2 ವರ್ಷಗಳ ನಂತರ ಮಗುವಿನ ರಹಸ್ಯ ಹಂಚಿಕೊಂಡ ಶ್ರಿಯಾ..!
ಸೌತ್ ಸಸಿಮಾ ಇಂಡಸ್ಟ್ರಿಯ ಸ್ಟಾರ್ ನಟಿಯರ ಪೈಕಿ ಒಬ್ಬರಾಗಿದ್ದ ಶ್ರಿಯಾ ಅವರು ಕೆಲ ಟೈಮ್ ನಿಂದ ಸೈಲೆಂಟ್ ಆಗಿಬಿಟ್ಟಿದ್ದಾರೆ. ವಿದೇಶಿಗನ ಜೊತೆ ಮದುವೆಯಾಗಿದ್ದ ಶ್ರಿಯಾ ಶರಣ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, 2 ವರ್ಷಗಳ ನಂತರ ಈ ವಿಚಾರವನ್ನ ಹಂಚಿಕೊಂಡಿದ್ದಾರೆ. ಅಲ್ಲದೇ ತಡವಾಗಿ ವಿಚಾರ ತಿಳಿಸಿದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಮಗು ಹಾಗೂ ಪತಿಯ ವಿಡಿಯೋ ಹಂಚಿಕೊಂಡಿರುವ ನಟಿ “2020ರ ಕ್ವಾರಂಟೈನ್ ತುಂಬಾನೇ ಅದ್ಭುತವಾಗಿತ್ತು. ಇಡೀ ಪ್ರಪಂಚವು ಕಷ್ಟದಲ್ಲಿ ಸಾಗುತ್ತಿರುವಾಗ, ನಮ್ಮ ಪ್ರಪಂಚವು ಬದಲಾಯಿತು. ನಾವು ಹೆಣ್ಣು ಮಗುವಿಗೆ ತಂದೆತಾಯಿಯಾದೆವು ಎಂದು ಸಂತೋಷ ಹಂಚಿಕೊಂಡಿದ್ದಾರೆ.
ಸಡನ್ ಆಗಿ ತಾಯಿಯಾಗಿರೋದಾಗಿ ಶ್ರಿಯಾ ಮಾಹಿತಿ ನೀಡಿದ ಹಿನ್ನೆಲೆ ಅಭಿಮಾನಿಗಳು ಸಖತ್ ಶಾಕ್ ಆಗಿದ್ದಾರೆ. ಕೋವಿಡ್ ಲಾಕ್ಡೌನ್ ಸಮಯದಲ್ಲಿ ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಬಂದಿರುವ ವಿಚಾರವನ್ನು ತಿಳಿಸುವುದು ಸೂಕ್ತವಾಗಿರಲಿಲ್ಲ ಎಂದು ತಿಳಿಸಿದ್ದಾರೆ. ರಷ್ಯಾದ ಗೆಳೆಯ ಆಂಡ್ರೆ ಕೊಶ್ಚೆವ್ ಜೊತೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಶ್ರಿಯಾ 2020ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.