‘ರಾಣಾ’ದಲ್ಲಿ ಹೆಜ್ಜೆ ಹಾಕಲು ಸಜ್ಜಾದ ‘ತುಪ್ಪದ ಬೆಡಗಿ’ ರಾಗಿಣಿ
ಬೆಂಗಳೂರು : ಕೆಲ ದಿನಗಳಿಂದ ಸಿನಿಮಾಗಳ ಮೂಲಕ ಸುದ್ದಿಯಾಗದೇ ಹೋದ್ರು ಡ್ರಗ್ಸ್ ಕೇಸ್ ನಲ್ಲಿ ಜೈಲಿಗೋಗಿ ಸುದ್ದಿಯಲ್ಲಿದ್ದ ತುಪ್ಪದ ಬೆಡಗಿ ರಾಗಿಣಿ ಮುಂದೆ ಕೆಲ ಹೊಸ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ವಿಚಾರ ಗೊತ್ತಾಗಿದೆ. ಈ ನಡುವೆ ವಿಶಾಲ್ ಶೇಖರ್ ಆಕ್ಷನ್ ಕಟ್ ಹೇಳ್ತಿರುವ ಕರ್ವ 3 ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ರಾಗಿಣಿ ನಟಿಸಲಿದ್ಧಾರೆ ಅನ್ನೋ ಸುದ್ದಿ ಕೂಡ ಹೊರಬಿದ್ದಿತ್ತು. ಇದೀಗ ನಂದಕಿಶೋರ್ ನಿರ್ದೇಶನದ ‘ರಾಣಾ’ ಚಿತ್ರದಲ್ಲಿ ರಾಗಿಣಿ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟರ್ ಹಂಚಿಕೊಂಡಿರುವ ರಾಗಿಣಿ, ಕೆಂಪು ಬಣ್ಣ ನಿರ್ಭಯ ಮತ್ತು ಸೌಂದರ್ಯದ ಸಂಕೇತ.
ಈ ವಿಶೇಷ ಸಂದರ್ಭದಲ್ಲಿ ರಾಣಾ ಚಿತ್ರದಲ್ಲಿ ಭಾಗಿಯಾಗಿದ್ದೇನೆ ಎನ್ನುವ ವಿಷಯ ತಿಳಿಸುತ್ತಿರುವುದು ಸಂತಸ ತಂದಿದೆ. ಒಂದು ಅದ್ಭುತ ಹಾಡಿನೊಂದಿಗೆ ನಿಮ್ಮ ಮುಂದೆ ಬರುತ್ತಿರುವುದು ಖುಷಿಯಾಗಿದೆ. ಇಮ್ರಾನ್ ಸರ್ದಾರಿಯಾ ಜೊತೆ ಮತ್ತೊಮ್ಮೆ ಕೆಲಸ ಮಾಡುತ್ತಿರುವುದು ಹಾಗೂ ನಂದಕಿಶೋರ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಶ್ರೇಯಸ್ ಮಂಜು ನಾಯಕ. ಚಂದನ್ ಶೆಟ್ಟಿ ಜೊತೆ ಮೊದಲ ಸಲ ಕೆಲಸ ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುಂಚೆ ತುಪ್ಪ ಸಾಂಗ್ , ಯಕ್ಕಾ ನಿನ್ ಮಗಳು ಅಂತಹ ಹಾಡುಗಳಲ್ಲಿ ರಾಗಿಣಿ ಸ್ಟೆಪ್ ಹಾಕಿದ್ದಾರೆ. ರಾಣಾ ಚಿತ್ರದ ಹಾಡಿಗೆ ಚಂದನ್ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದು, ಚುಟುಚುಟು ಹಾಡಿನ ಖ್ಯಾತಿಯ ಶಿವು ಬೈರಾಗಿ ಗೀತೆ ರಚಿಸಿದ್ದಾರೆ.
ಗುಜ್ಜಾಲ್ ಪುರುಷೋತ್ತಮ ಈ ಚಿತ್ರ ನಿರ್ಮಿಸುತ್ತಿದ್ದು, ಶ್ರೇಯಸ್ ಮಂಜು ಜೊತೆ ರೀಷ್ಮಾ ನಾನಯ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನೂ ರಾಗಿಣಿ ರಘು ಹಾಸನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಗಾಂಧಿಗಿರಿ, ನಾನೇ ನೆಕ್ಸ್ಟ್ ಸಿಎಂ, ಜಾನಿ ವಾಕರ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರಬೇಕಿದೆ.
“ಕಾರ್ಗಲ್ ನೈಟ್ಸ್” ಚಿತ್ರದ ಟ್ರೈಲರ್ ರಿಲೀಸ್
ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿ ‘ರಾಕಿ ಭಾಯ್’
2 ವರ್ಷಗಳ ನಂತರ ಮಗುವಿನ ರಹಸ್ಯ ಹಂಚಿಕೊಂಡ ಶ್ರಿಯಾ..!
ಸಮಂತಾ – ಡಿಸೈನರ್ ಸಂಬಂಧ ವದಂತಿ – ಪ್ರೀತಂ ಜುಕಾಲ್ಕರ್ ಗೆ ಜೀವ ಬೆದರಿಕೆ..!








