ಖ್ಯಾತ ತಮಿಳು ನಟ ಸಿಲಂಬರಸನ್ ಸಿಂಬು ಆಸ್ಪತ್ರಗೆ ದಾಖಲು…
ಖ್ಯಾತ ತಮಿಳು ಚಿತ್ರ ನಟ ಸಿಲಂಬರಸನ್ ಎಕೆಎ ಸಿಂಬು ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಯ ಪ್ರಕಾರ ಡಿಸೆಂಬರ್ 11 ರಂದು ನಟನಿಗೆ ತೀವ್ರವಾದ ವೈರಲ್ ಸೋಂಕು ಕಾಣಿಸಿಕೊಂಡಿದ್ದು, ಜ್ವರದಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಂಬು ಅವರಿಗೆ ಅವರು ಕೋವಿಡ್ -19 ಸೋಂಕು ತಗುಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ನಟನಿಗೆ ತೀವ್ರ ಜ್ವರ ಮತ್ತು ಗಂಟಲಿನ ಸೋಂಕು ಕಾಣಿಸಿಕೊಂಡಿದೆ. ಆದರೆ ಇದು ಕೋವಿಡ್ -19 ಅಲ್ಲ ಎಂದು ಹೇಳಲಾಗುತ್ತದೆ.
ಇತ್ತೀಚೆಗಷ್ಟೇ ಸಿಂಬು ತಮ್ಮ ಮುಂಬರುವ ಚಿತ್ರ, ಎಂದು ತಾನಿಂದು ಕಾದು ಚಿತ್ರಕ್ಕಾಗಿ ಕಾಡಿನಲ್ಲಿ ಬೀಡುಬಿಟ್ಟಿದ್ದರು. ಗೌತಮ್ ಮೆನನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ನವೆಂಬರ್ 25 ರಂದು ರಿಲೀಸ್ ಆಗಿದ್ದ ಸಿಂಬು ನಟನೆಯ ಮಾನಾಡು ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾಸನ್ಸ್ ಸಿಕ್ಕಿದೆ. ಟೈಮ್ ಲೂಪ್ ಪರಿಕಲ್ಪನೆಯ ರಾಜಕೀಯ ಥ್ರಿಲ್ಲರ್ ಕಥಾ ಹಂದರವನ್ನ ಚಿತ್ರ ಹೊಂದಿದೆ.








