ಹಾಸನದಲ್ಲಿ ಪುನೀತ್ ಅಭಿಮಾನಿ ಆತ್ಮಹತ್ಯೆ Puneeth saaksha tv
ಹಾಸನ : ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿ ಒಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ಡಾ.ರಾಜ್‍ಕುಮಾರ್ ಸಂಘದ ಜಿಲ್ಲಾ ಅಧ್ಯಕ್ಷರಾಗಿದ್ದ ದಿ.ಹಾ.ರಾ.ನಾಗರಾಜ್ ಅವರ ಕಿರಿಯ ಪುತ್ರ ಮಯೂರ ನಾಗರಾಜ್ (34) ಎಂಬವರು ನೇಣಿಗೆ ಶರಣಾಗಿದ್ದಾರೆ.
ಮಯೂರ ನಾಗರಾಜ್ ಅಪ್ಪಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದರಂತೆ.
ಅಪ್ಪು ನಿಧನದಿಂದ ಬಹಳ ನೊಂದಿದ್ದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಊಟ ತಿಂಡಿ ಬಿಟ್ಟು ಅಪ್ಪು ಸಾವಿನ ಬಗ್ಗಯೇ ಮಾತನಾಡುತ್ತಿದ್ದರಂತೆ.
ಈ ಮಧ್ಯೆ ಬುಧವಾರ ತಮ್ಮ ಮನೆಯಲ್ಲಿ ಮಯೂರ ನಾಗರಾಜ್ ನೇಣು ಬಿಗಿದುಕೊಂಡಿದ್ದಾರೆ.
ಇದನ್ನು ಗಮಸಿದ ಮನೆಯವರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಆದ್ರೆ ಆಸ್ಪತ್ರೆಗೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.
ಇನ್ನು ಈ ಸಂಬಂಧ ನಗರದ ಪೆನ್ಸನ್ ಮೊಹಲ್ಲಾ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.









