INDvsNZ ವಿಶ್ವಕಪ್ ಸಮರ ಮಾಡು ಇಲ್ಲವೆ ಮಡಿ ಪಂದ್ಯ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ – 20 ವಿಶ್ವಕಪ್ ಸಮರ ಎರಡು ತಂಡಗಳಿಗೂ ನಿರ್ಣಾಯಕ ಎನಿಸಿಕೊಂಡಿದೆ. ಇಂದು ಗೆದ್ದವರಿಗೆ ಸೆಮಿಫೈನಲ್ ತಲುಪುವ ಅವಕಾಶವಿದ್ದರೆ, ಸೋತವರಿಗೆ ಈ ಹಾದಿ ಇನ್ನಷ್ಟು ಕಠಿಣವೆನಿಸಿದೆ.
ಪಾಕಿಸ್ತಾನದ ಪಂದ್ಯದಲ್ಲಿ ಮಾಡಿದ ಎಡವಟ್ಟುಗಳನ್ನ ಸರಿಪಡಿಸಿಕೊಂಡು ಭಾರತ ಈ ಪಂದ್ಯವನ್ನ ಗೆದ್ದರೆ ಮಾತ್ರ ಸೆಮಿಫೈನಲ್ ನ ಕನಸು ಜೀವಂತವಾಗಲಿದೆ. ಇದೇ ಪರಿಸ್ಥಿತಿಯಲ್ಲಿ ನ್ಯೂಜಿಲ್ಯಾಂಡ್ ಸಹ ಇದೆ. ಎರಡು ತಂಡಗಳಿಗೆ ಇದು ಮಾಡು ಇಲ್ಲವೆ ಮಡಿ ಎನ್ನುವಂತಹ ಹೋರಾಟ.
ಪುಟಿದೇಳುವ ವಿಶ್ವಾಸದಲ್ಲಿ ಕೋಹ್ಲಿ ಪಡೆ
ಭಾರತ ತಂಡ ಕಂಬ್ಯಾಕ್ ಮಾಡುವುದಕ್ಕೆ ಹೆಸರುವಾಸಿ. ಪಾಕ್ ಪಂದ್ಯದ ಬ್ಯಾಟಿಂಗ್ ಮತ್ತು ಬೌಲಿಂಗ್ ವೈಪಲ್ಯಗಳನ್ನ ಬದಿಗೆ ಸರಿಸಿ ಲಯ ಕಂಡುಕೊಳ್ಳಬೇಕಿದೆ. ರಾಹುಲ್, ರೋಹಿತ್ ಭದ್ರ ಬುನಾದಿಯನ್ನ ಆರಂಭದಲ್ಲಿ ಹಾಕಬೇಕಿದೆ. ಬೌಲರ್ ಗಳು ಲಯಕ್ಕೆ ಮರಳಬೇಕಿದೆ. ಹಾರ್ದಿಕ್ ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕರೆ, ಹೋರಾಟ ತೋರಿಸಿದರೆ ಮಾತ್ರ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗಲಿದೆ.
ಪ್ರತಿಷ್ಟಿತ ಟೂರ್ನಿಗಳಲ್ಲಿ ಕಾಡುವ ಕಿವೀಸ್
ನ್ಯೂಜಿಲೆಂಡ್ ತಂಡ ಐಸಿಸಿ ನಡೆಸುವ ಪ್ರತಿಷ್ಟಿತ ಟೂರ್ನಿಗಳಲ್ಲಿ ಭಾರತ ತಂಡಕ್ಕೆ ಮಗ್ಗಲ ಮುಳ್ಳಾಗಿ ಕಾಡುತ್ತಿದೆ.. ಆ ಸೊಲಿನ ಸರಪಣಿಯನ್ನ ಈ ಪಂದ್ಯದ ಮುಖಾಂತರ ತುಂಡರಿಸಬೇಕಿದೆ.
ಸಾಂಭಾವ್ಯ ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ವರುಣ್ ಚಕ್ರವರ್ತಿ, ಶಾರ್ದೂಲ್ ಠಾಕೂರ್, ಆರ್. ಅಶ್ವಿನ್, ಇಶಾನ್ ಕಿಶನ್, ರಾಹುಲ್ ಚಾಹರ್.
ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಡೆರಿಲ್ ಮಿಚೆಲ್, ಡೆವೊನ್ ಕಾನ್ವೆ, ಟಿಮ್ ಸೀಫರ್ಟ್ (ವಿಕೆಟ್‌ಕೀಪರ್), ಜೇಮ್ಸ್ ನಿಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಈಶ ಸೋಧಿ, ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಮಾರ್ಕ್ ಚಾಪಮನ್, ಆಯಡಂ ಮಿಲ್ನೆ, ಕೈಲ್ ಜೆಮಿಸನ್, ಟಾಡ್ ಎಸಲ್.
ಪಂದ್ಯ ಆರಂಭ: ರಾತ್ರಿ 7.30








