ಕೆ.ಎಚ್.ಮುನಿಯಪ್ಪ ಕಾಂಗ್ರೆಸ್ ಬಿಡಬೇಕಾಗಿತ್ತು : ಕುಮಾರಸ್ವಾಮಿ
ಕೋಲಾರ : ಕೆ.ಎಚ್.ಮುನಿಯಪ್ಪಗೆ ಆದ ಅವಮಾನದಿಂದ ಕಾಂಗ್ರೆಸ್ ಬಿಡಬೇಕಾಗಿತ್ತು.
ಕೆ.ಎಚ್.ಮುನಿಯಪ್ಪ ಪ್ರಾಮಾಣಿಕ ವ್ಯಕ್ತಿ, ಪಕ್ಷ ನಿಷ್ಠೆಯ ವ್ಯಕ್ತಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕೆ.ಹೆಚ್ ಮುನಿಯಪ್ಪ ಜೆಡಿಎಸ್ ಸಂಪರ್ಕದಲ್ಲಿದ್ದಾರೆ ಎಂಬ ವದಂತಿ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ನ ಕೆ.ಎಚ್‍ಮುನಿಯಪ್ಪ ವಿರುದ್ದವಾಗಿ ಲಘುವಾಗಿ ಮಾತನಾಡುವುದಿಲ್ಲ.
ಜೆಡಿಎಸ್ ಸಂಪರ್ಕದಲ್ಲಿ ಕೆ.ಎಚ್.ಮುನಿಯಪ್ಪ ಇಲ್ಲ. ಜೆಡಿಎಸ್ ಪಕ್ಷದಲ್ಲಿ ಮೇವು ಕಡಿಮೆಯಾಗಿದ್ದರಿಂದ ನಾಯಕರುಗಳು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಕೊರೊನಾ ದೊಡ್ಡ ಮಟ್ಟದಲ್ಲಿ ಹರಡದಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು.
ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದು ಇನ್ನಾದ್ರೂ ನಿಲ್ಲಲ್ಲಿ. ಪಕ್ಷದ ಉಳಿವಿಗೆ ಕುಟುಂಬದವರ ಹುಳುಮೆ ಮುಖ್ಯ.
ಕಾಂಗ್ರೆಸ್, ಬಿಜೆಪಿ ಪಕ್ಷದವರು ಕುಟುಂಬ ರಾಜಕಾರಣ ಮಾಡಿದ್ದಾರೆ. ಪಸೆರ್ಂಟೆಜ್ ಗೆ ತನಿಖೆ ಮಾಡಲು ಸದನ ಸಮಿತಿ ಮಾಡಿದರೆ ಪ್ರಯೋಜನವಿಲ್ಲ.
ರಾಜ್ಯ ಸರ್ಕಾರದ ಸಿಸ್ಟಮ್ ಬದಲಾವಣೆ ಮಾಡಲು ಸರ್ಕಾರಗಳಿಗೆ ಬದ್ದತೆ ಬೇಕು ಎಂದು ಹೇಳಿದ್ದಾರೆ.









