ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಪೊಲೀಸರನ್ನೆ ತಳಿಸಿದ ಪುಂಡರು
ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದಕ್ಕೆ ಪೊಲೀಸರ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಯಲಹಂಕ ನ್ಯೂ ಟೌನ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಒನ್ ವೇನಲ್ಲಿ ಬಂದಂತ ವಾಹನ ಪೊಲೀಸರು ತಡೆದು ಪ್ರಶ್ನಿಸಿದ್ದಾರೆ. ಕಾರಿನಿಂದ ಕೆಳಗಿಳಿಯುವಂತೆ ತಿಳಿಸಿದ್ದಾರೆ. ಮಧ್ಯಪಾನ ಮಾಡಿರುವ ಅನುಮಾನ ವ್ಯಕ್ತವಾದ ಮೇಲೆ ಸವಾರರನ್ನು ಪ್ರಶ್ನಿಸಿದ್ದಕ್ಕೆ, ಪುಂಡರು ಪೊಲೀಸರ ಮೇಲೆ ಮನಸೋ ಇಚ್ಛೆ ತಳಿಸಿರೋ ಘಟನೆ ನಡೆದಿದೆ.
ಮಾಸ್ಕ್ ಹಾಕದೇ ಓಡಾಡುತ್ತಿದ್ದ ಸ್ಥಳೀಯ ಯುವಕರನ್ನು ತಡೆದ ಪೊಲೀಸರು, ವ್ಯಾಕ್ಸಿನೇಷನ್, ಮಾಸ್ಕ್ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಕೋಪಗೊಂಡ ಯುವಕರ ಗುಂಪು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಗಳ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ವೀಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.








