ಬೆಲೆ ಇಳಿಕೆಯಿಂದ ರಾಜ್ಯಕ್ಕೆ 2100ಕೋಟಿ ರು. ನಷ್ಟ : ಸಿಎಂ
ಹುಬ್ಬಳ್ಳಿ : ಅಬಕಾರಿ ಸುಂಕ ಕಡಿತದಿಂದಾಗಿ ರಾಜ್ಯಕ್ಕೆ 2 ಸಾವಿರದ 100 ಕೋಟಿ ರೂಪಾಯಿ ಕೊರತೆ ಉಂಟಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ದೀಪಾವಳಿ ಶುಭಾಶಯ ಕೋರಿ, ಕೇಂದ್ರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಬೆನ್ನಲ್ಲೇ ಹಣಕಾಸು, ಗೃಹ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ, ರಾಜ್ಯದಲ್ಲೂ ದರ ಕಡಿತಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.
ಪರಿಷ್ಕøತ ದರ ಇಂದು ಸಂಜೆಯಿಂದ ಅನ್ವಯವಾಗಲಿದೆ. ಅಬಕಾರಿ ಸುಂಕ ಕಡಿತದಿಂದಾಗಿ ರಾಜ್ಯಕ್ಕೆ 2 ಸಾವಿರದ 100 ಕೋಟಿ ರೂಪಾಯಿ ಕೊರತೆ ಉಂಟಾಗಲಿದೆ ಎಂದು ತಿಳಿಸಿದರು.
ಮುಂಬರುವ ಜನವರಿ 26ರಿಂದ ಜನಸೇವಕ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿರುವ ಜನಸೇವಕ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಯೋಜಿಸಲಾಗಿದೆ.
ಈ ಸಂಬಂಧ ಸಿಬ್ಬಂದಿಗೆ ತಾಂತ್ರಿಕ ತರಬೇತಿ ನೀಡಬೇಕಿದೆ ಎಂದರು.
ಸರ್ಕಾರ 100 ದಿನ ಪೂರೈಸಿರುವ ಕುರಿತು ತೃಪ್ತಿ ಇದೆ. 100 ದಿನಗಳ ಭರವಸೆಯ ಹೆಜ್ಜೆ ಸರ್ಕಾರದ ಭವಿಷ್ಯದ ಮುನ್ಸೂಚನೆಯಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.









