ವಿಧಾನ ಪರಿಷತ್ ಚುನಾವಣೆ – ಮೈತ್ರಿ ಸುಳಿವು ನೀಡಿದ ಕುಮಾರಸ್ವಾಮಿ
ಪರಿಷತ್ತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಈಗಾಗಲೇ ಬಹಿರಂಗವಾಗಿ ಬೆಂಬಲ ಕೇಳಿದ್ದಾರೆ. ಕಾಂಗ್ರೆಸ್ ನಾಯಕರು ನಮಗೆ ಜೆಡಿಎಸ್ ಬೆಂಬಲ ಬೇಡ ಅಂತಾ ಹೇಳಿದ್ದಾರೆ. ಕರೆಯದೆ ಇರುವ ಮನೆಯವರ ಮನೆ ಬಾಗಿಲಿಗೆ ಹೋಗಲು ಆಗುತ್ತಾ ಹಾಗಾಗಿ ಸದ್ಯದಲ್ಲೆ ಬೆಂಬಲದ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಈ ಮೂಲಕ ವಿಧಾನ ಪರಿಷತ್ ನಲ್ಲಿ ಬಿಜೆಪಿಯಲ್ಲಿ ಬೆಂಬಲಿಸುವ ಬಗ್ಗೆ ಸುಳಿವು ನೀಡಿದರೆ.
ಮೋದಿ ಅವರು ದೇವೇಗೌಡರ ನ ಸತ್ಕರಿಸಿದ ಬಗ್ಗೆ ಮಾತನಾಡಿ ‘’ಮೋದಿ ಅವರಿಗೆ ದೇವೇಗೌಡರ ಮೇಲೆ ಅಪಾರ ವಿಶ್ವಾಸ ಹಾಗೂ ಗೌರವ ಇದೆ. ಹಾಸನದ ಐಐಟಿ ಸ್ಥಾಪನೆ ವಿಚಾರದಲ್ಲಿ ದೇವೇಗೌಡ್ರು ಮೋದಿ ಭೇಟಿ ಮಾಡಿದ್ದಾರೆ. ಮೈತ್ರಿ ಬಗ್ಗೆ ಮೋದಿ ಅವರ ಜತೆಗೆ ದೇವೇಗೌಡ್ರು ಮಾತುಕತೆ ನಡೆಸಿರುವ ಬಗ್ಗೆ ಮಾಹಿತಿ ಇಲ್ಲಾ. ದೇವೇಗೌಡ್ರು ದೆಹಲಿಯಿಂದ ಬಂದ ನಂತ್ರ ಮೈತ್ರಿ ಬಗ್ಗೆ ಚರ್ಚೆ ನಡೆದಿರುವ ಬಗ್ಗೆ ಮಾತುಕತೆ ಮಾಡಲಿದ್ದೇನೆ” ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.








