ಪ್ರಿಯಾಂಕಾ ಗಾಂಧಿ ಕಸ ಗುಡಿಸುವುದಕ್ಕೆ ಲಾಯಕ್ಕು – ಯೋಗಿ ಆದಿತ್ಯನಾಥ್
ಇತ್ತೀಚೆಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೀತಾಪಪುರದ ಅತಿಥಿ ಗೃಹದಲ್ಲಿ ಗಸ ಗುಡಿಸಿದ್ದರು. ಈ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಷ್ಟೇ ಅಲ್ದೇ ಕೆಲವರು ಟೀಕೆಗಳನ್ನೂ ಮಾಡಿದ್ರು.
ಇದೀಗ ಈ ಬಗ್ಗೆ ಮಾತನಾಡಿರುವ ಯೋಗಿ ಆದಿತ್ಯನಾಥ್ ಅವರು ಜನರು ಅವರನ್ನೂ ಅದಕ್ಕೆ ಲಾಯಕ್ಕಾಗಿಸೋದಕ್ಕೆ ( ಜನ್‍ತಾ ಉನ್ ಕೋ ಉಸೀ ಲಾಯಕ್ ಬನಾನ ಚಾಹ್ ತೀ ಹೈ) ಬಯಸುತ್ತಾರೆಂದು ಹೇಳಿದ್ದಾರೆ.
https://twitter.com/i/status/1444914387689431041
ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ 8 ಜನರು ಸಾವನ್ನಪ್ಪಿದ್ದರು. ಮೃತರ ಕುಟುಂಬಸ್ಥರ ಭೇಟಿಗೆ ಹೋಗುತ್ತಿದ್ದ ವೇಳೆ ಪ್ರಿಯಾಂಕಾರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೇ FIR ಇಲ್ಲದೇ ಗೃಹಬಂಧನದಲ್ಲಿ ಇರಿಸಲಾಗಿತ್ತು. ಈ ವೇಳೆ ಪ್ರಿಯಾಂಕಾ ಅವರು ಸೀತಾಪುರ ಅತಿಥಿಗೃಹದಲ್ಲಿ ನೆಲವನ್ನು ಗುಡಿಸಿದ್ದರು.
ಪ್ರಿಯಾಂಕಾ ಗಾಂಧಿಯ ಈ ನಡೆಯನ್ನು ಹೊಗಳುತ್ತಾ, ಕಾಂಗ್ರೆಸ್ 42 ಸೆಕೆಂಡುಗಳ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ, ಪೋಸ್ಟ್ ಮಾಡಿದ್ದು, ಬ್ರೀಟಿಷರು ಆಡಳಿತದ ವಿರುದ್ಧ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಅಹಿಂಸಾ ಸತ್ಯಾಗ್ರಹ ನಡೆಸಿದಾಗ ತೋರಿಸಿಕೊಟ್ಟ ದಾರಿಯಲ್ಲಿ ನಮ್ಮ ನಾಯಕಿ ನಡೆಯುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದರು.








