ADVERTISEMENT
Thursday, October 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಇದು ʻಬೆಲಾ ಚಾವ್‌ʼ ಹಾಡು ಹುಟ್ಟಿದ ಹಿನ್ನೆಲೆ; ಜನಪದ ಗೀತೆಯೊಂದು ಇಟಾಲಿಯನ್‌ ಕ್ರಾಂತಿಗೀತೆಯಾದ ರೋಚಕ ಕಥೆ

Namratha Rao by Namratha Rao
October 24, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಕೃಪೆ – ಹಿಂಡವಿ

ಇದು ʻಬೆಲಾ ಚಾವ್‌ʼ ಹಾಡು ಹುಟ್ಟಿದ ಹಿನ್ನೆಲೆ; ಜನಪದ ಗೀತೆಯೊಂದು ಇಟಾಲಿಯನ್‌ ಕ್ರಾಂತಿಗೀತೆಯಾದ ರೋಚಕ ಕಥೆ

Related posts

ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ

ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ

October 1, 2026
ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾವಿನ ಬಳಿಕ ನಡೆದ ಬೆಳವಣಿಗೆ, ಶರಣಾಗತಿ ಸಿದ್ಧತೆ ಕುರಿತು ಮಾಫಿ ಸಾಕ್ಷಿ ಪ್ರದೂಷ್ ಹೇಳಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾವಿನ ಬಳಿಕ ನಡೆದ ಬೆಳವಣಿಗೆ, ಶರಣಾಗತಿ ಸಿದ್ಧತೆ ಕುರಿತು ಮಾಫಿ ಸಾಕ್ಷಿ ಪ್ರದೂಷ್ ಹೇಳಿಕೆ

October 1, 2026

“ಉನಾ ಮತಿನಾ ಮಿ ಸೋನೋ ಅಲ್ಜಾತೋ

ಬೆಲಾ ಚಾವ್‌ ಬೆಲಾ ಚಾವ್‌ ಬೆಲಾ ಚಾವ್‌ ಚಾವ್‌ ಚಾವ್.‌.”

ಇಟಾಲಿಯನ್‌ ಭಾಷೆಯ ಈ ಹಾಡು ಇದೀಗ ನೆಟ್‌ಫ್ಲಿಕ್ಸ್‌ನ ಬಹುಜನಪ್ರಿಯ ವೆಬ್‌ ಸೀರೀಸ್‌ ʻಮನಿ ಹೈಸ್ಟ್‌ʼ ಮೂಲಕ ಅಸಂಖ್ಯ ಜನರ ಫೆವರೇಟ್‌ ಆಗಿದೆ. ಅದೆಷ್ಟೋ ಮಂದಿ ಇದನ್ನು ತಮ್ಮ ಮೊಬೈಲ್‌ ರಿಂಗ್‌ ಟೋನ್‌ ಆಗಿಸಿಕೊಂಡಿದ್ದಾರೆ. ಮನಿ ಹೈಸ್ಟ್‌ನ ಎಪಿಸೋಡ್‌ಗಳಲ್ಲಿ ಎರಡು ಮೂರು ಕಡೆ ಈ ಬೆಲಾ ಚಾವ್‌ ಹಾಡು ಬರುತ್ತದೆ. ಸೀರಿಸ್‌ನ ಅಲ್ಲಲ್ಲಿ ಹಿನ್ನೆಲೆ ಧ್ವನಿಯಾಗಿ ಇದರ ಮ್ಯೂಸಿಕ್‌ ರಿಂಗಣಿಸುತ್ತದೆ. ಅಸಲಿಗೆ ಬೆಲಾ ಚಾವ್‌ ಎನ್ನುವ ಇಟಾಲಿಯನ್‌ ಪದದ ಅರ್ಥವೆಂದರೆ ಗುಡ್‌ಬೈ ಬ್ಯೂಟಿಫುಲ್;‌ ಕನ್ನಡದಲ್ಲಿ ಹೇಳುವುದಾದರೆ ಶುಭವಿದಾಯ ಸೌಂದರ್ಯವೇ.

ವಾಸ್ತವದಲ್ಲಿ ಈ ಬೆಲಾ ಚಾವ್‌ ಅನ್ನುವುದು ಅತ್ಯಂತ ಪುರಾತನವಾದ ಇಟಾಲಿಯನ್‌ ಜನಪದೀಯ ಗೀತೆ. 19ನೇ ಶತಮಾನದಲ್ಲಿ ಉತ್ತರ ಇಟಲಿಯ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡಲು ಬಡ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿತ್ತಂತೆ. ಇವರನ್ನು ಮೊಂಡಿನಾ ಮಹಿಳೆಯರನ್ನಲಾಗುತ್ತಿತ್ತು. ಅರೆಬರೆ ಬೆತ್ತಲೆಯಾಗಿ ಗಂಟೆಗಳ ಕಾಲ ಕಷ್ಟ ಪಟ್ಟು ಸಣ್ಣ ಕಿಲುಬು ಕಾಸು ಕೂಲಿ ಪಡೆಯುತ್ತಿದ್ದ ಈ ಮಹಿಳೆಯರು ತಮ್ಮ ಕೆಲಸದ ಮಧ್ಯೆ ಈ ಬೆಲಾ ಚಾವ್‌ ಎನ್ನುವ ಗೀತೆ ಹಾಡಿಕೊಳ್ಳುತ್ತಿದ್ದರಂತೆ. ಆಗ ಇದರ ಅರ್ಥ ಇದ್ದಿದ್ದು, “ಪ್ರತಿ ದಿನ ಬೆಳಗೆದ್ದು ನಾವು ನೋಡಿದಾಗ, ನಮ್ಮ ಮಾಲೀಕ ಕುಡುಗೋಲು ಹಿಡಿದು ನಮ್ಮನ್ನು ಕೆಲಸ ಮಾಡಿಸಲು ನಿಂತಿರುತ್ತಾನೆ. ನಮಗೆ ಕಡಿಮೆ ಕೂಲಿ ಸಿಗುತ್ತದೆ, ನಾವು ಉರಿಬಿಸಲಿನಲ್ಲಿ ದುಡಿದು ದಣಿಯಬೇಕು. ಹೀಗೆಯೇ ನಮ್ಮ ಯೌವನ ನಾಶವಾಗುತ್ತದೆ. ಪರವಾಗಿಲ್ಲ ಒಂದಲ್ಲ ಒಂದು ದಿನ ನಮಗೂ ಒಳ್ಳೆಯದಾಗುತ್ತದೆ. ಅವತ್ತು ನಾವು ಸ್ವತಂತ್ರರಾಗಿರುತ್ತೇವೆ ಕೇವಲ ನಮಗಾಗಿ ಕೆಲಸ ಮಾಡುವ ದಿನ ಬರುತ್ತದೆ”. ಮೂಲದಲ್ಲಿ ಬೆಲಾಚಾವ್‌ ಅರ್ಥ ಹೀಗಿತ್ತು. ಆದರೆ ಕ್ರಮೇಣ ಕಾಲ ಬದಲಾದಂತೆ ಈ ಗೀತೆಯ ಅರ್ಥವೂ ಬದಲಾಯಿತು.   

ಇದೇ ಗೀತೆ ಮತ್ತೆ ಇಟಲಿಯ ಜನಸಮೂಹದಲ್ಲಿ ಪ್ರಖ್ಯಾತವಾಗಿದ್ದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ. 1943ರಿಂದ 1945ರ ನಡುವಿನ ಅವಧಿಯಲ್ಲಿ ಇಟಾಲಿಯನ್‌ ಪಾರ್ಟಿಸನ್‌ ಎನ್ನುವ ಬಂಡಾಯ ಹೋರಾಟಗಾರರು ಈ ಹಾಡನ್ನು ಹಾಡಿಕೊಳ್ಳುತ್ತಿದ್ದರಂತೆ. ಅಷ್ಟಕ್ಕೂ ಈ ಪಾರ್ಟಿಸನ್‌ ಹೋರಾಟಗಾರರೆಂದರೆ ಯಾರು ಎನ್ನುವ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳಬಹುದು. ವಿಶ್ವಯುದ್ಧದ ಸಂದರ್ಭದಲ್ಲಿ ಇದ್ದ ಒಬ್ಬ ಸರ್ವಾಧಿಕಾರಿ ಜರ್ಮನಿಯ ಅಡಾಲ್ಫ್‌ ಹಿಟ್ಲರ್‌ ಆದರೆ ಮತ್ತೊಬ್ಬ ಸರ್ವಾಧಿಕಾರಿ ಇಟಲಿಯ ಬೆನಿಟೋ ಮುಸಲೋನಿ. ಹಿಟ್ಲರ್‌ನ ಆಪ್ತಮಿತ್ರನೂ ಆಗಿದ್ದ ಮುಸಲೋನಿ ಇಟಲಿ ಜರ್ಮನಿಯನ್ನು ಬೇಷರತ್ತಾಗಿ ವಿಶ್ವಯುದ್ಧದಲ್ಲಿ ಬೆಂಬಲಿಸುವಂತೆ ಮಾಡಿದ. ಆದರೆ ಜರ್ಮನಿ ಮತ್ತು ಇಟಲಿಗಳೇ ಶುರುಮಾಡಿದ ವಿಶ್ವಯುದ್ಧದಲ್ಲಿ 1942-43 ಹೊತ್ತಿಗೆ ಇವೆರಡೂ ದೇಶಗಳೂ ವೀಕ್‌ ಆಗತೊಡಗಿದ್ದವು.

ಅನೇಕ ಇಟಾಲಿಯನ್ನರಿಗೆ ಬೆನಿಟೋ ಮುಸಲೋನಿ ಕಂಡರೆ ಆಗುತ್ತಿರಲಿಲ್ಲ. ಅವನ ನಿರ್ಧಾರಗಳನ್ನು ಖಂಡತುಂಡವಾಗಿ ಟೀಕಿಸುತ್ತಿದ್ದ ದೊಡ್ಡ ಸಮೂಹ ಆಗ ಇಟಲಿಯಲ್ಲಿತ್ತು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಇಟಲಿಯನ್‌ ರಾಜನಾಗಿದ್ದ ಮೂರನೆಯ ವಿಕ್ಟರ್‌ ಇಮ್ಯಾನಿಯೆಲ್‌ 1943ರಲ್ಲಿ ಬೆನಿಟೋ ಮುಸಲೋನಿಯನ್ನು ಬಂಧಿಸಿಬಿಟ್ಟ. ಜೊತೆಗೆ ಅಲೈಡ್‌ ಫೋರ್ಸ್‌ಗಳಾದ ಇಂಗ್ಲೆಂಡ್‌, ಫ್ರಾನ್ಸ್‌ ಮತ್ತು ಅಮೇರಿಕಾ ಮಿತ್ರಪಡೆಗಳಿಗೆ ಮುಸಲೋನಿಯನ್ನು ಬಂಧಿಸಿರುವುದಾಗಿ ತಿಳಿಸಿ, ಕದನ ವಿರಾಮ ಘೋಷಿಸುವಂತೆ ಮನವಿ ಮಾಡಿಕೊಂಡ. ಹಾಗೆಯೇ ಇಟಲಿ ಸಂದಿಗೆ ಸಿದ್ಧವೆನ್ನುವ ಮಾಹಿತಿ ರವಾನಿಸಿದ. ಯಾವಾಗ ಮುಸಲೋನಿ ಬಂಧನದ ವಿಚಾರ ತಿಳಿಯಿತೋ, ಹಿಟ್ಲರ್‌ ತನ್ನ ಸೈನ್ಯವನ್ನು ಇಟಲಿಯ ಮೇಲೆ ತಿರುಗಿಸಿದ. ಇಲ್ಲಿಯವರೆಗೆ ಯಾವ ದೇಶದ ಬೆಂಬಲದೊಂದಿಗೆ ಜರ್ಮನಿ ವಿಶ್ವ ಸಮರದಲ್ಲಿ ಕಾದಾಡುತ್ತಿತ್ತೋ ಅದೇ ಮಿತ್ರ ಇಟಲಿಯ ವಿರುದ್ಧವೇ ಯುದ್ಧ ಸಾರಿ ಬಹುತೇಕ ಇಟಲಿಯನ್ನು ಆಕ್ರಮಿಸಿಕೊಂಡಿತು.

ಜರ್ಮನ್‌ ನಾಜಿಗಳ ಈ ಅತಿಕ್ರಮಣವನ್ನು ಆಕ್ರಮಣವನ್ನು ವಿರೋಧಿಸಿ ಇಟಲಿಯಲ್ಲಿ ʻಇಟಾಲಿಯನ್‌ ರೆಸಿಸ್ಟೆನ್ಸ್‌ ಮೂವ್‌ಮೆಂಟ್‌ʼ ಶುರುವಾಯಿತು. ಹೀಗೆ ಈ ಮೂವ್‌ಮೆಂಟ್‌ನಲ್ಲಿದ್ದ ರೆಬೆಲ್‌ ಹೋರಾಟಗಾರರನ್ನೇ ಇಟಾಲಿಯನ್‌ ಪಾರ್ಟಿಸನ್‌ ಎನ್ನಲಾಯಿತು. 1943ರಿಂದ 1945ರವರೆಗೆ ಅಂದರೆ ಎರಡನೇ ವಿಶ್ವಯುದ್ಧದ ಮಹಾನಾಟಕಕ್ಕೆ ತೆರೆ ಬೀಳುವ ತನಕ “ಬೆಲಾ ಚಾವ್‌” ಎನ್ನುವ ಇಟಾಲಿಯನ್‌ ಜನಪದ ಗೀತೆ ಕ್ರಾಂತಿಗೀತೆಯಾಗಿ ಹಾಡಲ್ಪಡುತ್ತಿತ್ತು. ಮೂಲ ಜನಪದ ಸಾಹಿತ್ಯವನ್ನು ಆ ಸಂದರ್ಭದಲ್ಲಿ ಬದಲಾಯಿಸಲಾಯಿತು. ಇವತ್ತು ನಾವು ಕೇಳುತ್ತಿರುವುದು ಪಾರ್ಟಿಸನ್‌ಗಳು ಬದಲಾಯಿಸಿರುವ ಸಾಹಿತ್ಯವನ್ನೇ. ಆನಂತರ ಮಾರ್ಪಾಡಾದ ಸಾಹಿತ್ಯ ಹೀಗಿದೆ, “ನಾನು ಬೆಳಗೆದ್ದು ನೋಡಿದಾಗ ನನ್ನ ದೇಶದಲ್ಲಿ ಆಕ್ರಮಣಕಾರರು (ಜರ್ಮನ್‌ ನಾಜಿ ಪಡೆ) ಅತಿಕ್ರಮಿಸಿದ್ದರು. ಅವರು ನಮ್ಮ ದೇಶವನ್ನು ಆವರಿಸಿಕೊಂಡುಬಿಟ್ಟಿದ್ದಾರೆ. ಹೀಗಾಗಿ ಗೆಳೆಯರೆ ನಾನು ಹೋರಾಡಲು ತೆರಳುತ್ತಿದ್ದೇನೆ. ಈ ಹೋರಾಟದಲ್ಲಿ ಏನಾದರೂ ನನ್ನ ಮೃತ್ಯುವಾದರೆ ನನ್ನ ಶವವನ್ನೂ ಹೂತು ಹಾಕಿ, ನನ್ನ ಸಮಾಧಿಯ ಮೇಲೆ ಸುಂದರವಾದ ಹೂಗಿಡವನ್ನು ನೆಟ್ಟುಬಿಡಿ”. ಹೀಗೆ ಈ ಬೆಲಾ ಚಾವ್‌ ಹಾಡು ಆಂಟಿ ಆಪರೇಷನ್‌ ಮೂವ್‌ಮೆಂಟ್‌ನ ಸಿಂಬಲ್‌ ಆಗಿ ಬದಲಾಯಿತು. ಇಟಾಲಿಯನ್ನರ ಕ್ರಾಂತಿಗೀತೆಯಾಯಿತು.

ಕ್ರಮೇಣ ಕಾಲ ಬದಲಾದಂತೆ ಮಾನವೀಯತೆಯ ಪ್ರತಿಪಾದನೆ ಮತ್ತು ಅನ್ಯಾಯದ ವಿರುದ್ಧದ ಗೀತೆಯಾಗಿ ಬದಲಾಯಿತು. ಕೇವಲ ಇಟಲಿ ಮಾತ್ರವಲ್ಲ ಸ್ಪೇನ್‌ ಮತ್ತೂ ಗ್ರೀಕ್‌ಗಳಲ್ಲಿಯೂ ಮಾನವ ಹಕ್ಕುಗಳ ಹೋರಾಟಗಾರರು ತಮ್ಮ ಪ್ರತಿಭಟನೆಯ ಸಂದರ್ಭದಲ್ಲಿ ಈ ಹಾಡನ್ನು ಹಾಡಲಾಗುತ್ತಿತ್ತು. ಫುಟ್ಬಾಲ್‌ ಸ್ಟೇಡಿಯಂನಲ್ಲಿ ತಮ್ಮ ತಂಡವನ್ನು ಸಪೋರ್ಟ್‌ ಮಾಡಲೂ ಸಹ ಅಭಿಮಾನಿಗಳು ಇದೇ ಹಾಡನ್ನು ಹಾಡತೊಡಗಿದರು. ಏಕಾಏಕಿ ಬೆಲಾ ಚಾವ್‌ ಹಾಡು ವಿಶ್ವದಾದ್ಯಂತ ಮತ್ತೆ ಜನಪ್ರಿಯವಾಗಲು ಕಾರಣ ನೆಟ್‌ಫ್ಲಿಕ್ಸ್‌ನ ಮನಿ ಹೈಸ್ಟ್‌ ವೆಬ್‌ ಸೀರಿಸ್.‌ ಈ ಸೀರಿಸ್‌ನ ಮುಖ್ಯ ಪಾತ್ರ ಪ್ರೊಫೆಸರ್‌ ಈ ಹಾಡಿನ ಹಿನ್ನೆಲೆ ಹೇಳುವ ದೃಶ್ಯವಿದೆ. ಪ್ರೊಫೆಸರ್‌ ಅಜ್ಜ ಇಟಲಿಯ ಪಾರ್ಟಿಸನ್‌ ಆಗಿರುತ್ತಾರೆ. ಅವರ ಮೂಲಕ ಈ ಕ್ರಾಂತಿ ಗೀತೆ ಪ್ರೊಫೆಸರ್‌ರಿಗೆ ಕಂಠ ಪಾಠವಾಗುತ್ತದೆ. ನಂತರ ಪ್ರೊಫೆಸರ್‌ ತಮ್ಮ ಗ್ಯಾಂಗಿನ ಸದಸ್ಯರಿಗೆ ಬೆಲಾ ಚಾವ್‌ ಹಾಡನ್ನು ಹೇಳಿಕೊಡುತ್ತಾರೆ. ಕೋವಿಡ್-‌19 ಸಾಂಕ್ರಾಮಿಕ ಮಹಾಮಾರಿಗೆ ತುತ್ತಾದ ಇಟಲಿ ಸಾಕಷ್ಟು ನಷ್ಟ ಅನುಭವಿಸಿದ ಸಂದರ್ಭದಲ್ಲಿಯೂ ಇಟಲಿಯ ಕೋವಿಡ್‌ ವಾರಿಯರ್ಸ್‌ ಮತ್ತು ಇಟಲಿಯ ಪ್ರಜೆಗಳು ಸಾಲಿಡಾರಿಟಿ ಹಾಗೂ ಕೋವಿಡ್‌ ಪ್ಯಾಂಡೆಮಿಕ್‌ ವಿರುದ್ಧ ಇದೇ ಗೀತೆಯನ್ನು ಹಾಡಿದ್ದರು. ಒಂದು ದೇಶದ ಜನಪದ ಗೀತೆ ಕಾಲಕ್ರಮೇಣ ಹೇಗೆಲ್ಲಾ ಬದಲಾಯಿತು ನೋಡಿದ್ರಾ..

-ವಿಭಾ

ಮೂಲ ನಿಷ್ಠಾವಂತರು ವರ್ಸಸ್‌ ಅಲೆಮಾರಿಗಳು ಎನ್ನುವ ಸಂಘರ್ಷಕ್ಕೆ ಬಲಿಯಾಗಲಿದೆಯೇ ತೀರ್ಥಹಳ್ಳಿ ಕಾಂಗ್ರೆಸ್‌

ಆನೆ ಹೋಗ್ತಿದ್ರೆ, ನಾಯಿ ಬೊಗಳುತ್ತದೆ : ಜಮೀರ್ ವಿರುದ್ಧ ಹೆಚ್ ಡಿಕೆ ಕಿಡಿ

 

Tags: #saakshatvadolf hitlerbela chawbiographyflash backhistorylifestoryspecial article
ShareTweetSendShare
Join us on:

Related Posts

ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ

ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ

by Shwetha
October 1, 2026
0

ಬೆಂಗಳೂರು: ರಾಜಧಾನಿಯ ಜನಸಾಮಾನ್ಯರ ಸಾರಿಗೆಯಾದ ಬಿಎಂಟಿಸಿ ಬಸ್ ಪ್ರಯಾಣ ಇನ್ನು ಮುಂದೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ಬಸ್ ಟಿಕೆಟ್ ದರ...

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾವಿನ ಬಳಿಕ ನಡೆದ ಬೆಳವಣಿಗೆ, ಶರಣಾಗತಿ ಸಿದ್ಧತೆ ಕುರಿತು ಮಾಫಿ ಸಾಕ್ಷಿ ಪ್ರದೂಷ್ ಹೇಳಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾವಿನ ಬಳಿಕ ನಡೆದ ಬೆಳವಣಿಗೆ, ಶರಣಾಗತಿ ಸಿದ್ಧತೆ ಕುರಿತು ಮಾಫಿ ಸಾಕ್ಷಿ ಪ್ರದೂಷ್ ಹೇಳಿಕೆ

by Shwetha
October 1, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೂಷ್ ಅವರ ಹೇಳಿಕೆ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ಮುಂದುವರಿದಿದ್ದು, ಕೊಲೆಯ ಬಳಿಕ ನಡೆದ ಬೆಳವಣಿಗೆಗಳ ಕುರಿತು ಹಲವು ಮಹತ್ವದ ವಿಚಾರಗಳನ್ನು...

CWC ಸಭೆಯಲ್ಲಿ ಶಶಿ ತರೂರ್ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ: ಕಾರ್ಯಕ್ರಮಕ್ಕೆ ಬರ್ತೀರಾ ಅಥವಾ ಬರೀ ಎಕ್ಸ್ ನಲ್ಲೇ ಕಾಣಿಸಿಕೊಳ್ಳುತ್ತೀರಾ ಎಂದು ಲೇವಡಿ

CWC ಸಭೆಯಲ್ಲಿ ಶಶಿ ತರೂರ್ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ: ಕಾರ್ಯಕ್ರಮಕ್ಕೆ ಬರ್ತೀರಾ ಅಥವಾ ಬರೀ ಎಕ್ಸ್ ನಲ್ಲೇ ಕಾಣಿಸಿಕೊಳ್ಳುತ್ತೀರಾ ಎಂದು ಲೇವಡಿ

by Shwetha
October 1, 2026
0

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯು ಕೇವಲ ಗಂಭೀರ ರಾಜಕೀಯ ಚರ್ಚೆಗಳಿಗಷ್ಟೇ ಅಲ್ಲದೆ, ಪಕ್ಷದ ಹಿರಿಯ ನಾಯಕರ ನಡುವಿನ ಹಸನ್ಮುಖಿ ವಾಕ್ಸಮರಕ್ಕೂ ಸಾಕ್ಷಿಯಾಯಿತು. ಚುನಾವಣಾ ಆಯೋಗದ...

ಶಕ್ತಿ ಯೋಜನೆ: ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ಆಧಾರ್ ಅಗತ್ಯವಿಲ್ಲ; 1 ಕೋಟಿ ಮಹಿಳೆಯರಿಗೆ ಸ್ಮಾರ್ಟ್‌ ಕಾರ್ಡ್ ವಿತರಿಸಲು ಸಿದ್ಧತೆ

ಶಕ್ತಿ ಯೋಜನೆ: ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ಆಧಾರ್ ಅಗತ್ಯವಿಲ್ಲ; 1 ಕೋಟಿ ಮಹಿಳೆಯರಿಗೆ ಸ್ಮಾರ್ಟ್‌ ಕಾರ್ಡ್ ವಿತರಿಸಲು ಸಿದ್ಧತೆ

by Shwetha
October 1, 2026
0

ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಬಸ್ ಪ್ರಯಾಣ ಪಡೆಯಲು ಪ್ರತಿ ಬಾರಿ ಆಧಾರ್ ಕಾರ್ಡ್ ತೋರಿಸುವ ಅಗತ್ಯವನ್ನು ತೆಗೆದುಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಯೋಜನೆಯ ದುರ್ಬಳಕೆಯನ್ನು ತಡೆಯುವ...

ಬಿಜೆಪಿಗಿಂತ ಕಾಂಗ್ರೆಸ್ ಆಡಳಿತದಲ್ಲೇ ಕಮಿಷನ್ ದಂಧೆ ಮಿತಿಮೀರಿದೆ ಎಂದ ಗುತ್ತಿಗೆದಾರರ ಸಂಘ:ಗ್ಯಾರಂಟಿಗಳಿಗೆ ಹಣವಿದೆ ಗುತ್ತಿಗೆದಾರರಿಗೆ ಇಲ್ಲವೇ? 40 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರದ ವಿರುದ್ಧ ಆಕ್ರೋಶ

ಬಿಜೆಪಿಗಿಂತ ಕಾಂಗ್ರೆಸ್ ಆಡಳಿತದಲ್ಲೇ ಕಮಿಷನ್ ದಂಧೆ ಮಿತಿಮೀರಿದೆ ಎಂದ ಗುತ್ತಿಗೆದಾರರ ಸಂಘ:ಗ್ಯಾರಂಟಿಗಳಿಗೆ ಹಣವಿದೆ ಗುತ್ತಿಗೆದಾರರಿಗೆ ಇಲ್ಲವೇ? 40 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರದ ವಿರುದ್ಧ ಆಕ್ರೋಶ

by Shwetha
October 1, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಡಿಕೆ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಗುತ್ತಿಗೆದಾರರ ಸಂಘದಿಂದ ಅತಿ ದೊಡ್ಡ ಸಂಕಷ್ಟ ಎದುರಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬಾಕಿ ಇರುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram