ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಲು 1 ತಿಂಗಳು ಈ ರೀತಿಯಾಗಿ ಡಯೇಟ್ ಪ್ಲಾನ್ ಅನುಸರಿಸಿ..!
ಅದೆಷ್ಟೋ ಜನರು ದಿನ ಬೆಳಗಾದ್ರೆ ತೂಕ ಕಳೆದುಕೊಳ್ಬೇಕು ಅನ್ನೋ ಚಿಂತೆಯಲ್ಲೇ ಇರುತ್ತಾರೆ.. ಡಯೇಟ್ ಮಾಡೋಣ ಅಂತ ಪ್ಲಾನಿಂಗ್ ಕೂಡ ಮಾಡುತ್ತಾರೆ.. ಯೋಗ ಮಾಡ್ಬೇಕು , ವರ್ಕೌಟ್ ಮಾಡ್ಬೇಕು ಅನ್ನೋ ಆಲೋಚನೆ ಇದ್ರೂ ಕೆಲಸದ ಒತ್ತಡವೋ ಮತ್ಯಾವುದೋ ಒತ್ತಡದಿಂದ ಅದು ಆಗೋದಿಲ್ಲ..
ಸಹಜವಾಗಿ ಕೆಲಸದಲ್ಲಿರೋರಿಗೆ ಉತ್ತಮ ಲೈಫ್ ಸ್ಟೈಲ್ ಕೂಡ ಅನುಸರಿಸೋದಕ್ಕೆ ಆಗೋದಿಲ್ಲ. ಒತ್ತಡದಿಂದ ಜೀವನ ಶೈಲಿ ಕೆಟ್ಟದಾದಂತೆಲ್ಲಾ ಆರೋಗ್ಯದಲ್ಲಿ ಏರು ಪೇರು , ಬೇಡವಾದ ಬೊಜ್ಜು ದೇಹದಲ್ಲಿ ಶೇಖರಣೆಯಾಗುತ್ತಾ ಹೋಗುತ್ತದೆ.. ಆದ್ರೆ ಒತ್ತಡದ ಸಮಯದಲ್ಲೂ ಕೂಡ ಕೆಲ ಸಲಹೆಗಳನ್ನ ನೀವು ಅನುಸರಿಸಿದ್ರೆ ಖಂಡಿತ ತೂಕ ಕಳೆದುಕೊಳ್ಳಬಹುದು.. ಆದ್ರೆ ಆರೋಗ್ಯಕರ ರೀತಿಯಲ್ಲಿ..
ಮೊದಲನೇಯದ್ದಾಗಿ ಯಾವುದೇ ಕಾರಣಕ್ಕೂ ಒಂದೂ ಹೊತ್ತಿನ ಊಟವನ್ನ ಬಿಡಬಾರದು : ಒಂದು ದಿನಕ್ಕೆ ಮೂರು ಹೊತ್ತಿನ ಊಟವನ್ನೂ ಮಾಡುವುದು ಅತ್ಯಗತ್ಯ.. ಸರಿಯಾದ ಪ್ರಮಾಣದಲ್ಲಿ ಸರಿಯಾದ ಆಹಾರ ಅನುಸರಿಸುವುದು ಅಗತ್ಯ ಅಷ್ಟೇ.. ಇಲ್ಲದೇ ಹೋದಲ್ಲಿ ಗ್ಯಾಸ್ಟಿಕ್ ನಂತಹ ಸಮಸ್ಯೆಗಳ ಜೊತೆಗೆ , ಮತ್ತೆ ಇನ್ನಷ್ಟು ದೇಹಾಕಾರ ಬಿಗಡಾಯಿಸುವ ಭೀತಿ ಇರುತ್ತದೆ..
ಸಕ್ಕರೆ ತೀರಾ ಕಡಿಮೆ ಮಾಡಬೇಕು – ಆದ್ರೆ ಅದಕ್ಕೆ ಪರ್ಯಾಯವಾಗಿ ಬೇಕಿದ್ರೆ ನಿಯಮಿತವಾಗಿ ಶುದ್ಧ ಜೇನುತುಪ್ಪ ಬಳಕೆ ಮಾಡಬಹುದು.. ಇಲ್ಲ ಜ್ಯೂಸ್ ಗಳಿಗೆ ಖರ್ಜೂರವನ್ನ ಹಾಕಿಕೊಳ್ಳಬಹುದು. ತಂಪಿನ ಬೀಜಗಳನ್ನ ಜ್ಯೂಸ್ ಗಳು , ನಿಂಬೆ ಹಣ್ಣಿನ ರಸದ ಜೊತೆಗೆ ದಿನಕ್ಕೆ ಒಮ್ಮೆಯಾದ್ರೂ ಕುಡಿಯುವುದು ಉತ್ತಮ . ಚೀಸ್ , ಚಕೋಲೇಟ್ಸ್ , ಡೀಪ್ ಫ್ರೈಡ್ ಎಣ್ಣೆ ಪದಾರ್ಥಗಳು, ಕೊಬ್ಬಿನ ಪದಾರ್ಥಗಳು , ಪಿಜ್ಜಾ ಬರ್ಗರ್ ನಿಂದ ಸಾಧ್ಯವಿದ್ದಷ್ಟು ದೂರವೇ ಇರಿ.. ತಂಪು ಪಾನೀಯಗಳು ಅಂದ್ರೆ ಮನೆಯಲ್ಲೇ ಮಾಡಿದ ಫ್ರೆಶ್ ಹಣ್ಣಿನ ಜ್ಯೂಸ್ ಸಕ್ಕರೆ ಇಲ್ಲದೇ ಅಥವ ಎಳನೀರು , ಸೋಡಾಗಳನ್ನ ಕುಡಿಯಿರಿ.
ಸರಿಯಾದ ನಿದ್ದೆಯಾಗಲೇಬೇಕು.. ( 7- 8 ಗಂಟೆ)
ಕೆಲವರಿಗೆ ನಾನಾ ಆರೋಗ್ಯ ಸಮಸ್ಯೆಗಳು ಇರುತ್ತವೆ.. ಅಂತವರು ವೈದ್ಯರ ಬಳಿ ಸಲಹೆ ಪಡೆಯಬೇಕು..
ಡಯೇಟ್ ಪ್ಲಾನ್ – 1 ತಿಂಗಳು ಶ್ರದ್ಧೆಯಿಂದ ಯಾವುದೇ ಸ್ಟೆಪ್ ಅನ್ನ ಸ್ಕಿಪ್ ಮಾಡದೇ ಫಾಲೋ ಮಾಡಿದ್ರೆ 100 % ನೀವು ಉತ್ತಮ ರಿಸಲ್ಟ್ ಪಡೆಯುವಿರಿ..
ಸುಮಾರು 8 ಗಂಟೆ ನಿದ್ರೆ ಮಾಡಬೇಕು.. ಆಗುವುದೇ ಇಲ್ಲ ಅನ್ನೋ ಸಂದರ್ಭದಲ್ಲಿ ಕನಿಷ್ಠ 7 ಅಥವ 6 ಗಂಟೆಯಾದ್ರೂ ನಿದ್ರೆ ಮಾಡಲೇಬೇಕು..
ಅನ್ನ , ಅಕ್ಕಿಯಿಂದ ತಯಾರಿಸಿದ ಖಾದ್ಯ ಆದಷ್ಟು ಕಡಿಮೆ ಮಾಡಿ.. ಆದ್ರೆ ಅನ್ನನ್ನ ಸಂಪೂರ್ಣವಾಗಿಯೂ ಬಿಟ್ಟು ಬಿಡಬಾರದು..
ವಾರದಲ್ಲಿ ಕನಿಷ್ಠ 3 ಬಾರಿ ಗರಿಷ್ಠ 4 ಬಾರಿ ಲೈಟ್ ಆಗಿ ಅನ್ನ ಸೇವನೆ ಮಾಡಿ..
ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯಿರಿ… ನೀರು ಕುಡಿದಷ್ಟೂ ನೀವು ಪೂರ್ಣರಾಗಿಯೂ ಇರುತ್ತೀರಾ.. ಆರೋಗ್ಯವೂ ಬಹಳ ಚೆನ್ನಾಗಿರುತ್ತದೆ…
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಜೀರಿಗೆ ನೀರನ್ನ ಕುಡಿಯಿರಿ.. 2- 3 ಸ್ಪೂನ್ ಜೀರಿಗೆಯನ್ನ 2 ದೊಡ್ಡ ಲೋಟದ ತುಂಬ ನೀರು ಹಾಕಿ ಚೆನ್ನಾಗಿ ಕುದಿಸಿ.. ಅದು ಅರ್ಧಕ್ಕೆ ಬಂದ ನಂತರ ಲೋಟಕ್ಕೆ ತೆಗೆದು ಅದಕ್ಕೆ ಅರ್ಧ ನಿಂಬೆ ಹಣ್ಣಿನ ರಸ ಹಾಗೂ ಜೇನು ತುಪ್ಪ ಬೆರೆಸಿ ಬಿಸಿಬಿಸಿಯಿದ್ದಾಗಲೇ ಕುಡಿಯಿರಿ..
ನಂತರ ಬ್ರೇಕ್ ಫಾಸ್ಟ್ ಗೆ ಕನಿಷ್ಠ ಅರ್ಧ ಗಂಟೆಯಾದ್ರೂ ಗ್ಯಾಪ್ ತೆಗೆದುಕೊಳ್ಳಿ ಈ ಮಧ್ಯ ಏನನ್ನೂ ಸೇವನೆ ಮಾಡಬಾರದು.. ಈ ಮಧ್ಯ ಡ್ಯಾನ್ಸ್ , ಯೋಗ , ಜಾಗಿಂಗ್ , ವಾಕಿಂಗ್ ಈ ರೀತಿ ಏನಾದ್ರೂ ವ್ಯಾಯಾಮವನ್ನೂ ಮಾಡಿದ್ರೂ ಇನ್ನೂ ಉತ್ತಮ..
ಜೀರಿಗೆಯನ್ನ ತಿಂದ್ರೆ ಕೆಲವರಿಗೆ ಬೇರೆ ಪರೀತಿಯಾದ ಸಮಸ್ಯೆಗಳು ಆಗುತ್ತೆ.. ಆಗ ನಿಂಬೆ ಹಣ್ಣನ್ನ ಬಿಸಿ ಬಿಸಿ ನೀರಿನ ಜೊತೆಗೆ ಬೆರೆಸಿ ಸೇವಿಸಿ..
ಸರಿಯಾಗಿ 8 ಅಥವ 8.30 ಒಳಗೆ ಬ್ರೇಕ್ ಫಾಸ್ಟ್ ಮಾಡಬೇಕು.. : ಬ್ರೇಕ್ ಫಾಸ್ಟ್ ಒದಿನವಿಡೀ ನಮಗೆ ಶಕ್ತಿ ಕೊಡುತ್ತೆ ಹೀಗಾಗಿ ಅದನ್ನ ಸ್ಕಿಪ್ ಮಾಡಲೇ ಬಾರದು..
5 ರೀತಿಯ ಬ್ರೇಕ್ ಫಾಸ್ಟ್
ನಾಷ್ಟಕ್ಕೆ 1 ಬಾಳೆ ಹಣ್ಣು ಜೊತೆಗೆ ಸ್ವಲ್ಪ ಇತರೇ ಹಣ್ಣುಗಳನ್ನ ಒಂದು ಬಟ್ಟಲಷ್ಟು ಸೇವನೆ ಮಾಡಬೇಕು..
ಇಲ್ಲದೇ ಹೋದ್ರೆ ಮನೆಯಲ್ಲೇ ತಯಾರಿಸಿದ ಮೊಸರಿನ ಜೊತೆಗೆ ದಾಳಿಂಬೆ ಕರಿದ ಕರಿಬೇವಿನ ಸೊಪ್ಪು , ದ್ರಾಕ್ಷಿ ಸೇರಿಸಿ 1 ಬಟ್ಟಲು ಸೇವಿಸಬಹುದು.. ಲೋಪ ಬಿಪಿ ಸಮಸ್ಯೆ ಇದ್ರೆ ಉಪ್ಪು ಸೇರಿಸಿಕೊಳ್ಳಿ,.. ಇಲ್ಲದೇ ಹೋದ್ರೆ ಉಪ್ಪನ್ನೂ ಕೂಡ ಸ್ಕಿಪ್ ಮಾಡುವುದು ಉತ್ತಮ ..
ಇಲ್ಲದೇ ಇದ್ದಲ್ಲಿ – ರಾಗಿಹಿಟ್ಟು , ಗೋದಿ ಹಿಟ್ಟು , ಸಜ್ಜೆ ಹಿಟ್ಟು, ಜೋಳದ ಹಿಟ್ಟು ಮಿಶ್ರಿತ ಹಿಟ್ಟಿನಿಂದ ರೊಟ್ಟಿ ಮಾಡಿಕೊಂಡು ಅದಕ್ಕೆ ತುಪ್ಪ ಸವರಿ ಚಿನ್ನಬೇಕು. ಕೇವಲ 2 ರೊಟ್ಟಿ ತಿನ್ನಬೇಕು.. ಆದ್ರೆ ಎಣ್ಣೆ ಅಲ್ಲ ತುಪ್ಪ ಸವರಿ.. ರೊಟ್ಟಿಗೆ ಟೊಮ್ಯಾಟೋ , ಈರುಳ್ಳಿ ಇನ್ನೂ ಕೆಲ ನಿಮ್ಮಿಷ್ಟದ ತರಕಾರಿಯನ್ನೂ ಹಾಕಿ ತಯಾರಿಸಿಕೊಳ್ಳಬಹುದು..
ಇಲ್ಲದೇ ಇದ್ದಲ್ಲಿ ಗೋದಿ ಬ್ರೆಡ್ 2 ಪೀಸ್ ಲೈಪ್ ಆಗಿ ಎಣ್ಣೆ ಇಲ್ಲದೇ ರೋಸ್ಟ್ ಮಾಡಿ ಅದರ ಜೊತೆಗೆ ಒಂದು ಮೊಟ್ಟೆ ಆದ್ರೆ ಹಾಫ್ ಬಾಯಿಲ್ ಸೇವಿಸಬಹುದು.
ಇದ್ಯಾವುದೂ ಆಗದಿದ್ದಲ್ಲಿ ಓಟ್ಸ್ ಸೇವಿಸಿ ಆದ್ರೆ ಹಾಲಲ್ಲಿ ಅಲ್ಲ. ಬದಲಾಗಿ ನೀವೇ ಅದಕ್ಕೆ ತರಕಾರಿ , ಈರುಳ್ಳಿ , ಟೊಮ್ಯಾಟೋ ಮಿಕ್ಸ್ ಮಾಡಿ ತಯಾರಿಸಿಕೊಂಡು ಸೇವನೆ ಮಾಡಿ..
ಇಲ್ಲ ಸಕ್ಕರೆ ಇಲ್ಲದೇ ತಯಾರಿಸಲಾಗುವು ಹಣ್ಣಿನ ಸ್ಮೋತಿಗಳನ್ನೂ ಸೇವಿಸಬಹುದು.
ಬ್ರೇಕ್ ಫಾಸ್ಟ್ ಜೊತೆಗೆ ಕಾಫಿ ಸೇವಿಸಬಹುದು.. ಆದ್ರೆ ಶುಗರ್ ಲೆಸ್..
ಮಿಡ್ ಸ್ನಾಕ್
ನಂತರ ಮಧ್ಯಾಹ್ನ 11 ರಿಂದ 12 ಗಂಟೆಯ ಒಳಗಡೆ ಸ್ನಾಕ್ಸ್ ಸೇವಿಸಬೇಕು.. ಈ ಸ್ನಾಕ್ಸ್ ಅನ್ನ ಸ್ಕಿಪ್ ಮಾಡಬಾರದು.. ಇದ್ರಿಂದ ನೀವು ಮಧ್ಯಾಹ್ನದ ಊಟದವರೆಗೂ ಪೂರ್ಣರಾಗಿರುತ್ತೀರಿ ಹೆಚ್ಚು ಹಸಿವಾಗೋದಿಲ್ಲ., ಹೆಚ್ಚು ಹಸಿವಾಗದೇ ಇದ್ರೆ ತುಂಬಾ ಊಟ ಮಾಡುವುದಿಲ್ಲ..
ಸ್ನಾಕ್ಸ್ ಗೆ ಒಂದು ಫ್ರೆಶ್ ಆ ಸೀಸನ್ ನಲ್ಲಿ ಸಿಗುವ ಯಾವುದೇ ಹಣ್ಣನ್ನ ಬೇಕಿದ್ರು ತಿನ್ನಬಹುದು.. ಸೇಬು, ದಾಳಿಂಬೆ ಅಥವ ಕಿವಿ, ಕಿತ್ತಲೆ ಸೇರಿ ಯಾವುದಾದ್ರು ನಿಮ್ಮಿಷ್ಟದ ಹಣ್ಣು..
ಮಧ್ಯಾಹ್ನದ ಊಟ : 1 ರಿಂದ 2 ಗಂಟೆಯೊಳಗೇ ಊಟ ಮಾಡಲೇಬೇಕು.. ಮೊದಲನೇಯದ್ದಾಗಿ ನೀವು ಎಣ್ಣೆ ಇಲ್ಲದ ಚಪಾತಿ 2 ಅದಕ್ಕೆ ತರಕಾರಿ ಪಲ್ಯ ಕಡಿಮೆ ಎಣ್ಣೆಯಲ್ಲಿ ತಯಾರಿಸಿದ್ದು.. ಇಲ್ಲ ಅಂದ್ರೆ ಬೇಳೆಯ ತೊಕ್ಕಿನ ಜೊತೆಗೂ ಸೇವನೆ ಮಾಡಬಹುದು.. ಅದರ ಜೊತೆಗೆ ನಿಂಬೆಹಣ್ಣಿನ ರಸ ಸೇವಿಸಬಹುದು.. ಆದ್ರೆ ಸಕ್ಕರೆ ಇಲ್ಲದೇ ಲೈಟ್ ಆಗಿ ಉಪ್ಪಿನ ಜೊತೆ..
ಇಲ್ಲದೇ ಇದ್ರೆ ಗ್ರಿಲ್ಲಡ್ ಗೋದಿ ಬ್ರೆಡ್ ನ ಸ್ಯಾಂಡ್ವಿಚ್ ಸೇವಿಸಬಹುದು.. ಆದ್ರೆ ವಿತೌಟ್ ಚೀಸ್ , ಮಯೋನೀಸ್ , ಬೆಣ್ಣೆ .. ತರಕಾರಿ , ಸೌತೇಕಾಯಿ , ಈರುಳ್ಳಿ , ಟೊಮ್ಯಾಟೋ , ಕ್ಯಾರೋಟ್ ಜೊತೆಗೆ ಸೇವಿಸಬಹುದು.. ತರಕಾರಿಯನ್ನ ಬೇಯಿಸಿದ್ರೂ ಪರವಾಗಿಲ್ಲ.. ಇಲ್ಲ ಅಂದ್ರೆ ಬೇಳೆಯ ತೊಕ್ಕಿನ ಜೊತೆಗೂ ಸೇವನೆ ಮಾಡಬಹುದು ..
ಸಂಜೆಯ ಸ್ನಾಕ್ಸ್
ಒಂದು 5-6 ಗಂಟೆಯ ಅಂತರದಲ್ಲಿ ಸಂಜೆಯ ಸ್ನಾಕ್ಸ್ ಸೇವಿಸಿ.. ಅದಕ್ಕೆ ಉತ್ತಮ ಆಪ್ಷನ್ ಡ್ರೈ ಫ್ರೂಟ್ಸ್.. ಒಂದು ಮುಷ್ಠಿಯಷ್ಟು ಡ್ರೈ ಪ್ರೂಟ್ಸ್ , ಗೋಡಂಬಿ ಇರಬಹುದು, ದ್ರಾಕ್ಷಿ , ಬಾದಾಮಿ ಇರಬಹುದು, ಅಕ್ರೋಟ್ , ಇಲ್ಲ ಕಡಲೇಬೀಜ ಇರಬಹುದು ಒಂದು ಮುಷ್ಠಿಯಷ್ಟು ಮಾತ್ರ ಸೇವಿಸಬಹುದು..
ಜೊತೆಗೆ ಗ್ರೀನ್ ಟೀಯನ್ನ ಮಿಸ್ ಮಾಡ್ದೇ ಸೇವನೆ ಮಾಡಿ ನೋಡಿ 100 % ಉತ್ತಮ ಫಲಿತಾಂಶ ಸಿಗುತ್ತದೆ..
ಇಲ್ಲದೇ ಹೋದ್ರೆ ಬೇಯಿಸಿದ 1 ಮೊಟ್ಟೆಯನ್ನ ಬೇಕಿದ್ರೂ ಸೇವಿಸಬಹುದು.. ಆದ್ರೆ ಆಮ್ಲೇಟ್ ಅಲ್ಲ..
ಸರಿಯಾಗಿ ರಾತ್ರಿ 7 -8 ಅಬ್ಬ್ಬಾ ಅಂದ್ರೆ 8.30 ರೊಳಗೆ ರಾತ್ರಿಯ ಊಟ ಮಾಡುವುದು ಬಹಳ ಉತ್ತಮ.
ರಾತ್ರಿಯ ಊಟ : ರಾತ್ರಿಯ ಊಟಕ್ಕೆ ತರಕಾರಿ ಸೂಪ್ ಗಳು ಅಂದ್ರೆ ಹಸಿವನ್ನ ಹೆಚ್ಚಿಸುವ ರೀತಿಯಲ್ಲಿ ಅಲ್ಲದೇ ತರಕಾರಿ ಭರಪೂರ ಪೌಷ್ಠಿಕಾಂಶ ಭರಪೂರವಾದಂತಹ ರೀತಿಯಲ್ಲಿ ಕುಂಬಳಕಾಯಿ ಅಥವ ಇತರೇ ಸೂಪ್ ಗಳನ್ನ ತಯಾರಿಸಿ ಸೇವನೆ ಮಾಡಿ..
ಇಲ್ಲದೇ ಹೋದಲ್ಲಿ ತರಕಾರಿ ಮಿಶ್ರಿತ ರೊಟ್ಟಿ ಸೇವಿಸಬಹುದು. ಒಂದು ಅಥವ 2..
ಇದು ಆಗದೇ ಇದ್ದಲ್ಲಿ ಅನ್ನ ಅಥವ ನುಚ್ಚು ಅಕ್ಕಿ ಹಾಕದೇ ಮಾಡಿದ ಮುದ್ದೆ ಸೇವಿಸಿ
ಇಲ್ಲ ರಾಗಿ ಗಂಜಿಯನ್ನೂ ಸೇವಿಬಹುದು.. ಈರುಳ್ಳಿ ಜೊತೆಗೆ ಸೇರಿಸಿ
ನಂತರ ತಕ್ಷಣ ಹೋಗಿ ಮಲಗಿಕೊಳ್ಳಬೇಕಿ.. ಯಾಕೆಂದರೆ ನೀವು ಮಾಡಿದ ಅಹಾರ ಸರಿಯಾಗಿ ಜೀರ್ಣವಾಗದೇ ಮರುದಿನದ ದಿನಚರಿ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು.. ಹೀಗಾಗಿ ಸುಮ್ಮನೇ ಹಾಗೇ ಹೊರಗೆ 10 ನಿಮಿಷ ವಾಕ್ ಮಾಡಿ.. ನಂತರ ಸರಿಯಾಗಿ 10 – 11 ಗಂಟೆಯೊಳಗೆ ನಿದ್ದೆ ಮಾಡಲು ತೆರಳಿ..
ಈ ರೀತಿಯಾದ ಸಲಹೆಗಳನ್ನ ಸರಿಯಾಗಿ ಪಾಲಿಸಿ ನೋಡಿ.. ಖಂಡಿತ ಒಂದು ತಿಂಗಳ ಒಳಗೆ ತೂಕ ಕಡಿಮೆಯಾಗುತ್ತದೆ.. ಆದ್ರೆ ಇಷ್ಟೇ ಎಂದು ಹೇಳಲು ಸಾಧ್ಯವಿಲ್ಲ. ಅದು ನಿಮ್ಮ ಅನುಸರಿಸುವಿಕೆಯ ವಿಧಾನದ ಮೇಲೆಯೇ ನಿಂತಿರುತ್ತೆ.. ಆದ್ರೆ ಸರಿಯಾಗಿ ಈ ಪ್ಲಾನ್ ಅನುಸರಿಸಿದ್ರೆ, ವರ್ಕೌಟ್ ಮಾಡದೇ ಕೂಡ ಆರೋಗ್ಯಕರ ರೀತಿಯಲ್ಲಿ ಕೆಲವರು 3 -4 ಕೆಜಿ ಕರಗಿಸಿದ್ರೆ , ಇನ್ನೂ ಕೆಲವರು 5 ಕೆಜಿ ವರೆಗೂ ಕಡಿಮೆ ಮಾಡಿಕೊಳ್ಳಬಹುದು.. ಆದ್ರೆ ಇದಕ್ಕೂ ಮೀರಿ ಒಂದೇ ತಿಂಗಳಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬೇಡಿ.. ವರ್ಕೌಟ್ ಮಾಡದೇ ಅಷ್ಟು ತೂಕ ಕರಗಿದ್ರೂ ಅದು ಉತ್ತ,ಮ ಆರೋಗ್ಯದ ಸೂಚನೆಯಲ್ಲ..