ್ತಿದೆ ಖಾಕಿ ಖದರ್!

August 28, 2026
kiccha-sudeep-wishes-rocking-star-yash-for-toxic-movie

‘ರಾಕಿ ಭಾಯ್’ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರಕ್ಕೆ ಬಲ ತುಂಬಿದ ‘ಅಭಿನಯ ಚಕ್ರವರ್ತಿ’

August 28, 2026

ಅಕ್ಕಿ ಹಿಟ್ಟು – 1 ಕಪ್
ಬೀಟ್ ರೂಟ್ ತುರಿ – 1 ಕಪ್
ತೆಂಗಿನಕಾಯಿ ತುರಿ – 1/2 ಕಪ್
ಜೀರಿಗೆ – 1 ಚಮಚ
ಹಸಿಮೆಣಸು ಪೇಸ್ಟ್ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ನೀರು – ಅಗತ್ಯವಿರುವಷ್ಟು
Saakshatv cooking recipe prepare beetroot rice rotti
ಮಾಡುವ ವಿಧಾನ

ಮೊದಲಿಗೆ ಒಂದು ‌ಪಾತ್ರೆಯಲ್ಲಿ ಅಕ್ಕಿಹಿಟ್ಟು, ಬೀಟ್ ರೂಟ್ ತುರಿ, ಜೀರಿಗೆ, ಹಸಿಮೆಣಸು ಪೇಸ್ಟ್, ತೆಂಗಿನಕಾಯಿ ತುರಿ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ‌ಅಗತ್ಯವಿರುವಷ್ಟು ನೀರನ್ನು ನಿಧಾನವಾಗಿ ಸೇರಿಸುತ್ತಾ ಹಿಟ್ಟನ್ನು ಕಲಸಿಕೊಳ್ಳಿ. ಹಿಟ್ಟು ಮೃದುವಾಗುವವರೆಗೆ ಚೆನ್ನಾಗಿ ನಾದಿ. ನಂತರ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ ರೊಟ್ಟಿ ತಟ್ಟಿ.
ಈಗ ಪ್ಯಾನ್ ಅನ್ನು ಬಿಸಿ ಮಾಡಿ. ರೊಟ್ಟಿಗೆ ತುಪ್ಪ ಸವರಿ ಮುಚ್ಚಳ ಮುಚ್ಚಿ ಬೇಯಿಸಿ. ರೊಟ್ಟಿ ಹೊಂಬಣ್ಣಕ್ಕೆ ತಿರುಗುವವರೆಗೆ ಎರಡೂ ಕಡೆ ಬೇಯಿಸಿ. ಈಗ ರುಚಿಯಾದ ಬೀಟ್ ರೂಟ್ ರೊಟ್ಟಿ ಸವಿಯಲು ಸಿದ್ಧವಾಗಿದೆ.

ಮಕ್ಕಳಿಗೆ ಬಲು ಇಷ್ಟವಾಗುವ 5 ಸ್ನಾಕ್ಸ್/ ತಿಂಡಿಗಳ ರೆಸಿಪಿಗಳು ನಿಮಗಾಗಿ..!

2. ಅಕ್ಕಿ ರೊಟ್ಟಿ

ಬೇಕಾಗುವ ಸಾಮಾಗ್ರಿಗಳು

ಅಕ್ಕಿ ಹಿಟ್ಟು – 1 ಕಪ್
ನೀರು – 2 ಕಪ್
ತುಪ್ಪ – 1 ಚಮಚ
ಜೀರಿಗೆ ಪುಡಿ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe akki rotti
ಮಾಡುವ ‌ವಿಧಾನ

ಮೊದಲಿಗೆ ನೀರನ್ನು ಕುದಿಸಿ. ಈ ಕುದಿಯುವ ನೀರಿಗೆ
ತುಪ್ಪ, ಉಪ್ಪು ಮತ್ತು ಜೀರಿಗೆ ಪುಡಿಯನ್ನು ಸೇರಿಸಿ, ಚೆನ್ನಾಗಿ ಕದಡಿ.‌ ಈಗ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಅಕ್ಕಿ ಹಿಟ್ಟನ್ನು ಕುದಿಯುವ ನೀರಿಗೆ ಸೇರಿಸುತ್ತಾ, ಕಲಸುತ್ತಾ ಇರಿ. ನಂತರ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಎಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿ. ನಂತರ ಕೆಳಗಿಳಿಸಿ ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಈಗ ಕೈಯನ್ನು ಸ್ವಲ್ಪ ನೀರಲ್ಲಿ ‌ಒದ್ದೆ ಮಾಡಿ, ಹಿಟ್ಟನ್ನು ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ನಾದಿ. ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಇಡಿ. ಇದಕ್ಕೆ ಸ್ವಲ್ಪ ‌ಅಕ್ಕಿ ಹಿಟ್ಟು ಉದುರಿಸಿ‌ ರೊಟ್ಟಿಯನ್ನು ಲಟ್ಟಿಸಿಕೊಳ್ಳಿ.
ಈಗ ತವಾವನ್ನು ಬಿಸಿ ‌ಮಾಡಿ ಎಣ್ಣೆ ಸವರಿ ರೊಟ್ಟಿಯ ಎರಡೂ ಬದಿಗಳನ್ನು ಹೊಂಬಣ್ಣಕ್ಕೆ ತಿರುಗುವವರೆಗೆ ‌ಕಾಯಿಸಿ ತೆಗೆಯಿರಿ. ಬಿಸಿ ಬಿಸಿಯಾದ ಅಕ್ಕಿ ‌ರೊಟ್ಟಿ ಸವಿಯಲು ಸಿದ್ಧವಾಗಿದೆ.

5 ಆರೋಗ್ಯಕರ ಹಾಗೂ ರುಚಿಕರ ಚೆಟ್ನಿಗಳ ರೆಸಿಪಿಗಳು ನಿಮಗಾಗಿ..!

3. ಸೌತೇಕಾಯಿ ರೊಟ್ಟಿ

ಬೇಕಾಗುವ ಸಾಮಗ್ರಿಗಳು

ಅಕ್ಕಿ ಹಿಟ್ಟು – 1 ಕಪ್
ಸೌತೇಕಾಯಿ – 1
ಅರಶಿನ ಹುಡಿ – 1 ಚಮಚ
ಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ.
ಜೀರಿಗೆ ಪುಡಿ – 1 ಚಮಚ.
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ
Saakshatv cookingrecipe cucumber rotti

ಮೊದಲಿಗೆ ಸೌತೇಕಾಯಿಯನ್ನು ತುರಿದಿಟ್ಟುಕೊಳ್ಳಿ. ನಂತರ ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಜೀರಿಗೆ, ಸಣ್ಣದಾಗಿ ಹೆಚ್ಚಿದ ಕೊತ್ತಂಬರಿಸೊಪ್ಪು, ಅರಶಿನ, ಉಪ್ಪು, ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ಅಗತ್ಯವಿರುವಷ್ಟು ನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ತವಾ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ರೊಟ್ಟಿ ತಟ್ಟಿ. ಎರಡು ಬದಿಯನ್ನು ಚೆನ್ನಾಗಿ ಬೇಯಿಸಿ ತೆಗೆದರೆ ಬಿಸಿ ಬಿಸಿ ಯಾದ ಸೌತೇಕಾಯಿ ರೊಟ್ಟಿ ಸವಿಯಲು ಸಿದ್ಧ.
ಇದಕ್ಕೆ ಚಟ್ನಿ, ಮೊಸರು ಅಥವಾ ಬೆಣ್ಣೆ ಸಕ್ಕತ್ ಕಾಂಬಿನೇಷನ್.

4. ಪುದೀನಾ ರೊಟ್ಟಿ

ಬೇಕಾಗುವ ಪದಾರ್ಥಗಳು

ಅಕ್ಕಿ ಹಿಟ್ಟು–3/4 ಕಪ್,
ಎಣ್ಣೆ –3 ಚಮಚ,
ರುಚಿಗೆ ತಕ್ಕಷ್ಟು ಉಪ್ಪು,
ಕತ್ತರಿಸಿದ ಪುದೀನಾ – 1ಕಪ್
ಹಸಿ ಮೆಣಸಿನಕಾಯಿ – 5-8
ತೆಂಗಿನಕಾಯಿ ತುರಿ – 1/2 ಕಪ್
ಹುರಿಗಡಲೆ–2 ಚಮಚ (ಬೇಕಿದ್ದರೆ)
ಈರುಳ್ಳಿ – 1/2

Saakshatv cooking recipe how to prepare pudina rotti

ತಯಾರಿಸುವ ವಿಧಾನ

ಮೊದಲಿಗೆ ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಹಸಿ ಮೆಣಸಿನಕಾಯಿ, ಪುದೀನಾ, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಇದನ್ನು ಪಾತ್ರೆಗೆ ವರ್ಗಾಯಿಸಿ. ರುಬ್ಬಿದ ಮಿಶ್ರಣಕ್ಕೆ ಎಣ್ಣೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ. ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ಹತ್ತು ನಿಮಿಷಗಳ ಕಾಲ ಹಾಗೆ ಬಿಡಿ. ಹುರಿಗಡಲೆ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ‌ಬೆರೆಸಿ.
ತವೆಗೆ ಎಣ್ಣೆ ‌ಸವರಿ ಬಿಸಿ ‌ಮಾಡಿ. ತೆಳುವಾಗಿ ರೊಟ್ಟಿ ತಟ್ಟಿ ಎರಡು ಬದಿಯೂ ಹೊಂಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ ತೆಗೆಯಿರಿ. ರುಚಿಯಾದ ಆರೋಗ್ಯಕರ ಪುದೀನಾ ರೊಟ್ಟಿಯನ್ನು ಬಿಸಿ ಬಿಸಿಯಾಗಿ ಬೆಣ್ಣೆ ಜೊತೆ ಸವಿಯಿರಿ.

5. ಕ್ಯಾರಟ್ – ಈರುಳ್ಳಿ ಮಸಾಲೆ ರೊಟ್ಟಿ

ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು – 2ಕಪ್
ಜೀರಿಗೆ – 1ಚಮಚ
ಇಂಗು -1/4 ಚಮಚ
ಅರಿಶಿನ – 1/4 ಚಮಚ
ಕರಿಮೆಣಸಿನ ಪುಡಿ – 1/4 ಚಮಚ
ಕಡ್ಲೆಬೇಳೆ – 2 ಚಮಚ
ತುರಿದ ಕ್ಯಾರಟ್ – 1/4 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1/4 ಕಪ್
ಕೊತ್ತಂಬರಿಸೊಪ್ಪು – ಸ್ವಲ್ಪ
ಹಸಿಮೆಣಸಿನಕಾಯಿ – 2
ಕರಿಬೇವಿನ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು

Saakshatv cooking recipe how to make carrots akki rotti

ಮಾಡುವ ವಿಧಾನ

ಮೊದಲಿಗೆ ಕಡ್ಲೆಬೇಳೆಯನ್ನು ‌30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಜೀರಿಗೆ, ಇಂಗು, ಅರಿಶಿನ, ಕರಿಮೆಣಸಿನ ಪುಡಿ, ತುರಿದ ಕ್ಯಾರಟ್, ಈರುಳ್ಳಿ, ಕೊತ್ತಂಬರಿ ಸೊಪ್ಪು, ನೆನೆಸಿಟ್ಟ ಕಡ್ಲೆಬೇಳೆ, ಹಸಿಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಕರಿಬೇವು, ಉಪ್ಪು, 1 ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಬೆರೆಸಿ. ‌‌
ನಂತರ ಸ್ವಲ್ಪ ‌ಸ್ವಲ್ಪವೇ ಬೆಚ್ಚಗಿರುವ ನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. 15 ರಿಂದ 20ನಿಮಿಷಗಳ ಕಾಲ ಹಾಗೆಯೇ ಮುಚ್ಚಿಡಿ.
ಬಳಿಕ ತವಾ ವನ್ನು ಬಿಸಿ ಮಾಡಿ. ತೆಳುವಾಗಿ ರೊಟ್ಟಿ ತಟ್ಟಿ, ಎರಡೂ ಬದಿಗಳನ್ನು ಹೊಂಬಣ್ಣಕ್ಕೆ ಬರುವವರೆಗೆ ಕಾಯಿಸಿ ತೆಗೆಯಿರಿ. ‌ರುಚಿಯಾದ ಕ್ಯಾರಟ್ – ಈರುಳ್ಳಿ ಮಸಾಲೆ ರೊಟ್ಟಿ ಸವಿಯಲು ಸಿದ್ಧ.

 

Tags: #saakshatvcookingfood recipies
ShareTweetSendShare
Join us on:

Related Posts

shivarajkumar-bail-movie-teaser-released-pavan-wadeyar-kvn-productions

ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್: ಪವನ್ ಒಡೆಯರ್-ಕೆವಿಎನ್ ಕಾಂಬಿನೇಷನ್‌ನಲ್ಲಿ ಸದ್ದು ಮಾಡುತ್ತಿದೆ ಖಾಕಿ ಖದರ್!

by admin
August 28, 2026
0

ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್: ಪವನ್ ಒಡೆಯರ್-ಕೆವಿಎನ್ ಕಾಂಬಿನೇಷನ್‌ನಲ್ಲಿ ಸದ್ದು ಮಾಡುತ್ತಿದೆ ಖಾಕಿ ಖದರ್! ಬೆಂಗಳೂರು: ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್...

kiccha-sudeep-wishes-rocking-star-yash-for-toxic-movie

‘ರಾಕಿ ಭಾಯ್’ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರಕ್ಕೆ ಬಲ ತುಂಬಿದ ‘ಅಭಿನಯ ಚಕ್ರವರ್ತಿ’

by admin
August 28, 2026
0

ರಾಯನ ಹೊಸ ಅವತಾರಕ್ಕೆ ಪ್ರೀತಿಯಿಂದ ವಿಶ್ ಮಾಡಿದ ಕಿಚ್ಚ ಸುದೀಪ್ ಹಿಂದಿನ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ರೆಗ್ಯುಲರ್, ಸಿದ್ಧಸೂತ್ರದ ಸಿನಿಮಾ ಮಾಡುವ ಸುಲಭ ಹಾದಿ ಹಿಡಿಯದೆ, ಭಿನ್ನವಾಗಿ...

rishab-shetty-featured-in-forbes-india-top-100-celebrities-kantara

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡಿಗ ರಿಷಬ್ ಶೆಟ್ಟಿ: ‘ಕಾಂತಾರ’ ತಾರೆಗೆ ಜಾಗತಿಕ ಮನ್ನಣೆ

by admin
August 28, 2026
0

ಬೆಂಗಳೂರು: ಪ್ರತಿಷ್ಠಿತ 'ಫೋರ್ಬ್ಸ್ ಇಂಡಿಯಾ' ಬಿಡುಗಡೆ ಮಾಡಿರುವ ದೇಶದ ಪ್ರಮುಖ 100 ಗಣ್ಯರ (ಸೆಲೆಬ್ರಿಟಿಗಳ) ಪಟ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆಯುವ...

darshan-puttannaiah-meets-dk-shivakumar-karnataka-2-digital-platform

ಕೋಡಳ್ಳಿ ಹೊಸೂರಿನಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗುದ್ದಲಿ ಪೂಜೆ

by admin
August 28, 2026
0

ಹಲವು ಗ್ರಾಮಗಳಿಗೆ ನಿರಂತರ, ಗುಣಮಟ್ಟದ ವಿದ್ಯುತ್ ಸಂಪರ್ಕಕ್ಕೆ ಮುನ್ನುಡಿ ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋಡಳ್ಳಿ ಹೊಸೂರಿನಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಉಪಕೇಂದ್ರ ಸ್ಥಾಪನೆ ಕಾಮಗಾರಿಗೆ...

darshan-puttannaiah-meets-dk-shivakumar-karnataka-2-digital-platform

ದೆಹಲಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಹತ್ವದ ಸಭೆ

by admin
August 28, 2026
0

ದೆಹಲಿ/ಬೆಂಗಳೂರು: ಜನಸಾಮಾನ್ಯರ ಕುಂದುಕೊರತೆಗಳಿಗೆ ತಕ್ಷಣವೇ ಸ್ಪಂದಿಸಲು ಹಾಗೂ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿರಿಸುವಂತೆ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಹತ್ವದ ಹೆಜ್ಜೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram