ಕಾಂಗ್ರೆಸ್ ಕಡೆ ಮುಖಮಾಡಿದ 16 ಜೆಡಿಎಸ್, 11 ಬಿಜೆಪಿ ಶಾಸಕರು! ಯಾರವರು..? BJP saaksha tv
2023ರ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಒಂದೂಕಾಲು ವರ್ಷವಷ್ಟೇ ಬಾಕಿ. ಆಗ್ಲೇ ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ.
ಜೆಡಿಎಸ್’ನ ಹಿರಿಯ ನಾಯಕ, ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡ, ತುಮಕೂರಿನ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್, ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿನಾಸ ಗೌಡ ಈಗಾಗ್ಲೇ ಕಾಂಗ್ರೆಸ್ ಕಡೆ ಮುಖ ಮಾಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್’ನಿಂದ ಸ್ಪರ್ಧಿಸುವುದು ಖಚಿತ.
ಇವರಷ್ಟೇ ಅಲ್ಲದೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯರಾಗಿದ್ದ ಎಸ್.ಆರ್ ಮನೋಹರ್, ಬೆಮೆಲ್ ಕಾಂತರಾಜು ಕೂಡ ಕಾಂಗ್ರೆಸ್ ಸೇರಿದ್ದಾರೆ. ಇನ್ನು ಜೆಡಿಎಸ್ ಮಾಜಿ ಶಾಸಕರಾದ ಮಧು ಬಂಗಾರಪ್ಪ, ಕೋನರೆಡ್ಡಿ ಕಾಂಗ್ರೆಸ್ ಸೇರಿದ್ದಾಗಿದೆ. ದೇವೇಗೌಡರ ಮಾನಸಪುತ್ರ ಎಂದೇ ಕರೆಸಿಕೊಳ್ಳುವ ಕಡೂರಿನ ಮಾಜಿ ಶಾಸಕ ವೈಎಸ್’ವಿ ದತ್ತಾ ಕೂಡ ಮುಂದಿನ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗ್ತಿದೆ.
ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರ್ತಿರೋ ಮಾತುಗಳ ಪ್ರಕಾರ ಜೆಡಿಎಸ್’ನಿಂದ 16 ಶಾಸಕರು ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಸೇರಲಿದ್ದಾರಂತೆ. ಅಷ್ಟೇ ಅಲ್ಲ, ಬಿಜೆಪಿಯ 11 ಶಾಸಕರೂ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್’ನಿಂದ ಸ್ಪರ್ಧಿಸುವ ಸಾಧ್ಯತೆಗಳಿವೆಯಂತೆ. ಈ ಗುಟ್ಟನ್ನು ಈಗಾಗ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರೋಕ್ಷವಾಗಿ ಬಿಟ್ಟುಕೊಟ್ಟಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ವೇಳೆ ಮಂಡ್ಯದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರೂ ಸೇರಿದಂತೆ ಬಹಳಷ್ಟು ಮಂದಿ ನಮ್ಮ ಸಂಪರ್ಕದಲ್ಲಿದ್ದು, ಮುಂದಿನ ದಿನಗಳಲ್ಲಿ ಅವರು ಯಾರು ಎಂಬುದನ್ನು ಬಹಿರಂಗ ಪಡಿಸುತ್ತೇನೆ ಎಂದಿದ್ರು.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಈಗಾಗ್ಲೇ ಒಳಗೊಳಗೇ ಕಾರ್ಯಾಚರಣೆ ನಡೆಸುತ್ತಿದ್ದು, ಕನಿಷ್ಠ ಒಂದು ಡಜನ್ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್’ಗೆ ಸೆಳೆಯುವ ಪ್ಲಾನ್ ಮಾಡಿದ್ದಾರೆ. ಬಿಜೆಪಿಯ ಪ್ರಭಾವೀ ಶಾಸಕರೂ ಡಿಕೆಶಿ ಸಂಪರ್ಕದಲ್ಲಿದ್ದಾರಂತೆ.
ಕಾಂಗ್ರೆಸ್ ಸೇರಲಿರುವ ಜೆಡಿಎಸ್ ಶಾಸಕರು
ಜಿ.ಟಿ ದೇವೇಗೌಡ (ಚಾಮುಂಡೇಶ್ವರಿ ಶಾಸಕ, ಮೈಸೂರು)
ಎಸ್.ಆರ್ ಶ್ರೀನಿವಾಸ್ (ಗುಬ್ಬಿ ಶಾಸಕ, ತುಮಕೂರು)
ಶ್ರೀನಿವಾಸ ಗೌಡ (ಕೋಲಾರ ಶಾಸಕ, ಕೋಲಾರ)
ಕಾಂಗ್ರೆಸ್ ಸೇರಲಿರುವ ಸಂಭಾವ್ಯ ಜೆಡಿಎಸ್ ಶಾಸಕರು
ಸಿ.ಎಸ್ ಪುಟ್ಟರಾಜು (ಮೇಲುಕೋಟೆ ಶಾಸಕ, ಮಂಡ್ಯ)
ರವೀಂದ್ರ ಶ್ರೀಕಂಠಯ್ಯ (ಶ್ರೀರಂಗಪಟ್ಟಣ ಶಾಸಕ, ಮಂಡ್ಯ)
ಸುರೇಶ್ ಗೌಡ (ನಾಗಮಂಗಲ ಶಾಸಕ, ಮಂಡ್ಯ)
ಕೆ.ಮಹಾದೇವ್ (ಪಿರಿಯಾಪಟ್ಟಣ ಶಾಸಕ, ಮೈಸೂರು)
ಆರ್.ಮಂಜುನಾಥ್ (ದಾಸರಹಳ್ಳಿ ಶಾಸಕ, ಬೆಂಗಳೂರು)
ಎ.ಟಿ ರಾಮಸ್ವಾಮಿ (ಅರಕಲಗೂಡು ಶಾಸಕ, ಹಾಸನ)
ಶಿವಲಿಂಗೇಗೌಡ (ಅರಸೀಕೆರೆ ಶಾಸಕ, ಹಾಸನ)
ಕಾಂಗ್ರೆಸ್ ಸೇರಿರುವ ಜೆಡಿಎಸ್ ಮಾಜಿ ಶಾಸಕರು
ಮಧು ಬಂಗಾರಪ್ಪ (ಸೊರಬ, ಶಿವಮೊಗ್ಗ)
ಎನ್.ಎಚ್ ಕೋನರೆಡ್ಡಿ (ನವಲಗುಂದ, ಧಾರವಾಡ)
ಕಾಂಗ್ರೆಸ್ ಸೇರಲಿರುವ ಸಂಭಾವ್ಯ ಬಿಜೆಪಿ ಶಾಸಕರು/ವಿಧಾನಪರಿಷತ್ ಸದಸ್ಯರು/ಮಾಜಿ ಶಾಸಕರು
ಕೆ.ಸಿ ನಾರಾಯಣ ಗೌಡ (ಕೆ.ಆರ್ ಪೇಟೆ ಶಾಸಕ, ಮಂಡ್ಯ)
ಸಿ.ಪಿ ಯೋಗೇಶ್ವರ್ (ಚನ್ನಪಟ್ಟಣ, ರಾಮನಗರ)
ಸುರೇಶ್ ಗೌಡ (ತುಮಕೂರು ಗ್ರಾಮಾಂತರ)









