ರೈಲಿಗೆ ಚಾಕು , ಗನ್ ಜೊತೆಗೆ ನುಗ್ಗಿ ದಾಳಿ ನಡೆಸಿ, ಬೆಂಕಿ ಹಚ್ಚಿದ ವ್ಯಕ್ತಿ – 8 ಮಂದಿಗೆ ಗಾಯ
ಜಪಾನ್ : ಜಪಾನ್ ನ ರಾಜಧಾನಿ ಟೋಕಿಯೋದಲ್ಲಿ ವ್ಯಕ್ತಿಯೊಬ್ಬ ಗನ್ ಹಾಗೂ ಚಾಕು ಸಮೇತ ರೈಲಿಗೆ ನುಗ್ಗಿ ಜನರ ಮೇಲೆ ಮನ ಬಂದಂತೆ ದಾಳಿ ಮಾಡಿದ್ದು, ರೈಲಿಗೆ ಬೆಂಕಿ ಕೂಡ ಹಚ್ಚಿದ್ದಾನೆ. ಈ ಗಟನೆಯಲ್ಲಿ ಸುಮಾರು 8 ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಕೀಯೋ ಲೈನ್ ನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಧಿಡೀರನೆ ರೈಲಿಗೆ ಬೆಂಕಿ ಹಚ್ಚಿದ್ದಾನೆ. ಅಲ್ಲದೇ ಆರೋಪಿಯು ರೈಲಿನ ಸುತ್ತ ಲಿಕ್ವಿಡ್ ಅನ್ನು ಹಾಕಿದ್ದ ಎಂದು ವರದಿಗಳಿಂದ ತಿಳಿದುಬಂದಿದೆ. ಜನರು ಕೀಯೋ ಲೈನ್ ರೈಲಿನಿಂದ ತಪ್ಪಿಸಿಕೊಳ್ಳಲು ಕಿಟಕಿಗಳನ್ನು ಏರುತ್ತಿರುವ ದೃಶ್ಯಗಳು ವೈರಲ್ ಆಗ್ತಿವೆ..
https://twitter.com/i/status/1454793134513197056
ಆರೋಪಿಯು ಚಾಕು ಮತ್ತು ಬಂದೂಕಿನಿಂದ ಜನರ ಮೇಲೆ ದಾಳಿ ಮಾಡಿದ್ದು, 8 ಜನರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಆಕ್ರಮಣ ಮಾಡಿದವನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮುಕ್ತಾಯವಾದಂತೆಯೇ ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.
https://twitter.com/i/status/1454837095026024450
https://twitter.com/i/status/1454780046745481218







