ನಮಗೆಲ್ಲ ಚಳಿಗಾಲದ ಚಳಿಯನ್ನೇ ತಡೆಯೋಕಾಗಲ್ಲ, ಅಂತಹದರಲ್ಲಿ ಹಿಮಲಯನ್ನ ತಡೆಯಲು ಸಾಧ್ಯವೇ ಖಂಡಿತ ಸಾಧ್ಯವಿಲ್ಲ, ಆದರೆ ಇಲ್ಲೊಬ್ಬ ಅಘೋರಿ ದಟ್ಟ ಹಿಮದ ನಡುವೆಯೂ ಯಾವುದೇ ಉಡುಪು ಧರಿಸದೆ, ತನ್ನ ಶ್ವಾನದ ಜತೆ ಅಡ್ಡಾಡುತ್ತಿರುವುದು ಎಲ್ಲರ ಧಂಗು ಬಡಿಸಿದೆ.
ಹೌದು, ಮೈನಸ್ 45 ಡಿಗ್ರಿ ಸೆಲ್ಸಿಯಸ್ ಕೊರೆವ ಚಳಿಯಲ್ಲಿ ಅಘೋರಿ ಸಾಧು ನಾಯಿಯೊಡನೆ ಹಿಮಾಲಯದಲ್ಲಿ ಓಡಾಡುತ್ತಿರುವುದನ್ನ ಅಲ್ಲಿ ಗಸ್ತು ತಿರುಗುವ ಯೋಧರು ಸೆರೆ ಹಿಡಿದಿದ್ದಾರೆ. ಮೈ ಕೊರೆಯುವಂತಹ ಚಳಿಯಲ್ಲೂ ಯಾವುದೇ ಅಳುಕಿಲ್ಲದೆ ತಪಸ್ಸಿಗೆ ಕುಳಿತದ್ದನ್ನ ಕಂಡ ಸೈನಿಕರು ನಿಬ್ಬೆರಗಾಗಿದ್ದಾರೆ. ತಪ್ಪಸ್ಸಿನಿಂದ ಎದ್ದು ಯೋಧರ ಬಳಿ ಬರುತ್ತಾ ಜೈ ಶ್ರೀ ರಾಮ ಎಂದು ಘೋಷಣೆ ಕೂಗಿ ಯೋಧರನ್ನು ಆಶೀರ್ವದಿಸಿದ್ದಾನೆ. ಆ ಅಘೋರಿಯ ತಪ್ಪಸ್ಸಕ್ತಿಗೆ ಬೆರಗಾದ ಯೋಧರು, ಆ ಸಾಧುವಿನ ಚಲನವಲನಗಳನ್ನ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗಾ ಈ ವಿಡಿಯೋ ಸಕತ್ ವೈರಲ್ ಆಗಿದೆ.
https://www.facebook.com/saakshatv/videos/194504681664188/?modal=admin_todo_tour








