ಆನ್ ಲೈನ್ ಜೂಜು ಕೋರರಿಗೆ ಬಿಗ್ ಶಾಕ್ : ರಾಜ್ಯದಲ್ಲಿ ಆನ್ ಲೈನ್ ಗ್ಯಾಂಬ್ಲಿಂಗ್ ಬ್ಯಾನ್…!
ರಾಜ್ಯದಲ್ಲಿ ಮುಖ್ಯಮಂತ್ರಿ ಬಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರವು ಮಹತ್ವದ ಆದೇಶ ನೀಡಿದೆ. ರಾಜ್ಯದಲ್ಲಿ ಇಂದಿನಿಂದ ಆನ್ ಲೈನ್ ಜೂಜನ್ನ ಬ್ಯಾನ್ ಮಾಡುವ ಮೂಲಕ ಆನ್ ಲೈನ್ ಜೂಜು ಕೋರರಿಗೆ ಶಾಕ್ ನೀಡಿದೆ. ಹೌದು ರಾಜ್ಯದಲ್ಲಿ ಇಂದಿನಿಂದ ಆನ್ ಲೈನ್ ಗ್ಯಾಂಬ್ಲಿಂಗ್ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಇನ್ನೂ ಪ್ರಮುಖವಾಗಿ ಆನ್ ಲೈನ್ ಲೂಡೋ ಸುಪ್ರೀಂ, ಡ್ರೀಮ್ 11, PAYTM ಫಸ್ಟ್ ಸೇರಿದಂತೆ ಇನ್ನೂ ಅನೇಕ ಆನ್ ಲೈನ್ ಗೇಮಿಂಗ್ ಆಪ್ ಗಳನ್ನ ರಾಜ್ಯದಲ್ಲಿ ಬ್ಯಾನ್ ಮಾಡಲಾಗಿದೆ. ಅಂದ್ಹಾಗೆ ಇತ್ತೀಚೆಗಷ್ಟೇ ಸರ್ಕಾರ ಆನ್‌ಲೈನ್ ಗೇಮ್, ಆನ್‌ಲೈನ್ ಜೂಜು, ಬೆಟ್ಟಿಂಗ್ ಗೆ ನಿಷೇಧ ಹೇರಿತ್ತು. ಇದರ ಬೆನ್ನಲ್ಲೇ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಜೂಜು ನಿಷೇಧದ ಆದೇಶ ಅಧಿಕೃತವಾಗಿ ಹೊರಬಿದ್ದಿದೆ.
ಏರ್ ಇಂಡಿಯಾ ನೌಕರರನ್ನ ಕನಿಷ್ಠ ಒಂದು ವರ್ಷದವರೆಗೂ ಕೆಲಸದಿಂದ ತೆಗೆಯುವಂತಿಲ್ಲ – ಟಾಟಾಗೆ ಸರ್ಕಾರದ ಷರತ್ತು..!








