ಕಳೆದ 24 ಗಂಟೆಗಳಲ್ಲಿ 8,318 ಹೊಸ ಪ್ರಕರಣಗಳು ಪತ್ತೆ..!
ನವದೆಹಲಿ : ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 8,318 covid19 ಪ್ರಕರಣಗಳು ಪತ್ತೆಯಾಗಿವೆ.
465 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.ಕಳೆದ 24 ಗಂಟೆಗಳಲ್ಲಿ 8,318 ಹೊಸ ಪ್ರಕರಣಗಳು ಪತ್ತೆ..!
ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,45,63,749 ಕ್ಕೆ ತಲುಪಿದೆ.
ಸೋಂಕಿನಿಂದ ಮೃತರಾದವರ ಸಂಖ್ಯೆ 4,67,933 ಕ್ಕೆ ತಲುಪಿದೆ.
10,967 ಕೋವಿಡ್ ನಿಂದ ಗುಣಮುಖರಾಗಿದ್ದಾರೆ.
ಒಟ್ಟು ಗುಣಮುಖರ ಸಂಖ್ಯೆ 3,39,88,797 ಕ್ಕೆ ತಲುಪಿದೆ.
ಇನ್ನು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,07,019 ಕ್ಕೆ ಇಳಿಕೆಯಾಗಿದೆ. ಇದು 538 ದಿನಗಳಲ್ಲೇ ಕಡಿಮೆ..
ಭಾರತದಲ್ಲಿ ಒಟ್ಟು 121.06 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.








