ಅಗ್ನಿ 5 ಯಶಸ್ವಿ ಪರೀಕ್ಷೆ. ಚೀನಾಗೆ ಎಚ್ಚರಿಕೆಯ ಸಂದೇಶ
ಖಂಡದಿಂದ ಖಂಡಾಂತರಕ್ಕೆ ಹಾರುವ ಮತ್ತು ಅಣ್ವಸ್ತ್ರ ಸಿಡಿತಲೆಯನ್ನ ಹೊತ್ತಯ್ಯುವ ಸಾಮರ್ಥ್ಯದ ಅಗ್ನಿ 5 ಬ್ಯಾಲಸ್ಟಿಕ್ ಕ್ಷಿಪಣಿಯನ್ನ ಯಶಸ್ವಿಯಾಗಿ ಉಡ್ಡಯನ ಪರೀಕ್ಷೆ ಮಾಡಲಾಯಿತು.
5000 ಕಿಲೋ ಮೀಟರ್ ವೆರೆಗಿನ ದೂರದ ಗುರಿಯನ್ನ ಹೊಡೆದುರುಳಿಸುವ ಸಾಮರ್ಥ್ಯವನ್ನ ಅಗ್ನಿ 5 ಕ್ಷಿಪಣಿ ಹೊಂದಿದೆ. ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಬುಧವಾರ ಕ್ಷಿಪಣಿ ಅಗ್ನಿ-5 ನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಈ ಕ್ಷಿಪಣಿ 50 ಟನ್ ತೂಕ ಹೊಂದಿದೆ. ಖಂಡದಿಂದ ಖಂಡಕ್ಕೆ ಹಾರುವ ಕ್ಷಿಪಣಿ ಹೊಂದಿರುವ 5ನೇ ದೇಶ ಭಾರತ ಎನ್ನುವ ಹೆಸರಿಗೆ ಪಾತ್ರವಾಗಿದೆ.
ಚೀನಾದ ದೀರ್ಘ ಕಾಲದ ಗಡಿ ಘರ್ಷಣೆಯ ನಂತರ ಈ ಕ್ಷಿಪಣಿ ಉಡಾಯಿಸಿರುವುದು ಭಾರತೀಯ ಸೇನೆಗೆ ಮತ್ತೆ ಬಲ ತುಂಬಿದೆ. ಇದರ ಜೊತೆಗೆ ಚೀನಾ ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶವನ್ನ ರವಾನಿಸುತ್ತಿದೆ.
ಡಮ್ಮಿ ಬಾಂಬ್ ಮಾದರಿಗೆ ಬೆಚ್ಚಿ ಬಿದ್ದ ಕುಮಟಾ ಜನತೆ..
ಕರುಳು ಕಿವುಚುವ ಶಹೀದ್ ಸರ್ದಾರ್ ಉದಮ್; ನೋಡದೇ ಇದ್ದರೇ ಖಂಡಿತಾ ಮಕ್ಕಳೊಂದಿಗೆ ನೋಡಿ:








