ಅಂಡರ್ 19 ಟೀಂ ಇಂಡಿಯಾ ಕ್ಯಾಪ್ಟನ್ ಯಶ್ ಧೂಳ್ ಯಾರು..? Yash Dhull saaksha tv
ಮುಂದಿನ ಜನವರಿಯಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್ ಗೆ ಭಾರತ ತಂಡವನ್ನು ಬಿಸಿಸಿಐ ಭಾನುವಾರ ಪ್ರಕಟಿಸಿದೆ. ಬಿಸಿಸಿಐ ಆಯ್ಕೆ ಸಮಿತಿ 17 ಮಂದಿ ಆಟಗಾರರು ಮತ್ತು ಐವರು ಸ್ಟ್ಯಾಂಡಿಂಗ್ ಆಟಗಾರರ ತಂಡವನ್ನು ಪ್ರಕಟಿಸಿದೆ.
ಇನ್ನು ಅಂಡರ್-19 ವಿಶ್ವಕಪ್ ಭಾರತ ತಂಡದ ನಾಯಕರಾಗಿ ದೆಹಲಿ ಬ್ಯಾಟರ್ ಯಶ್ ಧೂಳ್, ವೈಸ್ ಕ್ಯಾಪ್ಟನ್ ಆಗಿ ಆಂಧ್ರ ಪ್ರದೇಶದ ಪ್ಲೇಯರ್ ಶೇಕ್ ರಶೀದ್ ಆಯ್ಕೆಯಾಗಿದ್ದಾರೆ.
ದೆಹಲಿ ಬ್ಯಾಟರ್ ಯಶ್ ಧೂಳ್ ಟೀಂ ಇಂಡಿಯಾದ ನಾಯಕರಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅವರ ಹೆಸರು ಟ್ರೆಂಡ್ ಆಗುತ್ತಿದೆ. ಯಶ್ ಧೂಳ್ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಲಾಗುತ್ತಿದೆ.
ಹಾಗಾದ್ರೆ ಯಾರೀ ಯಶ್ ಧೂಳ್..?
ದೆಹಲಿಯ ಜನಕ್ ಪುರಿಗೆ ಸೇರಿದ ಯಶ್ ಧೂಳ್ ದೆಹಲಿ ಅಂಡರ್-16, ಅಂಡರ್-19, ಇಂಡಿಯಾ ‘ಎ’ ಅಂಡರ್-19 ತಂಡವನ್ನು ಮುನ್ನಡೆಸಿದ್ದಾರೆ.
ಯಶ್ ಧೂಳ್ 11 ನೇ ವರ್ಷಕ್ಕೆ ಬಾಲ್ ಭವನ್ ಸ್ಕೂಲ್ ಅಕಾಡೆಮಿಗೆ ಸೇರಿ ಅಲ್ಲಿಂದಲೇ ತಮ್ಮ ಕನಸುಗಳನ್ನ ಸಕಾರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ಈ ಯುವ ಪ್ರತಿಭೆ ಇತ್ತೀಚೆಗೆ ನಡೆದ ವಿನೂ ಮನ್ಕಡ್ ಟ್ರೋಫಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ಅಲ್ಲದೇ ದೆಹಲಿ ಎಂಡ್ ಜಿಲ್ಲೆ ಕ್ರಿಕೆಟ್ ಅಸೋಸಿಯೇಷನ್ ಪರವಾಗಿ 5 ಪಂದ್ಯಗಳು ಆಡಿನ ಯಶ್ ಧೂಳ್ 302 ರನ್ ಗಳಿಸಿದ್ದಾರೆ.
ಇನ್ನು ಯಶ್ ಅವರ ತಂದೆ ಕಾಸ್ಮೆಟಿಕ್ ಬ್ರಾಂಡ್‌ನಲ್ಲಿ ಎಗ್ಜಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ತನ್ನ ಮಕ್ಕಳ ಭವಿಷ್ಯಕ್ಕಾಗಿ ಉದ್ಯೋಗವನ್ನು ತ್ಯಜಿಸಿದ್ದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಮಾತನಾಡಿದ ಅವರು, ಯಶ್ ಗೆ ಚಿಕ್ಕವಯಸ್ಸಿಂದಲೂ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ.
ಹೀಗಾಗಿ ಯಶ್ ಆಟವಾಡಲು ಕ್ರಿಕೆಟ್ ಕಿಟ್ ಅನ್ನು ತಂದುಕೊಂಡಿದ್ದೆ. ನಾನು ಅವನಿಗೆ ಅತ್ಯುತ್ತಮವಾದ ಇಂಗ್ಲಿಷ್ ವಿಲ್ಲೋ ಬ್ಯಾಟ್ ಅನ್ನು ಕೊಟ್ಟಿದ್ದೇನೆ.
ಯಶ್ ಕೆರಿಯರ್ ಗಾಗಿ ನಾವು ನಮ್ಮ ಖರ್ಚುಗಳನ್ನು ಕಡಿಮೆ ಮಾಡಿದ್ದೇವೆ. ನಮ್ಮ ತಂದೆ ಆರ್ಮಿ ಮ್ಯಾನ್ ಆಗಿದ್ದು, ಅವರಿಗೆ ಬರುವ ಪಿಂಚಣಿಯಿಂದ ಮನೆ ನಡೆಯುತ್ತಿದೆ.
ಆದ್ರೂ ಯಶ್ ತನ್ನ ಕೆರಿಯರ್ ನಲ್ಲಿ ಅದ್ಭುತವಾಗಿ ಮಿಂಚಬೇಕು ಅನ್ನುವುದೇ ನಮ್ಮ ಆಶಯ ಎಂದಿದ್ದಾರೆ.









