ಟ್ರೇಲರ್ ರಿಲೀಸ್ ಮಾಡಿದ ‘ಪುಷ್ಪ’ ಟೀಮ್ : ಕ್ಷಮೆ ಕೇಳಿದ್ದು ಯಾಕೆ..?
Pushpa trailer
ಸ್ಟೈಲಿಶ್ ಸ್ಟಾರ್, ಐಕಾನ್ ಸ್ಟಾರ್ ( Allu Arjun ) ಅಲ್ಲು ಅರ್ಜುನ್ ಅಭಿನಯದ, ಸುಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮ ‘ಪುಷ್ಪ’ ಚಿತ್ರದ ಟ್ರೈಲರ್ ಡಿಸೆಂಬರ್ 6ರ ಸಂಜೆ ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ..
ಮೈ ಝುಂ ಎನಿಸುವ ಸೌಂಡ್ ಕ್ವಾಲಿಟಿ , ರೋಮಾಂಚನ ಗೊಳಿಸುವಂತಹ ಅದ್ಭುತ ವಿಶುಯಾಲಿಟಿ, ದಟ್ಟಾರಣ್ಯದ ವೈಭವ ತೋರಿಸುವ ಜೊತೆಗೆ ರಕ್ತಚಂದನದ ಸ್ಮಗ್ಲಿಂಗ್ ಸುತ್ತ ರಕ್ತಸಿಕ್ತ ಕಥೆಯನ್ನ ಹೇಳ್ತಿದೆ ಟ್ರೇಲರ್.. ಆಕ್ಷನ್ ಸೀನ್ಸ್ ಮಸ್ತ್ ಆಗಿದೆ.. ಒಟ್ನಲ್ಲಿ ಯೂಟ್ಯೂಬ್ ನಲ್ಲಿ ಪುಷ್ಪದ ಟ್ರೇಲರ್ ಬೆಂಕಿ ಹಚ್ಚಿದೆ..
ಆದ್ರೆ ಸಿನಿಮಾ ತಂಡವು ಟ್ರೇಲರ್ ರಿಲೀಸ್ ಮಾಡಿ ಕ್ಷಮೆಯಾಚಿಸಿದೆ.. ಇದಕ್ಕೆ ಕಾರಣ ಡಿಸೆಂಬರ್ 6 ರಂದು , ಸಂಜೆ 6 ಗಂಟೆ 3 ನಿಮಿಷಕ್ಕೆ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಮೈತ್ರಿ ಮೂವಿ ಮೇಕರ್ಸ್ ಈ ಹಿಂದೆ ಘೋಷಣೆ ಮಾಡಿದ್ರು.. ಅದ್ರಂತೆ ಅಭಿಮಾನಿಗಳು ಸಹ ಟ್ರೇಲರ್ ಗಾಗಿ ಕಾದು ಕುಳಿತಿದ್ರು.. ಆದ್ರೆ ಹೇಳಿದ ಸಮಯಕ್ಕೆ ಟ್ರೇಲರ್ ರಿಲೀಸ್ ಆಗಲಿಲ್ಲ.. ಹೀಗಾಗಿ ಅಭಿಮಾನಿಗಳು ಬೇಸರಗೊಂಡಿದ್ರು..
ಟ್ರೈಲರ್ ನಲ್ಲೊಂದು ಮಸ್ತ್ ಪಂಚಿಂಗ್ ಡೈಲಾಗ್ ಕೂಡ ಇದೆ.. ಈ ಹಿಂದೆ ಟೀಸರ್ ನಲ್ಲಿ ತಗ್ಗದೆಲೇ ಅಮದಿದ್ದ ಅಲ್ಲು ಈಗ ‘ಪುಷ್ಪ’ ಅಂದ್ರೆ ಹೂವು ಅಂದ್ಕೊಂಡಿದ್ದೀರಾ..? ಬೆಂಕಿ ಅನ್ನುವ ಡೈಲಾಗ್ ಮೂಲಕ ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ್ದಾರೆ. ಆದ್ರೆ ತಾಂತ್ರಿಕ ಸಮಸ್ಯೆಗಳಿಂದಾಗಿ ಸಂಜೆ 6 ಗಂಟೆ 03 ನಿಮಿಷಕ್ಕೆ ರಿಲೀಸ್ ಆಗಬೇಕಿದ್ದ ‘ಪುಷ್ಪ’ ಟ್ರೈಲರ್ ವಿಳಂಬವಾಗಿದ್ದಕ್ಕೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಕೊನೆಗೆ ತಡವಾಗಿ ಟ್ರೇಲರ್ ರಿಲೀಸ್ ಆದ್ರೂ ಚಿಂದಿ ಉಡಾಯಿಸಿದೆ.. ಲೇಟಾಗಿಯೇ ಬಂದ್ರೂ ಲೇಟೆಸ್ಟ್ ಆಗಿ ಬಂದಿದೆ ಅಂತಾರಲ್ಲ ಹಾಗೆ..
‘ಲಹರಿ’ಯಿಂದ ಹೊರಬಂದ ರಿಕಿ ಕೇಜ್ ಆಲ್ಬಂ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನ..!
ಅಂದಹಾಗೆ ಇದೇ ಡಿಸೆಂಬರ್ 17 ರಂದು ‘ಪುಷ್ಪ’ ಬಿಡುಗಡೆಯಾಗಲಿದೆ.. ಯುಟ್ಯೂಬ್ ಚಾನೆಲ್ ತೆಲುಗು ಟ್ರೈಲರ್, ಗೋಲ್ಡ್ ಮೈನ್ ಟಲಿಪಿಲಂಸ್ ಚಾನೆಲ್ ನಲ್ಲಿ ಹಿಂದಿ, ಲೈಕಾ ಪ್ರೊಡಕ್ಷನ್ ಚಾನೆಲ್ ನಲ್ಲಿ ತಮಿಳು, ಅಲ್ಲು ಅರ್ಜುನ್ ಅವರ ಸ್ವಂತ ಯ್ಯೂಟೂಬ್ ಚಾನೆಲ್ ನಲ್ಲಿ ಕನ್ನಡ ಮತ್ತು ಇ4ಎಂಟರಟೆನ್ಮೆಂಟ್ ಚಾನೆಲ್ ಮಲಯಾಳಂ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿರುವ ಹಾಡುಗಳು ಎಲ್ಲಾ ಭಾಷೆಗಳಲ್ಲೂ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ್ದು, ಫಹಾದ್ ಫಾಸಿಲ್, ಡಾಲಿ ಧನಂಜಯ್, ಅನಸೂಯ ಭಾರದ್ವಾಜ್, ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.








