ಪುನೀತ್ ರಾಜ್ ಕುಮಾರ್ ಪುತ್ರಿ ದೆಹಲಿಗೆ ಆಗಮನ – 4.15 ಕ್ಕೆ ಬೆಂಗಳೂರು ತಲುಪಲಿರುವ ಧೃತಿ
ಪುನೀತ್ ಅವರ ಮೊದಲ ಪುತ್ರಿ ಧೃತಿ ಭಾರತಕ್ಕೆ ಆಗಮಿಸಿದ್ದಾರೆ. ನ್ಯೂಯಾರ್ಕ್ ನಿಂದ ದೆಹಲಿಗೆ ಬಂದಿಳಿದಿದ್ದಾರೆ. ಸಂಜೆ 4 .15ರ ವೇಳೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅದಾದ ನಂತರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತಿಮಯಾತ್ರೆ ಆರಂಭವಾಗಲಿದೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಧೃತಿ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ. ದೆಹಲಿಯಿಂದ 1.30 ವಿಮಾನವನ್ನ ಏರಿ ಬೆಂಗಳೂರಿನತ್ತ ಹೊರಡಲಿದ್ದಾರೆ.
ಇಂದೇ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಪುನೀತ್ ರಾಜ್ ಕುಮಾರ್ ಅವರ ಮೊದಲನೇ ಪುತ್ರಿ ಆಗಮನದ ಸಮಯ ನೋಡಿಕೊಂಡು ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಅಂತ್ಯಕ್ರಿಯೆ ಹಾಗೂ ಅಂತಿಮ ಮೆರವಣಿಗಾಗಿ ಸಕಲ ಸಿದ್ಧತೆಗಳನ್ನ ನಡೆಸಿಕೊಳ್ಳಲಾಗ್ತಿದೆ. ನ್ಯೂಯಾರ್ಕ್ ನಿಂದ ಪುನೀತ್ ರಾಜ್ ಕುಮಾರ್ ಪುತ್ರಿ ಆಗಮಿಸುತ್ತಿದ್ದಾರೆ.
ಅಂತ್ಯಕಕ್ರಿಯೆಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರಿಗಷ್ಟೇ ಅವಕಾಶ ನೀಡಲಾಗಿದೆ. ಅಭಿಮಾನಿಗಳಿಗಿಲ್ಲ ಅವಕಾಶ ಕಲ್ಪಿಸಿಕೊಡಲಾಗಿಲ್ಲ. ಅಭಿಮಾನಿಗಳು ಸಹಕರಿಸಬೇಕೆಂದು ರಾಜ್ ಕುಟುಂಬ ಮನವಿ ಮಾಡಿಕೊಂಡಿದೆ. ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಇನ್ನೂ ಗೊರಗುಂಟೆಪಾಳ್ಯ, ಗೋವರ್ಧನ್ , ಕಂಠೀರವ ಸ್ಟೇಡಿಯಂ, ಕಾರ್ಪರೇಷನ್ ಮಾರ್ಗ ಮೂಲಕ ಮೆರವಣಿಗೆ ಮಾಡಲಾಗುತ್ತದೆ. ಪುನೀತ್ ಅಂತಿಮ ದರ್ಶನಕ್ಕೆ ತೆಲುಗು ಸ್ಟಾರ್ ಗಳು ಸಹ ಆಗಮಿಸಿದ್ದಾರೆ.
ಕಾಣದಂತೆ ಮಾಯವಾದ… “ಭಕ್ತ ಪ್ರಹ್ಲಾದ” : ಭಾವುಕರಾಗಿ ಟ್ವೀಟ್ ಮಾಡಿದ ಜಗ್ಗೇಶ್








