ಗಗನಕ್ಕೇರಿದ ತರಕಾರಿ ಬೆಲೆ, ಬೆಂಗಳೂರಿನಲ್ಲಿ ತರಕಾರಿ ರೇಟ್ ಇಂತಿದೆ ನೋಡಿ………
ಅಕಾಲಿಕವಾಗಿ ಸುರಿದ ಮಳೆಯಿಂದ ರೈತರ ಬೆಳೆ ಕೈಗೆ ಸೇರುವ ಮುನ್ನವೇ ನಾಶವಾಗಿದೆ. ಇದರಿಂದ ಮಹಾನಗರಗಳಲ್ಲಿ ತರಕಾರಿಯ ಬೆಲೆ ಗಗನಕ್ಕೇರಿದೆ, ಬೆಂಗಳೂರಿನಂತರ ನಗರಗಳಲ್ಲಿ ಮಧ್ಯಮ ವರ್ಗದ ಜನರು ತರಕಾರಿಗಳನ್ನ ಕೊಳ್ಳಲಾಗದೆ ಹೈರಾಣಾಗಿದ್ದಾರೆ. ರೈತರಿಗೆ ಮುಂದಿನ ಫಸಲು ಮನೆಗೆ ಬರುವ ವರೆಗೂ ಈ ಪರಿಸ್ಥಿತಿ ಇದೇ ರೀತಿ ಮುಂದುವರೆಯಲಿದೆ ಎನ್ನಲಾಗುತ್ತಿದೆ. ದುಡಿದ ದುಡ್ಡೆಲ್ಲವು ತರಕಾರಿಗಳನ್ನ ಕೊಂಡುಕೊಳ್ಳುವುದಕ್ಕೆ ಖರ್ಚಾಗುತ್ತಿದೆ ಎಂದು ಸಾಮಾನ್ಯ ಜನತೆ ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಕುಸಿದಿದ್ದ ಟೊಮ್ಯಾಟೋ ಬೆಲೆ ಮತ್ತೆ ದಿಢೀರ್ ಏರಿಕೆಯಾಗಿದೆ. ನುಗ್ಗೆಕಾಯಿ ಪ್ರತಿ ಕೆ ಜಿ ಗೆ 350 ರುಪಾಯಿ ಮುಟ್ಟುತ್ತಿದೆ. ಇದು ಮದುವೇ ಸೀಜನ್ ಆಗಿರುವುದರಿಂದ ಹಲವು ಶುಭಕಾರ್ಯಗಳು ಈ ಮಾಸದಲ್ಲಿ ನಡೆಯುತ್ತವೆ. ಇದು ಸಹ ತರಕಾರಿಗ ರೇಟ್ ಹೆಚ್ಚಾಗಲು ಕಾರಣ.
ಬೆಂಗಳೂರಿನಲ್ಲಿ ತರಕಾರಿಗಳ ದರಗಳು ಹಿಂತಿವೆ..
ನುಗ್ಗೆಕಾಯಿ 200 -350 ರೂ
ಟೊಮ್ಯಾಟೋ 60 – 100 ರೂ
ಈರುಳ್ಳಿ 40 – 50 ರೂ
ಬೆಂಡೆಕಾಯಿ 60 – 100 ರೂ
ಬೀಟ್ರೂಟ್ 40 – 75 ರೂ
ಬದನೆಕಾಯಿ 30 – 114 ರೂ
ಕೊತ್ತಂಬರಿ ಸೊಪ್ಪು 30 – 40 ರೂ
ಬೀನ್ಸ್ 60 – 100 ರೂ
ಕ್ಯಾರೆಟ್ 70 – 90 ರೂ
ಹೀರೆಕಾಯಿ 50 – 85 ರೂ
ನಮಿಲು ಕೋಸು 40 – 100 ರೂಪಾಯಿ ಇದೆ….
ಡಿಸೆಂಬರ್ ತಿಂಗಳ ಮಧ್ಯ ಭಾಗದಲ್ಲೂ ಹಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ….








