ವರದಕ್ಷಿಣೆಗೆಂದು ತೆಗೆದಿಟ್ಟಿದ್ದ ಹಣದಲ್ಲಿ ಹಾಸ್ಟೆಲ್ ನಿರ್ಮಿಸಿದ ವಧು
ತನ್ನ ಮದುವೆಗೆಂದು ತೆಗೆದಿಟ್ಟದ್ದ ವರದಕ್ಷಿಣೆ ಹಣವನ್ನ ಹೆಣ್ಣು ಮಕ್ಕಳ ಶಿಕ್ಷಣಕ್ಕೆಂದು ಹಾಸ್ಟೆಲ್ ನಿರ್ಮಾಣಕ್ಕೆ ಕೊಟ್ಟು ಮಾದರಿಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ವಧು ಮತ್ತು ಅವರ ಕುಟುಂಬಕ್ಕೆ ಎಲ್ಲೆಡೆಯಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ರಾಜಸ್ಥಾನದ ಭಾರ್ಮರ್ ನಗರದ ಕಿಶೋರ್ ಸಿಂಗ್ ಕಾನೋಡ್ ಅವರ ಪುತ್ರಿ ಅಂಜಲಿ ಕನ್ವರ್ ಅವರು ಇತ್ತೀಚಿಗೆ ಪ್ರವೀಣ್ ಸಿಂಗ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಸಮಯದಲ್ಲಿ ಭಾರಿ ಮೊತ್ತದ ಹಣವನ್ನ ವಧುವಿಗೆ ವರದಕ್ಷಿಣೆ ರೂಪದಲ್ಲಿ ನೀಡಲು ತಂದೆ ನಿರ್ಧರಿಸಿದ್ದರು. ಆದರೆ ಈ ಹಣವನ್ನ ಬಾಲಕೀಯರ ಹಾಸ್ಟೆಲ್ ನಿರ್ಮಾಣಕ್ಕೆ ಕೊಡುವಂತೆ ಅಂಜಲಿ ತಂದೆಯನ್ನ ವಿನಂತಿಸಿಕೊಂಡಿದ್ದರು. ಮಗಳ ಮಾತಿಗೆ ಓಗೊಟ್ಟ ತಂದೆ, ಅವಳ ನಿರ್ಧಾರಕ್ಕೆ ಎಸ್ ಅಂದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 68 ರಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಈಗಾಗಲೆ 1 ಕೋಟಿಯನ್ನ ಅನುದಾನವಾಗಿ ಈಗಾಗಲೆ ಘೋಷಿಸಿದ್ದಾರೆ. ಮಠಾಧಿಶರಾಗಿರುವ ಪ್ರತಾಪ್ ಪುರಿ ಅವರು ಈಗಾಗಲೆ ಹಾಸ್ಟೆಲ್ ನಿರ್ಮಾಣದಲ್ಲಿ ತೊಡಗಿಕೊಂಡಿದ್ದು ಅದಕ್ಕಾಗಿ ಈ ಹಣವನ್ನ ಬಳಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.








