ಉತ್ತರ ಕನ್ನಡ : ಭಾರಿ ಮಳೆಗೆ ಸಾವಿರಾರು ಎಕರೆ ಭತ್ತ ನೀರುಪಾಲು
ಉತ್ತರ ಕನ್ನಡ : ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆ ಸಾವಿರಾರು ಎಕರೆಗಳ ಬೆಳೆಯನ್ನು ನುಂಗಿ ಹಾಕಿದೆ.
ಭಾರಿ ಮಳೆಯಿಂದಾಗಿ ಸಾವಿರಾರು ಎಕರೆ ಭತ್ತ ನೀರಿನಲ್ಲಿ ಮುಳುಗಿದ್ದು, ಉಳಿದ ಸ್ವಲ್ಪ ಬೆಳೆಯನ್ನು ರೈತರು ಸಂಗ್ರಹಿಸುತ್ತಿದ್ದಾರೆ.
ರೇನೂಕಾ ಗೌಡ ಎಂಬ ರೈತ ತನ್ನ ನಾಲ್ಕು ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದರು.
ಒಂದು ವಾರದಿಂದ ಸುರಿದ ಮಳೆಯಿಂದಾಗಿ ಬೆಳೆ ಸಂಪೂರ್ಣ ಹಾಳಾಗಿದೆ.
ಇನ್ನು ಸ್ಥಳಕ್ಕೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ನಂದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿ ಶಿರಸಿ ಪೂರ್ವ ಭಾಗದಲ್ಲಿ ಭಾರಿ ಮಳೆಗೆ ನೂರಾರು ಎಕರೆ ಭತ್ತ ಹಾನಿಯಾಗಿದೆ.
ಜಂಟಿ ಸಮೀಕ್ಷೆಯ ನಂತರ ಪರಿಹಾರ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು









