ಕೊಹ್ಲಿಗೆ ದಕ್ಷಿಣಾಫ್ರಿಕಾ ಪ್ರವಾಸದ ಅತಿದೊಡ್ಡ ಸವಾಲು Kohli saaksha tv
ವಿರಾಟ್ ಕೊಹ್ಲಿಗೆ ದಕ್ಷಿಣಾಫ್ರಿಕಾ ಪ್ರವಾಸದ ಅತಿದೊಡ್ಡ ಸವಾಲು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟೀಂ ಇಂಡಿಯಾ ಇಂಗ್ಲೆಂಡ್, ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿಗೆ ಗೆದ್ದಿದೆ. ಆದರೆ… ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲೋದು ಅಷ್ಟು ಸುಲಭವಲ್ಲ. ಟೀಂ ಇಂಡಿಯಾ ಆಫ್ರಿಕಾ ನೆಲದಲ್ಲಿ ಒಂದೇ ಒಂದು ಸರಣಿ ಕೂಡ ಗೆದ್ದಿಲ್ಲ.
ವಾಸ್ತವವಾಗಿ ವಿರಾಟ್ ಕೊಹ್ಲಿಗೆ ದಕ್ಷಿಣಾಫ್ರಿಕಾ ಪ್ರವಾಸದ ಅತಿದೊಡ್ಡ ಸವಾಲು. ನಾಯಕನಾಗಿ ತನ್ನನ್ನು ತಾನು ಸಾಬೀತುಪಡಿಸಲು ಇದೇ ಕೊನೆಯ ಅವಕಾಶ.
ಬ್ಯಾಟರ್ ಆಗಿ ರನ್ಗಳನ್ನು ಸಾಧಿಸಬೇಕು.. ನಾಯಕನಾಗಿ ತಂಡವನ್ನು ವಿಜಯತೀರಗಳಿಗೆ ಸೇರಿಸಬೇಕು ಎಂದಿದ್ದಾರೆ.
ಅಲ್ಲದೇ ಬಿಸಿಸಿಐಗೆ ಉತ್ತರ ಕೊಡಲು ವಿರಾಟ್ ಗೆ ದಕ್ಷಿಣ ಆಪ್ರಿಕಾ ಪ್ರವಾಸ ಸೂಕ್ತ ಅವಕಾಶವಾಗಿದೆ ಎಂದು ದಾನೀಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನಾಡಲಿದೆ.
ಟೆಸ್ಟ್ ತಂಡವನ್ನು ವಿರಾಟ್ ಮುನ್ನಡೆಸಿದ್ದರೇ, ಏಕದಿನ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.