ADVERTISEMENT
Tuesday, August 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

‘ಲಹರಿ’ಯಿಂದ ಹೊರಬಂದ ರಿಕಿ ಕೇಜ್‌ ಆಲ್ಬಂ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನ..!

Mahesh M Dhandu by Mahesh M Dhandu
December 7, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

‘ಲಹರಿ’ಯಿಂದ ಹೊರಬಂದ ರಿಕಿ ಕೇಜ್‌ ಆಲ್ಬಂ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನ..!

ಲಹರಿ ಮ್ಯೂಸಿಕ್‌ ಸಂಸ್ಥೆ ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹೌದು, ಈಗಾಗಲೇ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಈ ಸಂಸ್ಥೆ, ಇದೀಗ ಮತ್ತೊಂದು ಸಂತೋಷದ ವಿಷಯಕ್ಕೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಬಿಡುಗಡೆಯಾದ ಆಲ್ಬಂವೊಂದು ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿದೆ. ಸಹಜವಾಗಿಯೇ ಲಹರಿ ಮ್ಯೂಸಿಕ್‌ ಸಂಸ್ಥೆಯ ಲಹರಿ ವೇಲು ಅವರಿಗೆ ಇದು ಖುಷಿಯಾಗಿದೆ. ಅಂದಹಾಗೆ, ಭಾರತೀಯ ಚಿತ್ರತಂಗದಲ್ಲೇ ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಹೊರಬಂದಿರುವ ಈ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಕ್ಕೆ ಮುಖ್ಯ ಕಾರಣ, ಅದು ಸಂಗೀತ ನಿರ್ದೇಶಕ, ಗಾಯಕ ರಿಕಿ ಕೇಜ್.‌

Related posts

ಕಿದ್ವಾಯಿ ಆಸ್ಪತ್ರೆಗೆ ಹೋಗಿ ನೋಡಿ, ಕಣ್ಣಲ್ಲಿ ನೀರಲ್ಲ ರಕ್ತ ಬರುತ್ತೆ : ಶಾಸಕರು ಹೇಳಿದ್ದನ್ನೆಲ್ಲಾ ಕೇಳೋಕೆ ಆಗಲ್ಲ,ಗುಟ್ಕಾ ಬ್ಯಾನ್ ವಾಪಸ್ ಇಲ್ಲ! ಆರೋಗ್ಯ ಸಚಿವ ಯುಟಿ ಖಾದರ್

ಕಿದ್ವಾಯಿ ಆಸ್ಪತ್ರೆಗೆ ಹೋಗಿ ನೋಡಿ, ಕಣ್ಣಲ್ಲಿ ನೀರಲ್ಲ ರಕ್ತ ಬರುತ್ತೆ : ಶಾಸಕರು ಹೇಳಿದ್ದನ್ನೆಲ್ಲಾ ಕೇಳೋಕೆ ಆಗಲ್ಲ,ಗುಟ್ಕಾ ಬ್ಯಾನ್ ವಾಪಸ್ ಇಲ್ಲ! ಆರೋಗ್ಯ ಸಚಿವ ಯುಟಿ ಖಾದರ್

August 18, 2026
ಅಲ್ಲಾಹನ ಹೊರತು ಯಾರನ್ನೂ ಪೂಜಿಸಲ್ಲ, ಎದ್ದು ನಿಲ್ಲುತ್ತೇನೆ ಆದರೆ ವಂದೇ ಮಾತರಂ ಹಾಡುವುದಿಲ್ಲ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ

ಅಲ್ಲಾಹನ ಹೊರತು ಯಾರನ್ನೂ ಪೂಜಿಸಲ್ಲ, ಎದ್ದು ನಿಲ್ಲುತ್ತೇನೆ ಆದರೆ ವಂದೇ ಮಾತರಂ ಹಾಡುವುದಿಲ್ಲ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ

August 18, 2026

ರಿಕಿ ಕೇಜ್‌ ಅವರ “ಡಿವೈನ್‌ ಟೈಡ್ಸ್‌” ಹೆಸರಿನ ಆಲ್ಬಂ ಇದೀಗ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಹಾಗೆ ನೋಡಿದರೆ, ರಿಕ್ಕಿ ಕೇಜ್‌ ಅವರಿಗೆ ಇದೇನು ಹೊಸದಲ್ಲ. ಕಳೆದ ಐದು ವರ್ಷಗಳ ಹಿಂದೆಯೇ ರಿಕಿ ಕೇಜ್‌ ಅವರು ಗ್ರ್ಯಾಮಿ ಅವಾರ್ಡ್‌ ಪಡೆದುಕೊಂಡಿದ್ದರು. ಈಗ ಎರಡನೇ ಬಾರಿಗೆ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ವಿಶೇಷವೆಂದರೆ, ರಿಕಿ ಕೇಜ್‌ ಅವರ “ಡಿವೈನ್‌ ಟೈಡ್ಸ್”‌ ಆಲ್ಬಂ ಪ್ರಪಂಚದ ಅದ್ಭುತ ಆಲ್ಬಂಗಳ ಸಾಲಿಗೆ ಸೇರಿದ್ದು, ಪ್ರಪಂಚಾದ್ಯಂತ ಬಂದ ಆಲ್ಬಂಗಳನ್ನು ಹಿಂದಕ್ಕೆ ತಳ್ಳಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಸಹಜವಾಗಿಯೇ ಇದು ಕನ್ನಡಕ್ಕೆ ಹೆಮ್ಮೆಯ ವಿಷಯವೇ ಸರಿ. ಯಾಕೆಂದರೆ, ರಿಕಿ ಕೇಜ್‌ ಕೂಡ ಮೂಲತಃ ಕರ್ನಾಟಕದವರು. ಅದರಲ್ಲೂ ದಕ್ಷಿಣ ಭಾರತದಲ್ಲೇ ಪ್ರಖ್ಯಾತಿ ಪಡೆದಿರುವ ಲಹರಿ ಮ್ಯೂಸಿಕ್‌ ಸಂಸ್ಥೆಯಡಿ ಈಗಾಗಲೆ 1.26  ಲಕ್ಷ ಆಲ್ಬಂ ಹಾಡುಗಳಿವೆ. ಸೂಪರ್‌ ಹಿಟ್‌ ಹಾಡುಗಳನ್ನು ಕೊಟ್ಟಿರುವ ಲಹರಿ ಮ್ಯೂಸಿಕ್‌ ಸಂಸ್ಥೆ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಈಗ ಇದೇ ಮೊದಲ ಸಲ “ಡಿವೈನ್‌ ಟೈಡ್ಸ್‌” ಆಲ್ಬಂ ಲಹರಿ ಸಂಸ್ಥೆಯಡಿ ಬಂದಿದ್ದು, ಆ ಆಲ್ಬಂ ಗ್ರ್ಯಾಮಿ ಅವಾರ್ಡ್‌ಗೆ ಹೋಗಿರೋದು ಸಂತಸದ ವಿಷಯ. ಭಾರತದಲ್ಲೇ ಮೊದಲ ಬಾರಿಗೆ ಲಹರಿ ಸಂಸ್ಥೆ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿರುವ ಬಗ್ಗೆ ಸ್ವತಃ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು ಅವರೇ ಸಂತೋಷಗೊಂಡಿದ್ದಾರೆ.

ಅಂದಹಾಗೆ, 64 ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್‌ಗೆ “ಡಿವೈನ್ ಟೈಡ್ಸ್” ಎಂಬ ಅದ್ಭುತ ಆಲ್ಬಂ ನಾಮನಿರ್ದೇಶನಗೊಂಡಿದೆ. ಸ್ಟೀವರ್ಟ್ ಕೋಪ್ಲ್ಯಾಂಡ್ (ಪೊಲೀಸ್) ಮತ್ತು ರಿಕಿ ಕೇಜ್ ‘ಡಿವೈನ್ ಟೈಡ್ಸ್’ ಗಾಗಿ ಗ್ರ್ಯಾಮಿ ನಾಮನಿರ್ದೇಶನವನ್ನು ಪಡೆದುಕೊಂಡಿದ್ದಾರೆ. ಈ ನಾಮನಿರ್ದೇಶನದ ಕುರಿತಂತೆ ರೆಕಾರ್ಡಿಂಗ್ ಅಕಾಡೆಮಿಯ ಸಿಇಒ ಹಾರ್ವೆ ಮೇಸನ್ ಜೂನಿಯರ್ ಅವರು ಘೋಷಣೆ ಮಾಡಿದ್ದಾರೆ. ಕಳೆದ 2015ರಲ್ಲಿ ರಿಕಿ ಕೇಜ್ ಅವರ “ವಿಂಡ್ಸ್ ಆಫ್ ಸಂಸಾರ” ಎಂಬ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಆದರ್ಶಗಳನ್ನು ಆಧರಿಸಿ, ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂ ಬಂದು ಅದು ಯಶಸ್ವಿಯಾಗಿತ್ತು. ಇದರೊಂದಿಗೆ ಯುಎಸ್‌ನ ಬಿಲ್‌ಬೋರ್ಡ್ ನ್ಯೂ ಏಜ್ ಆಲ್ಬಮ್‌ಗಳ ಚಾರ್ಟ್‌ನಲ್ಲಿ  ಮೊದಲ ಸ್ಥಾನದಲ್ಲಿತ್ತು. ಇದು ಭಾರತೀಯ ಮೂಲದ ವ್ಯಕ್ತಿಗೆ ಮೊದಲನೆ ಪ್ರಶಸ್ತಿ ಎಂಬುದು ವಿಶೇಷವಾಗಿತ್ತು. ರಿಕಿ ಗ್ರ್ಯಾಮಿ ಪ್ರಶಸ್ತಿ ಗೆದ್ದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಮತ್ತು 4 ನೇ ಭಾರತೀಯ. 5-ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರಾಗಿರುವ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರು ಪೌರಾಣಿಕ ಬ್ರಿಟಿಷ್ ರಾಕ್ ಗ್ರೂಪ್‌ನ ‘ದಿ ಪೋಲಿಸ್’ ಸ್ಥಾಪಕ ಮತ್ತು ಡ್ರಮ್ಮರ್ ಆಗಿದ್ದಾರೆ.

ಪ್ರಪಂಚದಾದ್ಯಂತದ ಕಲಾವಿದರನ್ನು ಒಳಗೊಂಡಿರುವ ಪ್ರಸ್ತುತ ಗ್ರ್ಯಾಮಿ ನಾಮನಿರ್ದೇಶಿತ ಸಂಗೀತ ಆಲ್ಬಂ ‘ಡಿವೈನ್ ಟೈಡ್ಸ್’ ನಮ್ಮ ನೈಸರ್ಗಿಕ ಪ್ರಪಂಚದ ವೈಭವ ಮತ್ತು ಜಾತಿಗಳ ಸ್ಥಿತಿ ಸ್ಥಾಪಕತ್ವಕ್ಕೆ ಗೌರವವಾಗಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಈ ಆಲ್ಬಂ 9 ಹಾಡುಗಳು ಮತ್ತು 8 ಸಂಗೀತ ವೀಡಿಯೊಗಳನ್ನು ಒಳಗೊಂಡಿದೆ, ಇದನ್ನು ಭಾರತೀಯ ಹಿಮಾಲಯದ ಸೊಗಸಾದ ಸೌಂದರ್ಯದಿಂದ ಸ್ಪೇನ್‌ನ ಹಿಮಾವೃತ ಕಾಡುಗಳವರೆಗೆ ವಿಶ್ವದಾದ್ಯಂತ ಚಿತ್ರೀಕರಿಸಲಾಗಿದೆ. ‘ಡಿವೈನ್ ಟೈಡ್ಸ್’ ಈಗಾಗಲೇ ಪ್ರಪಂಚದಾದ್ಯಂತದ ವಿವಿಧ ಉತ್ಸವಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ದಕ್ಷಿಣ ಭಾರತದ ಪ್ರಮುಖ ರೆಕಾರ್ಡ್ ಲೇಬಲ್ ಆದ ಲಹರಿ ಮ್ಯೂಸಿಕ್‌ನಿಂದ ಸಂಗೀತ ವೀಡಿಯೊಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ. 64 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಸಮಾರಂಭ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನವರಿ 31, 2022 ರಂದು ನಡೆಯಲಿದೆ. ಈ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಗುವುದು.

ಆರ್.ಕೆ ನಿರ್ದೇಶನದಲ್ಲಿ “ಕಾಣಿಯಾಗಿದ್ದಾಳೆ” ಹುಡುಕಿ ಕೊಟ್ಟವರಿಗೆ ಬಹುಮಾನ..!

“ದೃಶ್ಯ 2” ಗೆ ಸಿಕ್ತು ಯು\ಎ ಪ್ರಮಾಣ ಪತ್ರ

Tags: #saakshatvgrammmy awardslahari audiolahari veluricky kage album song
ShareTweetSendShare
Join us on:

Related Posts

ಕಿದ್ವಾಯಿ ಆಸ್ಪತ್ರೆಗೆ ಹೋಗಿ ನೋಡಿ, ಕಣ್ಣಲ್ಲಿ ನೀರಲ್ಲ ರಕ್ತ ಬರುತ್ತೆ : ಶಾಸಕರು ಹೇಳಿದ್ದನ್ನೆಲ್ಲಾ ಕೇಳೋಕೆ ಆಗಲ್ಲ,ಗುಟ್ಕಾ ಬ್ಯಾನ್ ವಾಪಸ್ ಇಲ್ಲ! ಆರೋಗ್ಯ ಸಚಿವ ಯುಟಿ ಖಾದರ್

ಕಿದ್ವಾಯಿ ಆಸ್ಪತ್ರೆಗೆ ಹೋಗಿ ನೋಡಿ, ಕಣ್ಣಲ್ಲಿ ನೀರಲ್ಲ ರಕ್ತ ಬರುತ್ತೆ : ಶಾಸಕರು ಹೇಳಿದ್ದನ್ನೆಲ್ಲಾ ಕೇಳೋಕೆ ಆಗಲ್ಲ,ಗುಟ್ಕಾ ಬ್ಯಾನ್ ವಾಪಸ್ ಇಲ್ಲ! ಆರೋಗ್ಯ ಸಚಿವ ಯುಟಿ ಖಾದರ್

by Shwetha
August 18, 2026
0

ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ ಆದೇಶವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಅತ್ಯಂತ...

ಅಲ್ಲಾಹನ ಹೊರತು ಯಾರನ್ನೂ ಪೂಜಿಸಲ್ಲ, ಎದ್ದು ನಿಲ್ಲುತ್ತೇನೆ ಆದರೆ ವಂದೇ ಮಾತರಂ ಹಾಡುವುದಿಲ್ಲ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ

ಅಲ್ಲಾಹನ ಹೊರತು ಯಾರನ್ನೂ ಪೂಜಿಸಲ್ಲ, ಎದ್ದು ನಿಲ್ಲುತ್ತೇನೆ ಆದರೆ ವಂದೇ ಮಾತರಂ ಹಾಡುವುದಿಲ್ಲ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ

by Shwetha
August 18, 2026
0

ನವದೆಹಲಿ: ಸ್ವಾತಂತ್ರ್ಯ ದಿನೋತ್ಸವದಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ಸೋನಿಯಾ ಗಾಂಧಿ ಅಡ್ಡಿಪಡಿಸಿದ್ದಾರೆ ಎಂಬ ಬಿಜೆಪಿ ಆರೋಪದ ಬೆನ್ನಲ್ಲೇ, ಕಾಂಗ್ರೆಸ್ ಸಂಸದ ಇಮ್ರಾನ್...

ಹನೂರು ಶೂಟೌಟ್ ಪ್ರಕರಣ ವಿಧಾನಸಭೆಯಲ್ಲಿ ಸದ್ದು; ‘ನಕಲಿ ಎನ್‌ಕೌಂಟರ್’ ಆರೋಪ

ಹನೂರು ಶೂಟೌಟ್ ಪ್ರಕರಣ ವಿಧಾನಸಭೆಯಲ್ಲಿ ಸದ್ದು; ‘ನಕಲಿ ಎನ್‌ಕೌಂಟರ್’ ಆರೋಪ

by Shwetha
August 18, 2026
0

ವಿಧಾನಸಭೆಯ ಸೋಮವಾರದ ಕಲಾಪ ಆರಂಭವಾಗುತ್ತಿದ್ದಂತೆ ಚಾಮರಾಜನಗರ ಜಿಲ್ಲೆಯ ಹನೂರು ಶೂಟೌಟ್ ಪ್ರಕರಣ ಪ್ರಮುಖ ಚರ್ಚೆಯ ವಿಷಯವಾಯಿತು. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸರ್ಕಾರದ ವಿರುದ್ಧ ಗಂಭೀರ...

ಸೊಳ್ಳೆ ಕಾಟಕ್ಕೆ ಕಂಗಾಲಾದ ದರ್ಶನ್: ನಿಯಮ ಮೀರಿ ಏನೂ ಮಾಡಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ ಡಿಜಿಪಿ ಅಲೋಕ್ ಕುಮಾರ್!

ಸೊಳ್ಳೆ ಕಾಟಕ್ಕೆ ಕಂಗಾಲಾದ ದರ್ಶನ್: ನಿಯಮ ಮೀರಿ ಏನೂ ಮಾಡಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ ಡಿಜಿಪಿ ಅಲೋಕ್ ಕುಮಾರ್!

by Shwetha
August 18, 2026
0

ಬೆಂಗಳೂರು: ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಈಗ ಜೈಲಿನಲ್ಲಿ ಹೊಸದೊಂದು...

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ; ಪ್ರಜ್ವಲ್ ರೇವಣ್ಣಗೆ ಡಿಜಿಪಿ ಅಲೋಕ್ ಕುಮಾರ್ ತರಾಟೆ?

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ; ಪ್ರಜ್ವಲ್ ರೇವಣ್ಣಗೆ ಡಿಜಿಪಿ ಅಲೋಕ್ ಕುಮಾರ್ ತರಾಟೆ?

by Shwetha
August 18, 2026
0

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಜೈಲು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram