ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿ ‘ರಾಕಿ ಭಾಯ್’
ಬೆಂಗಳೂರು : ಕೆಜಿಎಫ್ ನಂತರ ಪರ ಭಾಷೆಯಲ್ಲೂ ಸಾಕಷ್ಟು ಅಭಿಮಾನಿಗಳನ್ನ ಹೊಂದಿರುವ ರಾಕಿ ಭಾಯ್ ಹೋದ ಕಡೆಯಲ್ಲೆಲ್ಲಾ ಹವಾ ಸೃಷ್ಟಿ ಮಾಡ್ತಿದ್ದಾರೆ. ಇತ್ತೀಚೆಗೆ ಮುಂಬೈಗೆ ತೆರಳಿದ್ದ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ರು. ಇದೀಗ ಪ್ರತಿಷ್ಠಿತ ಫೋರ್ಬ್ಸ್ ಮ್ಯಾಗಜಿನ್ ನಲ್ಲಿ ಇಬ್ಬರು ಸೌತ್ ಇಂಡಿಯನ್ ಸ್ಟಾರ್ ಗಳ ಜೊತೆಗೆ ಸ್ಥಾನ ಪಡೆದಿರುವ ಯಶ್ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಶೈನ್ ಆಗ್ತಾಯಿದ್ದಾರೆ.
ಮ್ಯಾಗಗಜಿನ್ ನ ಸೆಲೆಬ್ರಿಟಿ ಸ್ಪೆಷಲ್ ಎಡಿಷನ್ನ ರಿಲೀಸ್ ಆಗಿದ್ದು, ಈ ಮುಖಪುಟದಲ್ಲಿ ಯಶ್ ಫೋಟೋ ರಾರಾಜಿಸಿದೆ. ಯಶ್ ಅಭಿಮಾನಿಗಳು ಈ ಎಡಿಷನ್ ಗೆ ಫಿದಾ ಆಗಿದ್ದು ಟ್ವಿಟ್ಟರ್ ನಲ್ಲಿ #YashBOSS ಟ್ರೆಂಡ್ ಆಗ್ತಿದೆ. ಅಷ್ಟೇ ಅಲ್ಲದೇ ಫೋರ್ಬ್ಸ್ ಮ್ಯಾಗಜಿನ್ ಇದೇ ಮೊದಲಬಾರಿಗೆ ಫೋರ್ಬ್ಸ್ ದಕ್ಷಿಣ ಭಾರತದ ಸೆಲೆಬ್ರಿಟಿಗಳನ್ನೇ ಇಟ್ಟುಕೊಂಡು ವಿಶೇಷ ಎಡಿಷನ್ ರಿಲೀಸ್ ಮಾಡಿದೆ.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸೆಲೆಬ್ರಿಟಿಗಳನ್ನು ಈ ಎಡಿಷನ್ ನಲ್ಲಿ ಸೇರಿಸಲಾಗಿದೆ. ಕನ್ನಡದಿಂದ ಯಶ್, ತಮಿಳಿನಿಂದ ನಯನತಾರಾ, ಮಲಯಾಳಂನಿಂದ ದುಲ್ಖರ್ ಸಲ್ಮಾನ್ ಫೋಟೋ ಮ್ಯಾಗಜಿನ್ ಮುಖಪುಟದಲ್ಲಿದೆ. ಈ ಕುರಿತು ಫೋರ್ಬ್ಸ್ ಟ್ವಿಟ್ಟರ್ ನಲ್ಲಿ ವೀಡಿಯೋ ಹಂಚಿಕೊಂಡಿದೆ. ಇದ್ರಲ್ಲಿ ಯಶ್ ಬ್ಲಾಕ್ ಕೋಟ್ ಮತ್ತು ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದು ಸ್ಟೈಲಿಶ್ ಹೇರ್ ಸ್ಟೈಲ್ ಖಡಕ್ ಲುಕ್ ನಲ್ಲಿ ಸಖತ್ ಡ್ಯಾಶಿಂಗ್ ಆಗಿ ಕಾಣಿಸ್ತಿದ್ದಾರೆ.