ಟೀಂ ಇಂಡಿಯಾದ ಬೆಸ್ಟ್ ವಿಕೆಟ್ ಕೀಪರ್ ಯಾರು..? wicket-keeper saaksha tv
ದಶಕಗಳ ಇತಿಹಾಸ ಇರುವ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಮಂದಿ ವಿಕೆಟ್ ಕೀಪರ್ ಗಳು ಬಂದಿದ್ದಾರೆ ಹೋಗಿದ್ದಾರೆ. ಹೀಗೆ ವಿಕೆಟ್ ಗಳ ಹಿಂದೆ ನಿಂತು ಭಾರತ ಪರ ಆಡಿರುವ ವಿಕೆಟ್ ಕೀಪರ್ ಗಳು ಸಾಕಷ್ಟು ದಾಖಲೆಗಳನ್ನ ಬರೆದಿದ್ದಾರೆ. ಅನಿವಾರ್ಯವಾಗಿ ಕೆಲವರು ಕೀಪಿಂಗ್ ಗ್ಲೌಸ್ ಹಾಕಿಕೊಂಡರು ಮೆಚ್ಚಿಕೊಳ್ಳುವಂತಹ ಪ್ರದರ್ಶನ ನೀಡಿದ್ದಾರೆ. ಇನ್ನೂ ಕೆಲವರು ಟೀಂ ಇಂಡಿಯಾಗೆ ಹಾಗೇ ಬಂದು ಸೈಲೆಂಟ್ ಆಗಿ ಮೆರೆಯಾಗಿದ್ದಾರೆ.
ಹಾಗಾದ್ರೆ ಟೀಂ ಇಂಡಿಯಾದ ಬೆಸ್ಟ್ ವಿಕೆಟ್ ಕೀಪರ್ ಯಾರು..? ಎಂಬ ಪ್ರಶ್ನೆ ಈಗ ಮುನ್ನಲೆಗೆ ಬಂದಿದೆ. ಸಾಮಾನ್ಯವಾಗಿ ಈ ಪ್ರಶ್ನೆಗೆ ಉತ್ತರ ಮಹೇಂದ್ರ ಸಿಂಗ್ ಧೋನಿ ಅಂತಲೇ ಇರುತ್ತದೆ. ಅದು ನಿಜವೂ ಹೌದು..!
ಯಾಕಂದರೇ ಧೋನಿ ಟೀಂ ಇಂಡಿಯಾದ ನಾಯಕರಾಗಿ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಅದೇ ರೀತಿ ವಿಕೆಟ್ ಗಳ ಹಿಂದೆ ನಿಂತು ಸಾಕಷ್ಟು ಸಾಧನೆಯನ್ನ ಕೂಡಿ ಮಾಡಿದ್ದಾರೆ.
ಧೋನಿ ಮೋಸ್ಟ್ ಸ್ಟಂಪಿಂಗ್ಸ್ ಇನ್ ಇಂಟರ್ ನ್ಯಾಷನಲ್ ಕ್ರಿಕೆಟ್ ನಲ್ಲಿ 195 ಸ್ಟಂಪ್ ಔಟ್ ಗಳ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೇ ವಿಕೆಟ್ ಹಿಂದೆ ನಿಂತು 829 ಮಂದಿ ಬ್ಯಾಟರ್ ಗಳನ್ನ ದೋನಿ ಪೆವಿಲಿಯನ್ ಗೆ ಕಳುಹಿಸಿಕೊಟ್ಟಿದ್ದಾರೆ. ಐಪಿಎಲ್ ನಲ್ಲೂ ಕಮಾಲ್ ಮಾಡಿರುವ ಧೋನಿ 152 ಮಂದಿಯ ಬಲಿ ಪಡೆದಿದ್ದಾರೆ. ಟಿ 20 ಕ್ರಿಕೆಟ್ ನಲ್ಲಿ 268 ಮಂದಿ ಬ್ಯಾಟರ್ ಗಳನ್ನ ಔಟ್ ಮಾಡಿದ್ದಾರೆ. ಹೀಗಾಗಿಯೇ ಎಂ.ಎಸ್.ಧೋನಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ದಿ ಬೆಸ್ಟ್ ವಿಕೆಟ್ ಕೀಪರ್ ಅನ್ನೋದ್ರರಲ್ಲಿ ಡೌಟ್ ಇಲ್ಲ.
ಆದ್ರೆ ಈ ಮಧ್ಯೆ ಭಾರತೀಯ ವಿಕೆಟ್ ಕೀಪರ್ ಗಳ ಬಗ್ಗೆ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಾತನಾಡುತ್ತಾ, ಧೋನಿ, ವೃದ್ಧಿಮಾನ್ ಸಹಾ, ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಅತ್ಯುತ್ತಮ ವಿಕೆಟ್ ಕೀಪರ್ ಗಳು ಎಂದಿದ್ದಾರೆ. ಅಲ್ಲದೇ ಈ ಮೂವರು ವಿಕೆಟ್ ಗಳ ಹಿಂದೆ ಪಾದರಸದಂತೆ ವ್ಯವಹಿಹರಿಸುತ್ತಾರೆ, ಈ ಮೂವರು ಅದ್ಭುತವಾದ ವಿಕೆಟ್ ಕೀಪರ್ ಗಳು, ಇವರಲ್ಲಿ ಧೋನಿ ಬೆಸ್ಟ್ ಎಂದಿದ್ದಾರೆ ಅಶ್ವಿನ್.
ಧೋನಿ ಕಷ್ಟಕರವಾದ ಸ್ಪಿನ್ ಎಸೆತಗಳನ್ನು ಸುಲಭವಾಗಿ ಹಿಡಿಯುತ್ತಾರೆ. ವಿಕೆಟ್ ಗಳ ಸುತ್ತಮುತ್ತ ಮಿಂಚಿನಂತೆ ಓಡಾಡುತ್ತಾರೆ ಎಂದು ಅಶ್ವಿನ್ ಹೇಳಿದ್ದಾರೆ. ಇದೇ ವೇಳೆ ದಿನೇಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಶ್ವಿನ್, ವೃದ್ಧಿಮಾನ್ ಸಹಾ ಧೋನಿಯಂತೆ ಪಾದರಸದಂತೆ ಇರುತ್ತಾರೆ. ಸಹಾ ವಿಕೆಟ್ ಕೀಪಿಂಗ್ ಟಾಪ್ ಕ್ಲಾಸ್ ಎಂದಿದ್ದಾರೆ.
ಇನ್ನು ಅಶ್ವಿನ್ ಅವರ ಪ್ರಕಾರ ಭಾರತದ ಬೆಸ್ಟ್ ವಿಕೆಟ್ ಕೀಪರ್ ಗಳ ಪಟ್ಟಿಯಲ್ಲಿ ಈಗಿನ ರಿಷಬ್ ಪಂತ್ ಕೂಡ ಸ್ಥಾನ ಪಡೆದಿದ್ದಾರೆ.









