ಉತ್ತರಪ್ರದೇಶ : ಅಜ್ಜಿಯ ಜೊತೆಗೆ ಮದುವೆ ತೆರಳಿದ್ದ ಅಪ್ರಾಪ್ತ ಬಾಲಕಿಯ ಮೇಲೆ 27 ವರ್ಷದ ಕಾಮುಕನೋರ್ವ ಅತ್ಯಾಚಾರವೆಸಗಿರುವ ಹೇಯ ಕೃತ್ಯ ಅಪರಾಧಗಳ ಆಗರಾವಗ್ತಿರುವ ಉತ್ತರಪ್ರದೇಶದಲ್ಲಿ ನಡೆದಿದೆ..
ವಾರಣಾಸಿಯ ಸಿಗ್ರಾದ ಲಲ್ಲಾಪುರದಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದ್ದು, ಆರೋಪಿಯನ್ನ ನಿಸಾರ್ ಎಂದು ಗುರುತಿಸಲಾಗಿದೆ. 6 ವರ್ಷದ ಬಾಲಕಿ ಮದುವೆಗೆಂದು ತನ್ನ ಅಜ್ಜಿಯ ಜೊತೆ ಹೋಗಿದ್ದಳು. ಈ ವೇಳೆ ನಿಸ್ಸಾರ್ ಆ ಬಾಲಕಿಯನ್ನು ತನ್ನೊಂದಿಗೆ ಕೆರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಭಾನುವಾರ ಈ ಘಟನೆ ನಡೆದಿದ್ದು, ಬಾಲಕಿಯ ಆರೋಗ್ಯದಲ್ಲಿ ಏರುಪೇರಾದಾಗ ಆಕೆಯನ್ನ ಮನೆಯವರು ಸರಿಯಾಗಿ ವಿಚಾರಿಸಿದಾಗ ನಡೆದ ಘಟನೆಯನ್ನ ತಿಳಿಸಿದ್ದಾಳೆ..
ಈ ಬಗ್ಗೆ ಸಂತ್ರಸ್ತೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಿಸಾರ್ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಜಾರಿಯಲ್ಲಿದೆ..