ಜೊತೆ ಜೊತೆಗೆ ಪ್ರಚಾರ ಆರಂಭಿಸಿದ ಹಾಲಿ ಮತ್ತು ಮಾಜಿ ಸಿ ಎಂ
ಉಪಚುನಾವಣೆಯ ಪ್ರಚಾರ ಶುರುವಾದಾಗಿನಿಂದ ಬೇರೆ ಬೇರೆಯಾಗಿಯೆ ಪ್ರಚಾರ ಮಾಡುತ್ತಿದ್ದ ಹಾಲಿ ಸಿ ಎಂ ಬಸವಾಜ್ ಬೊಮ್ಮಾಯಿ ಮತ್ತು ಮಾಜಿ ಸಿ ಎಂ ಯಡಿಯೂರಪ್ಪ ಇಂದು ಒಂದೇ ವೇದಿಕೆಯ ಮೇಲೆ ಕುಳಿತು ಪ್ರಚಾರ ಸಭೆ ನಡೆಸಿದರು. ಹಾನಗಲ್ ನ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ಪರ ಮತಯಾಚನೆ ಮಾಡಿದರು.

ಬಿಜೆಪಿ ಆಂತರಿಕ ಸಮೀಕ್ಷೆಯ ನಂತರ ಹಾನಗಲ್ ನ ರಾಜಕೀಯ ಪ್ರಚಾರದ ಚಿತ್ರಣವೇ ಬದಲಾಗಿದೆ. ಕಾಂಗ್ರೇಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇರುವುದರಿಂದ ಮತ್ತು ಹಾಲಿ ಸಿಎಂ ನ ತವರು ಜಿಲ್ಲೆಯ ಕ್ಷೇತ್ರವಾಗಿರುವುದರಿಂದ ಎರಡು ಪಕ್ಷಗಳು ಈ ಚುನಾವಣೆಯನ್ನ ಪ್ರತಿಷ್ಠೆಯಾಗಿ ಸ್ವೀಕರಿಸಿವೆ…
ಹಾನಗಲ್ ಹಾಲಿ ಬಿಜೆಪಿ ಕ್ಷೇತ್ರವಾಗಿರುವುದರಿಂದ ಅದನ್ನ ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದು ಬಿಜೆಪಿ ಉಸ್ತುವಾರಿ ಹೊಣೆ ಹೊತ್ತಿರುವ ಅರುಣ್ ಸಿಂಗ್ ರಾಜ್ಯ ನಾಯಕರುಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ..ಹಾಗಾಗಿ ಇಂದು ಒಂದೇ ವೇದಿಕೆಯಲ್ಲಿ ಗುರು ಶಿಷ್ಯರು ಕಾಣಿಸಿಕೊಂಡಿದ್ದಾರೆ….
ನಮಗೆ ಯಾರ ಬಗ್ಗೆ ಕೂಡ ಸಾಫ್ಟ್ ಕಾರ್ನರ್ ಇಲ್ಲ : ಹೆಚ್ ಡಿಕೆ








