ಸದ್ಯದಲ್ಲೆ ಕರ್ನಾಟಕದಲ್ಲಿ ಮತಾಂತರ ವಿರೋಧಿ ಕಾನೂನು – ಬೊಮ್ಮಾಯಿ.
ಕರ್ನಾಟಕ ಸರ್ಕಾರ ಸದ್ಯದಲ್ಲಿಯೇ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದ ಬೇರೆ ರಾಜ್ಯಗಳ ಕಾನೂನನ್ನು ಅಧ್ಯಯನ ಮಾಡಿ ಸದ್ಯದಲ್ಲಿಯೇ ಧರ್ಮ ಪರಿವರ್ತನೆ ವಿರೋಧಿ ಶಾಸನವನ್ನು ರಚಿಸಲಿದೆ ಬೊಮ್ಮಾಯಿಯವರು ತಿಳಿಸಿದರು.
ಧರ್ಮ ಪರಿವರ್ತನೆಗೆ ನಿಷೇಧ ಹೇರಬೇಕೆಂದು ಹಲವು ಮಠಾಧೀಶರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಅವರ ಜೊತೆ ನಡೆಸಿದ ಮಾತುಕತೆಯ ಬಗ್ಗೆ ಸುದ್ದಿಗಾರರಿಗೆ ಬಸವರಾಜ ಬೊಮ್ಮಾಯಿ ವಿವರಣೆ ನೀಡಿದರು.
ಈ ಹಿಂದೆ ಕ್ರಿಶ್ಚಿಯನ್ ಪಾದ್ರಿಗಳು ಮತಾಂತರ ಕಾನೂನು ತರದಂತೆ ಬೊಮ್ಮಾಯಿಯವರನ್ನ ಬೇಟಿಯಾಗಿ ಈ ಕಾನೂನು ತರದಂತೆ ಮನವಿ ಮಾಡಿದ್ದರು.







