5 ಆರೋಗ್ಯಕರ ಹಾಗೂ ರುಚಿಕರ ಚೆಟ್ನಿಗಳ ರೆಸಿಪಿಗಳು ನಿಮಗಾಗಿ..!

1 min read

5 ಆರೋಗ್ಯಕರ ಹಾಗೂ ರುಚಿಕರ ಚೆಟ್ನಿಗಳ ರೆಸಿಪಿಗಳು ನಿಮಗಾಗಿ..!

1. ಹೀರೇಕಾಯಿಯ ಸಿಪ್ಪೆ ಚಟ್ನಿ

ಬೇಕಾಗುವ ಸಾಮಗ್ರಿಗಳು

ಹೀರೆಕಾಯಿ ಸಿಪ್ಪೆ – 1 ಕಪ್
ಈರುಳ್ಳಿ – 1
ಒಣಮೆಣಸು – 4-5
ಕಡ್ಲೆಬೇಳೆ – 1 ಚಮಚ
ಉದ್ದಿನಬೇಳೆ – 1 ಚಮಚ
ಎಳ್ಳು – 2 ಚಮಚ
ಕಡ್ಲೆಬೀಜ – 2 ಚಮಚ
ಹುಣಸೆ ಹಣ್ಣು – ಸ್ವಲ್ಪ
ಬೆಲ್ಲ – 1 ಸಣ್ಣ ತುಂಡು
ಜೀರಿಗೆ – 1/2 ಚಮಚ
ಬೆಳ್ಳುಳ್ಳಿ – 2 ಎಸಳು
ಕರಿಬೇವು – ಸ್ವಲ್ಪ
ಕೊತ್ತಂಬರಿಸೊಪ್ಪು – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಸಾಸಿವೆ – 1/2 ಚಮಚ
ಇಂಗು – ಚಿಟಿಕೆ
hirekayi peel chutney
ಮಾಡುವ ವಿಧಾನ

ಹೀರೆಕಾಯಿ ಸಿಪ್ಪೆಯನ್ನು ಚೆನ್ನಾಗಿ ತೊಳೆಯಿರಿ. ಬಾಣಲೆಗೆ 1/2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಹೀರೇಕಾಯಿ ಸಿಪ್ಪೆ ಯನ್ನು 3-4 ನಿಮಿಷ ಹುರಿಯಿರಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಒಣ ಮೆಣಸು ಸೇರಿಸಿ ಹುರಿಯಿರಿ.ನಂತರ ಅದಕ್ಕೆ ಉದ್ದಿನಬೇಳೆ, ಕಡ್ಲೆಬೇಳೆ, ಎಳ್ಳು, ಕಡಲೆ ಬೀಜ ಸೇರಿಸಿ ಹುರಿಯಿರಿ. ಈಗ ಇದಕ್ಕೆ ಹುಣಸೆ ಹಣ್ಣು ಬೆಲ್ಲ ಜೀರಿಗೆ ಬೆಳ್ಳುಳ್ಳಿ, ಉಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಸೇರಿಸಿಮಿಕ್ಸಿ ಜಾರಿಗೆ ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ಇದಕ್ಕೆ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಕೊಟ್ಟರೆ ಹೀರೇಕಾಯಿಯ ಸಿಪ್ಪೆ ಚಟ್ನಿ ರೆಡಿ.

 

2. ಕುಂಬಳಕಾಯಿ ಸಿಪ್ಪೆಯ ಚಟ್ನಿ

ಬೇಕಾಗುವ ಸಾಮಗ್ರಿಗಳು

ಕತ್ತರಿಸಿದ ಕುಂಬಳ ಕಾಯಿ ಸಿಪ್ಪೆ – 1ಕಪ್
ಹಸಿಮೆಣಸು -5 ರಿಂದ 6
ಬೆಳ್ಳುಳ್ಳಿ – 4 ರಿಂದ 5 ಎಸಳು
ಹೆಚ್ಚಿದ ಶುಂಠಿ -1ಚಮಚ
ಉದ್ದಿನ ಬೇಳೆ -1ಚಮಚ
ಎಳ್ಳು -1ಚಮಚ
ಹುಣಸೆಹಣ್ಣು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – 1 ಚಮಚ

ಮಾಡುವ ವಿಧಾನ

 

Saakshatv cooking recipe kumbalakai sippe chutney

ಮೊದಲಿಗೆ ಕತ್ತರಿಸಿದ ಕುಂಬಳಕಾಯಿ ಸಿಪ್ಪೆಗಳನ್ನು 5 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ.
ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಉದ್ದಿನ ಬೇಳೆ, ಕುಂಬಳ ಕಾಯಿ ಸಿಪ್ಪೆ, ಕತ್ತರಿಸಿದ ಹಸಿ ಮೆಣಸು ಬೆಳ್ಳುಳ್ಳಿ, ಶುಂಠಿ,ಎಳ್ಳು ಹಾಕಿ ಬಾಡಿಸಿಕೊಳ್ಳಿ. ಅದು ತಣ್ಣಗಾದ ಬಳಿಕ ಬೆಲ್ಲ, ಉಪ್ಪು, ಹುಣಿಸೆಹಣ್ಣು ಸೇರಿಸಿ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿ. ಈಗ ರುಚಿಯಾದ ಕುಂಬಳಕಾಯಿ ಸಿಪ್ಪೆಯ ಚಟ್ನಿ ರೆಡಿಯಾಗಿದೆ.

3. ಕೆಸುವಿನ ಚಟ್ನಿ

ಬೇಕಾಗುವ ‌ಸಾಮಾಗ್ರಿಗಳು

ಕೆಸುವಿನ ಎಲೆ – 1
ಉದ್ದಿನಬೇಳೆ – 1.5 ಚಮಚ
ದನಿಯಾ – 1/2 ಚಮಚ
ಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ತೆಂಗಿನಕಾಯಿತುರಿ – 1 ಕಪ್
ಕತ್ತರಿಸಿದ ಮಾವಿನಕಾಯಿ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಒಗ್ಗರಣೆಗೆ
ತೆಂಗಿನ ಎಣ್ಣೆ – 2 ಚಮಚ
ಉದ್ದಿನಬೇಳೆ – 1 ಚಮಚ
ಸಾಸಿವೆ – 1 ಚಮಚ
ಕಡಲೆಬೇಳೆ – 1/2 ಚಮಚ
ಇಂಗು – ಚಿಟಕಿ
ಕರಿಬೇವು – ಸ್ವಲ್ಪ
ಮುರಿದ ಕೆಂಪು ಮೆಣಸು – 2
kesu chutney
ಮಾಡುವ ವಿಧಾನ

ಕೆಸುವಿನ ಎಲೆಯನ್ನು ತೊಳೆದು ಚಿಕ್ಕದಾಗಿ ಕತ್ತರಿಸಿ. ನಂತರ ನೀರು ಸೇರಿಸಿ ಬೇಯಿಸಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ‌ಮಾಡಿ.‌ ನಂತರ
ಉದ್ದಿನಬೇಳೆ, ದನಿಯಾ, ಮೆಣಸಿನಕಾಯಿ, ಕರಿಬೇವು ಹಾಕಿ ಹುರಿದುಕೊಳ್ಳಿ.
ತಣ್ಣಗಾದ ನಂತರ ಅದಕ್ಕೆ ಬೇಯಿಸಿ ಇಟ್ಟುಕೊಂಡ ಕೆಸುವಿನ ಎಲೆ ಸೇರಿಸಿ. ನಂತರ ತೆಂಗಿನಕಾಯಿತುರಿ, ಮಾವಿನಕಾಯಿ, ಉಪ್ಪು ‌ಹಾಕಿ ಚೆನ್ನಾಗಿ ರುಬ್ಬಿ.
ನಂತರ ಬಾಣಲೆಯಲ್ಲಿ ತೆಂಗಿನ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ ಸೇರಿಸಿ. ‌ಸಾಸಿವೆ ಸಿಡಿದ ಬಳಿಕ ಉದ್ದಿನಬೇಳೆ, ಕಡಲೆಬೇಳೆ, ಇಂಗು, ಕರಿಬೇವು, ಮುರಿದ ಮೆಣಸಿನಕಾಯಿ ಸೇರಿಸಿ ಒಗ್ಗರಣೆ ಕೊಡಿ.
ಬಳಿಕ ರುಬ್ಬಿ ಇಟ್ಟುಕೊಂಡ ಚಟ್ನಿಗೆ ಒಗ್ಗರಣೆಯನ್ನು ಸೇರಿಸಿ. ರುಚಿಯಾದ ಕೆಸುವಿನ ಚಟ್ನಿ ‌ಸವಿಯಲು‌ ಸಿದ್ಧ.

 

4. ಸೋರೆಕಾಯಿ ಚಟ್ನಿ

ಬೇಕಾಗುವ ಸಾಮಾಗ್ರಿಗಳು

ಕಡಲೆಬೇಳೆ – ಸ್ವಲ್ಪ
ಉದ್ದಿನ ಬೇಳೆ – ಸ್ವಲ್ಪ
ಕೊಬ್ಬರಿ ತುರಿ – 1/2 ಕಪ್
ಒಣಮೆಣಸಿನಕಾಯಿ – 4
ಇಂಗು – ಚಿಟಿಕೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸೋರೆಕಾಯಿ ತುಂಡುಗಳು – 1 ಬಟ್ಟಲು
ಹುಣಸೆ ಹಣ್ಣು, ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮೊದಲಿಗೆ ಸೋರೆಕಾಯಿ ತುಂಡುಗಳನ್ನು ಬೇಯಿಸಿ ಇಟ್ಟು ಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಡಲೆಬೇಳೆ, ಉದ್ದಿನ ಬೇಳೆ, ಕೊಬ್ಬರಿ ತುರಿ, ಒಣಮೆಣಸಿನಕಾಯಿ, ಇಂಗು ಗಳನ್ನು ಹುರಿದು ತೆಗೆಯಿರಿ.
Saakshatv cooking recipe sorekayi chutney

ತಣ್ಣಗಾದ ನಂತರ ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣು, ಉಪ್ಪು ಸೇರಿಸಿ ರುಬ್ಬಿ . ಸ್ವಲ್ಪ ‌ನುಣ್ಣಗಾದ ಬಳಿಕ ಬೇಯಿಸಿ ಇಟ್ಟುಕೊಂಡ ಸೋರೆಕಾಯಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿ.
ಇದನ್ನು ‌ಅನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಇರುವುದರಿಂದ ಕಣ್ಣಿಗೆ ಒಳ್ಳೆಯದು.

 

5. ಮಾವಿನ ಕಾಯಿ ಚಟ್ನಿ
ಬೇಕಾಗುವ ಪದಾರ್ಥಗಳು

ಸಣ್ಣ ಮಾವಿನ ಕಾಯಿ 1
ತುರಿದ ತೆಂಗಿನಕಾಯಿ 1 ಕಪ್
ಶುಂಠಿ 1 ಇಂಚು
ಬೆಳ್ಳುಳ್ಳಿ 3-4 ಎಸಳು
ಈರುಳ್ಳಿ 1/2
ಹಸಿರು ಮೆಣಸಿನಕಾಯಿ 2-3
ರುಚಿಗೆ ತಕ್ಕಷ್ಟು ಉಪ್ಪು

ಒಗ್ಗರಣೆ
ಒಣ ಕೆಂಪು ಮೆಣಸು – 1
ಸಾಸಿವೆ – 1/4 ಚಮಚ
ಎಣ್ಣೆ – 1 ಚಮಚ
Saakshatv cooking recipes mango chutney
Saakshatv cooking recipes mango chutney

ಮಾಡುವ ವಿಧಾನ:
ಮಾವಿನ ಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ. ಅದಕ್ಕೆ ತುರಿದ ತೆಂಗಿನಕಾಯಿ ಶುಂಠಿ ಬೆಳ್ಳುಳ್ಳಿ, ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಉಪ್ಪು ಸೇರಿಸಿ. (ಮಾವಿನ ಹುಳಿಗೆ ಅನುಗುಣವಾಗಿ ಮೆಣಸಿನಕಾಯಿಗಳನ್ನು ಬಳಸಿ).
ಅಗತ್ಯವಿರುವಷ್ಟು ನೀರು ಸೇರಿಸಿ, ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ. ಹಸಿಮೆಣಸಿನಕಾಯಿ ಚಟ್ನಿ ಸಿದ್ಧವಾಗಿದೆ. ಈಗ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ ಕೆಂಪು ‌ಮೆಣಸಿನ ಒಗ್ಗರಣೆ ಕೊಡಿ.
Saakshatv cooking recipes mango chutney

ಈ ಚಟ್ನಿಯನ್ನು ಸಾಮಾನ್ಯವಾಗಿ ಮಾವಿನ ಸಮಯದಲ್ಲಿ ಮಂಗಳೂರಿನ ಮನೆಗಳಲ್ಲಿ ತಯಾರಿಸಲಾಗುತ್ತದೆ ಮತ್ತು ಇದು ಗಂಜಿಯೊಂದಿಗೆ ಸೇವಿಸಲು ಚೆನ್ನಾಗಿರುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd