ಬೆಂಗಳೂರು : ಕೊರೊನಾ ಲಾಕ್ ಡೌನ್ ಎಲ್ಲರ ಬದುಕನ್ನು ಬದಲಿಸಿದೆ. ನಮ್ಮೆಲ್ಲಾ ಕೆಲಸಗಳೂ ಸ್ತಬ್ಧವಾಗುವಂತೆ ಮಾಡಿದೆ. ಅದರಲ್ಲೂ ಪ್ರಮುಖವಾಗಿ ಚಿತ್ರರಂಗ ಸಂಪೂರ್ಣ ನಿಂತ ನೀರಂತಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ನಟ-ನಟಿಯರು ಮನೆಯಲ್ಲೇ ಇರುವಂತಾಗಿದೆ.
https://www.instagram.com/p/B_2Q_vojgw7/?utm_source=ig_web_copy_link
ಈ ನಡುವೆ ಕಿಚ್ಚ ಸುದೀಪ್ ಮನೆಯಲ್ಲೇ ಫುಲ್ ವರ್ಕೌಟ್ ಮಾಡ್ತಿದ್ದಾರೆ. ಇಂದು ತಮ್ಮ ಇನ್ಸ್ ಟಾಗ್ರಾಂನಲ್ಲಿ ವರ್ಕೌಟ್ ಮಾಡ್ತಿರುವ ಕೆಲವು ಫೋಟೋಗಳನ್ನು ಸುದೀಪ್ ಶೇರ್ ಮಾಡಿದ್ದಾರೆ. ಪ್ರಯತ್ನಪಟ್ಟರೆ, ಇನ್ನಷ್ಟು ಸಾಧಿಸಬಹುದು ಅಂತ ಕ್ಯಾಪ್ಷನ್ ನೀಡಿದ್ದಾರೆ. ಸದ್ಯ ಕಿಚ್ಚನ ಈ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗ್ತಿದೆ. ಅಭಿಮಾನಿಗಳು ಕೂಡ ‘ಪೈಲ್ವಾನ್ ‘ನ ಖದರ್ ಗೆ ಫಿದಾ ಆಗಿದ್ದಾರೆ.
ಇನ್ನು ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಸಿನಿಮಾದಲ್ಲಿ ಮ್ಯಾಚೋ ಮ್ಯಾನ್ ಆಗಿ ಸುದೀಪ್ ಕಾಣಿಸಿಕೊಳ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಮ್ ನಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡ್ತಿದ್ದಾರೆ ಎನ್ನಲಾಗಿದೆ.








