2016ರ ಪನಾಮಾ ಪೇಪರ್ಸ್ ಲೀಕ್ ಕೇಸ್ ನಲ್ಲಿ ಮಾಜಿ ವಿಶ್ವ ಸುಂದರಿ , ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಹೆಸರು ಕೇಳಿ ಬಂದಿತ್ತು.. ಐಶ್ವರ್ಯಾ ರೈ, ನಕಲಿ ವಿದೇಶದಲ್ಲಿ ನಕಲಿ ಸಂಸ್ಥೆ ಸ್ಥಾಪಿಸಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ತೆರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ವರ್ಷಗಳ ಬಳಿಕ ಐಶ್ವರ್ಯ ರೈ ಅವರು ಮತ್ತೆ ವಿಚಾರಣೆ ಎದುರಿಸಿದ್ದು , ಈ ಕುರಿತು ಅವರ ಅತ್ತೆ ಹಿರಿಯ ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್ ಆಕ್ರೋಶ ಹೊರಹಾಕಿದ್ದಾರೆ.. ಪನಾಮಾ ಪೇಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದೂರು ದಾಖಲಿಸಿಕೊಂಡಿದ್ದು ಐಶ್ವರ್ಯಾ ರೈಗೆ ನೊಟೀಸ್ ಜಾರಿ ಮಾಡಿತ್ತು. ಸತತ 5 ಗಂಟೆಗಳ ಕಾಲ ದೆಹಲಿಯ ಕಚೇರಿಯಲ್ಲಿ ಐಶ್ವರ್ಯಾ ರೈಗೆ ಪ್ರಶ್ನೆಗಳನ್ನ ವಿಚಾರಣೆಗೆ ಒಳಪಡಿಸಲಾಗಿತ್ತು..
ವಿಚಾರಣೆ ನಡೆಯುತ್ತಿದ್ದಾಗಲೇ ಮತ್ತೊಂದು ಕಡೆ ಸಂಸತ್ತಿನಲ್ಲಿ ಅದೇ ಸಮಯದಲ್ಲಿ ಜಯಾ ಬಚ್ಚನ್ ಕೆಂಡಾಮಂಡಲವಾಗಿ ಬಿಜೆಪಿಗೆ ಶಾಪ ಹಾಕಿದರು. ಉಚ್ಛಾಟಿತ ಸದಸ್ಯರ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು, ಜಯಾ ಬಚ್ಚನ್ ಮಾತನಾಡಿ , ಈ ವೇಳೆ ಬಿಜೆಪಿಯ ಸದಸ್ಯರೊಬ್ಬರು ಜಯಾ ಬಚ್ಚನ್ ಬಗ್ಗೆ ವೈಯಕ್ತಿಕ ಹೇಳಿಕೆಯೊಂದನ್ನು ಹರಿಬಿಟ್ಟರು, ಇದು ಜಯಾ ಬಚ್ಚನ್ ಅವರನ್ನು ಕೆರಳಿಸಿತು. ಏನು ಹೇಳುತ್ತಿದ್ದೀರಿ ನೀವು, ಎದ್ದು ನಿಂತು ಮಾತನಾಡುವ ಧೈರ್ಯ ಇಲ್ಲವಾ ನಿಮಗೆ ಎಂದು ಆಕ್ರೋಶಗೊಂಡರು.
ಬಳಿಕ ಸ್ಪೀಕರ್ ಅನ್ನು ಉದ್ದೇಶಿಸಿ ಮಾತನಾಡಿದ ಜಯಾ ಬಚ್ಚನ್, ಆ ವ್ಯಕ್ತಿ ನನ್ನ ವಿರುದ್ಧ ವೈಯಕ್ತಿಕ ಹೇಳಿಕೆ ನೀಡಿದ್ದಾನೆ. ನೀವು ಆ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಿ. ನೀವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಕಿಡಿಕಾರಿದ್ದಾರೆ. ಆದರೆ ಸ್ಪೀಕರ್ ಜಯಾ ಅವರ ಮಾತಿಗೆ ಕಿವಿಕೊಡದೇ ಅಲಕ್ಷ್ಯ ತೋರಿಸಿದ್ದಾರೆ. ಆಗ ಮತ್ತೆ ಸಿಟ್ಟಾಗಿರುವ ಜಯಾ ಬಚ್ಚನ್, ವಿಪಕ್ಷದ ಸದಸ್ಯರ ಕತ್ತು ಹಿಸುಕಿಬಿಡಿ, ನೀವೊಬ್ಬರೇ ಆಡಳಿತ ಮಾಡಿ ಎಂದು ಕಿಡಿಕಾರಿದ್ದಾರೆ.. ಇದಕ್ಕೆ ಬಿಜೆಪಿ ಸದಸ್ಯರು ನಕ್ಕಿದ್ದಾರೆ. ಆಗ ಮತ್ತಷ್ಟು ರೊಚ್ಚಿಗೆದ್ದ ಜಯಾ ಬಚ್ಚನ್, ನಿಮ್ಮ ಕೆಟ್ಟ ದಿನಗಳು ಅತ್ಯಂತ ಬೇಗ ಬರುತ್ತವೆ, ಇದು ನನ್ನ ಶಾಪ ಎಂದಿದ್ದಾರೆ..
ಎಮಿಕ್ ಕಾರ್ಪೊರೇಷನ್ಸ್ ಹೆಸರಿನ ಸಂಸ್ಥೆಯು ಬ್ರಿಟೀಷ್ ವರ್ಜಿನ್ ಐಲೆಂಡ್ಸ್ನಲ್ಲಿ ನೊಂದಾವಣೆ ಆಗಿದ್ದು, ಈ ಸಂಸ್ಥೆಯ ನಿರ್ದೇಶಕಿಯಾಗಿ ಐಶ್ವರ್ಯಾ ರೈ ಇದ್ದರು. ಆದರೆ 2004 ರ ಬಳಿಕ ಐಶ್ವರ್ಯಾ ರೈ ಹೆಸರನ್ನು ನಿರ್ದೇಶಕಿ ಸ್ಥಾನದಿಂದ ಶೇರ್ ಹೋಲ್ಡರ್ ಎಂದು ಬದಲಾವಣೆ ಮಾಡಲಾಯಿತು. ಈ ಸಂಸ್ಥೆಯ ಇತರ ಆಡಳಿತ ವರ್ಗಗಳ ಹುದ್ದೆಯಲ್ಲಿ ಐಶ್ವರ್ಯಾ ರೈ ಅವರ ಕುಟುಂಬ ಸದಸ್ಯರೇ ಇದ್ದರು. ನಂತರ ಇವರ ಹೆಸರುಗಳು ಸಹ ಶೇರ್ ಹೋಲ್ಡರ್ಸ್ ಎಂದು ಬದಲಾಯಿತು. ಈ ಬಗ್ಗೆ ಪನಾಮಾ ಪೇಪರ್ಸ್ ಲೀಕ್ ಆದಾಗ ಬಹಿರಂಗವಾಗಿತ್ತು. ಈಗ ಇಡಿ ಸಹ ಇದೇ ವಿಷಯವಾಗಿ ಐಶ್ವರ್ಯಾ ರೈ ಅವರನ್ನು ಪ್ರಶ್ನೆ ಮಾಡಿದೆ.
6 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಶಕೀಲಾ ಕಮ್ ಬ್ಯಾಕ್..!
2004 ರ ವರೆಗೆ ಯಾವ ಭಾರತೀಯರು ಸಹ ವಿದೇಶದಲ್ಲಿ ಹಣ ಹೂಡಿಕೆ ಮಾಡುವಂತಿರಲಿಲ್ಲ. 2004 ರ ನಂತರ RBI ಈ ನಿಯಮವನ್ನು ಬದಲಾಯಿಸಿ, ವಿದೇಶಿ ಸಂಸ್ಥೆಗಳ ಶೇರು ಖರೀದಿಗೆ ಭಾರತೀಯರಿಗೆ ಅವಕಾಶ ನೀಡಿತು. ಆದರೆ ಯಾವುದೇ ಸಂಸ್ಥೆಯನ್ನು ಭಾರತೀಯರು ವಿದೇಶದಲ್ಲಿ ಹೊಂದುವಂತಿರಲಿಲ್ಲ. ಆದರೆ ಐಶ್ವರ್ಯಾ ರೈ ಹಾಗೂ ಇತರರು ವಿದೇಶದಲ್ಲಿ ತಮ್ಮದೇ ಸಂಸ್ಥೆಗಳನ್ನು ಹೊಂದಿದ್ದರು. ಅದರಲ್ಲಿಯೂ ತೆರಿಗೆ ಕಳ್ಳರ ಸ್ವರ್ಗ ಎಂದು ಕರೆಯಲ್ಪಡುವ ಬ್ರಿಟೀಷ್ ವರ್ಜಿನ್ ಐಸ್ಲ್ಯಾಂಡ್ನಲ್ಲಿ ನಕಲಿ ಸಂಸ್ಥೆಗಳನ್ನು ಸ್ಥಾಪಿಸಿ ಆ ಸಂಸ್ಥೆಗೆ ತಮ್ಮ ಹಣ ರವಾನೆ ಮಾಡಿ, ಅಕ್ರಮ ಹಾದಿಯಲ್ಲಿ ತೆರಿಗೆ ಉಳಿಸಿದ್ದರು. ಪನಾಮಾ ಪೇಪರ್ಸ್ನಿಂದ ಈ ಅಕ್ರಮಗಳು ಹೊರಬಿದ್ದವು. ಅಷ್ಟೇ ಅಲ್ಲ ಈ ಪ್ರಕರಣದಲ್ಲಿ ಭಾರತದ ಅನೇಕ ಪ್ರಭಾವಿಗಳ ಹೆಸರುಗಳು ಕೇಳಿ ಬಂದಿತ್ತು..








