ಶಾಲಾ ತರಗತಿ ನಡೆಸಲು ಹೊಸ ಗೈಡ್ ಲೈನ್ಸ್ ತಂದ ಸರ್ಕಾರ
ಕೋವಿಡ್ ಮೂರನೇ ಅಲೆಯ ಬಿಸಿ ಮುಟ್ಟುತ್ತಿದ್ದಂತೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಹಲವು ಕ್ರಮಗಳನ್ನ ಕೈಗೊಳ್ಳುತ್ತಿದೆ. ಅದರಲ್ಲೂ ಶಾಲಾ ಕಾಲೇಜುಗಳಲ್ಲಿ ಕರೋನಾ ಮತ್ತೆ ಹೆಚ್ಚಳವಾಗುತ್ತಿರುವ ಕಾರಣಕ್ಕೆ ಸರ್ಕಾರ ಶಾಲೆಗಳನ್ ಓಪನ್ ಮಾಡಲು ಹೊಸ ನಿಯಮಗಳನ್ನ ಜಾರಿಗೆ ತಂದಿದೆ.
ಸರ್ಕಾರದ ಹೊಸ ಗೈಡ್ ಲೈನ್ ಗಳು ಇಂತಿವೆ.
- ಶಾಲೇಗೆ ಬರಲು ಪೋಷಕರ ಅನುಮತಿ ಕಡ್ಡಾಯ
- ಶಾಲೆಯಲ್ಲಿ ಮಕ್ಕಳು ಮಾಸ್ಕ್ ಹಾಕುವುದು ಕಡ್ಡಾಯ
- ಮಕ್ಕಳು ಭೌತಿಕ ತರಗತಿಗೆ ಹಾಜರಾಗುವುದು ಕಡ್ಡಾವಲ್ಲ
- ಶಾಲೆಗಳು ಆನಲೈನ್ ಹಾಜರಾತಿಯನ್ನೂ ಪರಿಗಣಿಸಬೇಕು
- ಶೇಕಡ 50 ರಷ್ಟು ಹಾಜರಾತಿಯೊಂದಿಗೆ ಮಾತ್ರ ತರಗತಿ ನಡೆಸಬೇಕು
- ಮಕ್ಕಳಿಗೆ ಒಂದು ದಿನದ ನಂತರ ಇನ್ನೊಂದು ದಿನಕ್ಕೆ ರಜ ಇರಲಿದೆ
- ಸೋಮವಾರದಿಂದ ಶುಕ್ರವಾರದ ವರಗೆ ಮಾತ್ರ ಶಾಲೆ ಓಪನ್
- ಶನಿವಾರ ಮತ್ತು ಭಾನುವಾರ ಶಾಲೇ ಸ್ಯಾನಿಟೈಸ್ ಮಾಡುವುದು
- ಮಕ್ಕಳಿಗೆ ಬಿಸಿನೀರಿನ ವ್ಯವಸ್ಥೆ ಮಾಡುವುದು
ಸೇರಿದಂತೆ ಹಲವು ಗೈಡ್ ಲೈನ್ಸ್ಗಳನ್ನ ಸರ್ಕಾರ ಜಾರಿಗೆ ತಂದಿದೆ.








