ಬೆಂಗಳೂರಿನಲ್ಲಿ ನಿಗೂಢ ಶಬ್ದ – ಭೂಕಂಪವಲ್ಲ ಸಚಿವ ಆರ್ ಅಶೋಕ್ ಸ್ಪಷ್ಟನೆ
ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆ 11.50 ರಿಂದ 12.15 ಮಧ್ಯದಲ್ಲಿ ದೊಡ್ಡದಾದ ಶಬ್ದ ಬೆಂಗಳೂರಿನ ಕೆಲವು ನಗರಗಳಲ್ಲಿ ಕೇಳಿಬಂದಿತ್ತು. ಇದು ಭೂಕಂಪದ ಮುನ್ಸೂಸೂಚನೆ ಅಲ್ಲ ಅಂತ ಸಚಿವ ಆರ್ ಅಶೋಕ್ ಸ್ಪಷ್ಟಿಕರಿಸಿದ್ದಾರೆ.
ಬೆಂಗಳೂರಿನಲ್ಲಿ ಕೇಳಿ ಬಂದಿರುವ ದೊಡ್ಡ ಪ್ರಮಾಣದ ಶಬ್ದದ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
“ಸ್ಥಳೀಯ ನಿವಾಸಿಗಳಿಂದ ಕಂಪನಗಳಿಗೆ ಸಂಬಂಧಿಸಿದ ಧ್ವನಿಯ ವರದಿಗಳನ್ನು ಬೆಂಗಳೂರಿನ ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ ಮತ್ತು ಕಗ್ಗಲಿಪುರದಿಂದ ಇಂದು ದಿನಾಂಕ 26.11.2021 ರಂದು ಬೆಳಿಗ್ಗೆ 11.50 ರಿಂದ 12.15 ರ ನಡುವೆ ವರದಿಯಾಗಿತ್ತು. ಯಾವುದೇ ಭೂಕಂಪನ ಸಹಿಗಳು/ಸಂಭವನೀಯ ಭೂಕಂಪದ ಸಂಕೇತಗಳು ವರದಿಯಾಗಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕರು ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
https://twitter.com/RAshokaBJP/status/1464182404550066177?ref_src=twsrc%5Etfw%7Ctwcamp%5Etweetembed%7Ctwterm%5E1464182404550066177%7Ctwgr%5E%7Ctwcon%5Es1_&ref_url=https%3A%2F%2Fwww.etvbharat.com%2Fkannada%2Fkarnataka%2Fcity%2Fbengaluru%2Fminister-r-ashok-statement-on-loud-sound-in-bangalore%2Fka20211126172430696








